• 8 ಸೆಪ್ಟೆಂಬರ್ 2024

ಬಂಟ್ವಾಳದಲ್ಲಿ 200ನೇ ವರ್ಷದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ

 ಬಂಟ್ವಾಳದಲ್ಲಿ 200ನೇ ವರ್ಷದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ
Digiqole Ad

ಬಂಟ್ವಾಳದಲ್ಲಿ 200ನೇ ವರ್ಷದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ

ಶ್ರೀ ಕಾಶೀ ಮಠಾಧೀಶರು ಭಾಗಿಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬ್ರಹ್ಮರಥಕ್ಕೆ ಈ ಬಾರಿ 200ನೇ ವರ್ಷಾಚರಣೆ ಸಂಭ್ರಮವಾಗಿದ್ದು, ಸಂಜೆ ಶ್ರೀ ಕಾಶೀ ಮಠಾಧೀಶ ಶ್ರೀ ಶ್ರೀ ಶ್ರೀ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ದೇವರು ಬ್ರಹ್ಮರಥಾರೋಹಣಗೊಂಡು ರಾತ್ರಿ ಬ್ರಹ್ಮರಥೋತ್ಸವ ನೆರವೇರಿತು. ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡು ಮಲ್ಲಿಗೆ ಪ್ರಿಯನಾದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿಗೆ ಹೆಚ್ಚಿನ ಪ್ರಮಾಣದಲ್ಲಿ ಮಲ್ಲಿಗೆಯನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಬ್ರಹ್ಮರಥಕ್ಕೆ 200ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಬಂಟ್ವಾಳ ಪೇಟೆಯನ್ನು ವಿದ್ಯುತ್‌ ದೀಪಗಳಿಂದ, ರಥವನ್ನು ಫಲಪುಷ್ಪಗಳಿಂದ ಸಿಂಗರಿಸಿ ಅಲಂಕಾರ ಮಾಡಲಾಗಿತ್ತು .

ಈ ಸುದ್ದಿ ಓದಿದ್ದೀರಾ?:ಕ್ಲಾಸ್ ರೂಂಗೂ ಬಂತು Al ಟೀಚರ್

ಶನಿವಾರ ಬೆಳಗ್ಗೆ ಮೊಕ್ತೇಸರರ,ಮತ್ತು ಹತ್ತು ಸಮಸ್ತರ ಪ್ರಾರ್ಥನೆ, ಮಹಾ ಪೂಜಾರಂಭ, ಅಭಿಷೇಕ, ಮಧ್ಯಾಹ್ನ ಯಜ್ಞಾರಂಭ, ಸಂಜೆ ಯಜ್ಞಾರತಿ, ಪೂರ್ಣಾಹುತಿ ಬಲಿ, ಸಂಜೆ ಬ್ರಹ್ಮರಥಾರೋಹಣ, ಸಮಾರಾಧನೆ, ತಡರಾತ್ರಿ ಬ್ರಹ್ಮರಥೋತ್ಸವ, ವಸಂತ ಪೂಜೆ, ಏಕಾಂತ ಸೇವೆ ನಡೆಯಿತು.

ಈ ಶುಭ ಸಂದರ್ಭದಲ್ಲಿ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಆಡಳಿತ ಮೊಕ್ತೇಸರ ಅಶೋಕ ಶೆಣೈ, ಮೊಕ್ತೇಸರರಾದ ಭಾಮಿ ನಾಗೇಂದ್ರನಾಥ ಶೆಣೈ, ಬಿ. ಸುರೇಶ್‌ ವಿ. ಬಾಳಿಗಾ ಮೊದಲಾದ ವರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು.

ಈ ಸುದ್ದಿ ಓದಿದ್ದೀರಾ?:ತುಳು ಭಾಷೆಗೆ ಮನ್ನಣೆ- ಹೋರಾಟಕ್ಕೆ ಸಜ್ಜಗಿ ತುಳು ಭಾಷಾ ಸಂಘಟನೆಗಳು

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ