• 8 ಸೆಪ್ಟೆಂಬರ್ 2024

ನಕಲಿ ಕ್ಯಾನ್ಸರ್‌ ಔಷಧ ಮಾರಾಟ ಜಾಲ ಪತ್ತೆ: 8 ಮಂದಿ ಬಂಧನ

 ನಕಲಿ ಕ್ಯಾನ್ಸರ್‌ ಔಷಧ ಮಾರಾಟ ಜಾಲ ಪತ್ತೆ: 8 ಮಂದಿ ಬಂಧನ
Digiqole Ad

ನಕಲಿ ಕ್ಯಾನ್ಸರ್‌ ಔಷಧ ಮಾರಾಟ ಜಾಲ ಪತ್ತೆ: 8 ಮಂದಿ ಬಂಧನ

ನವದೆಹಲಿ: ನಕಲಿ ಕ್ಯಾನ್ಸರ್‌ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ ದೆಹಲಿ ಅಪರಾಧ ವಿಭಾಗ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ… ಮೂವರು ಬಿಜೆಪಿ ಸಂಸದರು, ಮಾಜಿ ಸಿಎಂ ಕಾಂಗ್ರೆಸ್‌ ಸಂಪರ್ಕದಲ್ಲಿ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡಗೆ ಕಾಂಗ್ರೆಸ್‌ ಆಹ್ವಾನ ನೀಡಿದ ಡಿಕೆಶಿ

ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾಹಿತಿ ಹಂಚಿಕೊಂಡಿರುವ ಅಪರಾಧ ವಿಭಾಗದ ವಿಶೇಷ ಪೊಲಿಸ್‌ ಆಯುಕ್ತೆ ಶಾಲಿನಿ ಸಿಂಗ್‌, ‘ಮಾರುಕಟ್ಟೆಯಲ್ಲಿ ನಕಲಿ ಕ್ಯಾನ್ಸರ್‌ ಔಷಧ ಮಾರಾಟವಾಗುತ್ತಿದ್ದ ಖಚಿತ ಮಾಹಿತಿ ಬಂದಿತ್ತು.

ಇದನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ಇಬ್ಬರು ಆರೋಪಿಗಳು ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಾರೆ, ಕ್ಯಾನ್ಸರ್ ಔಷಧಿಯನ್ನು ಬಳಸಿದ ನಂತರ ಖಾಲಿ ಬಾಟಲಿಗಳನ್ನು ವಿಲೇವಾರಿ ಮಾಡುವ ಬದಲು ಅದನ್ನು ₹ 4000-₹5000ಗೆ ಮಾರಾಟ ಮಾಡುತ್ತಿದ್ದರು. ಅದನ್ನು ಖರೀದಿಸುತ್ತಿದ್ದವರಿಗೂ ವೈದ್ಯಕೀಯ ವೃತ್ತಿಯೊಂದಿಗೆ ನಂಟಿದೆ ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ…. ಕಡಬ: ಶೌರ್ಯ ಘಟಕದ ಸಾಮಾಜಿಕ ಚಟುವಟಿಕೆಗಳು ಪ್ರತಿಯೊಬ್ಬರ ಮನೆ ಮನಗಳಿಗೂ ತಲುಪಲಿ ..ಪುಲಸ್ಯ ರೈ ಅಭಿಮತ

ಮೋತಿ ನಗರದಲ್ಲಿ 2 ಫ್ಲಾಟ್‌ಗಳಲ್ಲಿ ಖಾಲಿ ಬಾಟಲಿಗಳಲ್ಲಿ ನಕಲಿ ಔಷಧ ತುಂಬಿಸುವ ಕೆಲಸ ನಡೆಯುತ್ತಿತ್ತು. ಅವರು ₹100ರ ನಕಲಿ ಇಂಜೆಕ್ಷನ್ ದ್ರವಗಳನ್ನು ಖರೀದಿಸಿ ಕ್ಯಾನ್ಸರ್ ಔಷಧದ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು. ಈ ನಕಲಿ ಔಷಧ ಮಾರಾಟ ಜಾಲ ಬಿಹಾರದವರೆಗೂ ವಿಸ್ತರಿಸಿದೆ. ಅಲ್ಲಿಗೂ ನಮ್ಮ ತಂಡ ಹೋಗಿದ್ದು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

www.goldfactorynews.com
Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

 

Digiqole Ad

ಪ್ರವೀಣ ಕಾಸರಗೋಡು

https://goldfactorynews.com

ಈ ಸುದ್ದಿಗಳನ್ನೂ ಓದಿ