• 8 ಸೆಪ್ಟೆಂಬರ್ 2024

ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಹೋಮ ನಡೆಸಿದ ಅಮೆರಿಕದ ತಂತ್ರಜ್ಞರು.

 ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಹೋಮ ನಡೆಸಿದ ಅಮೆರಿಕದ ತಂತ್ರಜ್ಞರು.
Digiqole Ad

ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಹೋಮ ನಡೆಸಿದ ಅಮೆರಿಕದ ತಂತ್ರಜ್ಞರು.

ವಾಷಿಂಗ್ಟನ್‌: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೆಲುವು ಸಿಗಲಿ ಎಂದು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಐಟಿ ತಂತ್ರಜ್ಞರು ಸಿಲಿಕಾನ್ ವ್ಯಾಲಿಯಲ್ಲಿರುವ ಹಿಂದೂ ದೇವಾಲಯದಲ್ಲಿ ಸೋಮವಾರ ಹೋಮ ಹವನ ನಡೆಸಿದರು.

ಈ ಸುದ್ದಿಯನ್ನು ಓದಿದ್ದೀರಾ.?ಎಚ್ಚರ ! ಈ ಸಂದೇಶದ ಬಗ್ಗೆ ಜಾಗ್ರತೆ ಇರಲಿ!

ಸಾಗರೋತ್ತರ ಬಿಜೆಪಿ ಗೆಳೆಯರ ಬಳಗ (OFBJP)ವು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಬೇ ಪ್ರದೇಶದಲ್ಲಿ ಆಯೋಜಿಸಿದ್ದ ಹವನ ಕಾರ್ಯಕ್ರಮದಲ್ಲಿ ಬಳಗದ ಸದಸ್ಯರು ಸಾಕಷ್ಟು ಸಂಖ್ಯೆಯಲ್ಲಿ ಸೇರಿ ಮೋದಿ ಗೆಲುವಿಗಾಗಿ ಪ್ರಾರ್ಥಿಸಿದರು. ಹವನ ಸಂದರ್ಭದಲ್ಲಿ ‘ಅಬ್‌ಕೀ ಬಾರ್ 400 ಪಾರ್’ ಘೋಷಣೆಯನ್ನು OFBJP ಸದಸ್ಯರು ಕೂಗಿದರು. ‘ಈ ಧಾರ್ಮಿಕ ಸಂಘಟನೆಯು ನಾವು ಪ್ರಜಾಪ್ರಭುತ್ವದಲ್ಲಿ ಇಟ್ಟಿರುವ ಆಳವಾದ ನಂಬಿಕೆ ಹಾಗೂ ಭಾರತದಲ್ಲಿ ಮುಂದುವರಿದಿರುವ ಆಡಳಿತಾತ್ಮಕ ಸುಧಾರಣೆ ಮತ್ತು ಪ್ರಗತಿಯ ಪ್ರತಿಫಲನವಾಗಿದೆ’ ಎಂದು ಹೇಳಿದ್ದಾರೆ. ಈ ಬಾರಿ ಚುನಾವಣೆಯು ಏ. 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 370 ಮತ್ತು ಎನ್‌ಡಿಎ 400ರ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಪ್ರಧಾನಿ ಮೋದಿ ಅವರು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರ ಪರಿಚಯ 

‘ಇದು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ. ಬದಲಿಗೆ ನಮ್ಮ ಬೇಡಿಕೆಗಳ ಈಡೇರಿಕೆಗೆ ಸಲ್ಲಿಸುತ್ತಿರುವ ಸಾಮೂಹಿಕ ಆವಾಹನೆಯಾಗಿದೆ. ಅನಿವಾಸಿ ಭಾರತೀಯರು ಹಾಗೂ ದೊಡ್ಡ ಸಂಖ್ಯೆಯಲ್ಲಿ ನೆಲೆಸಿರುವ ಭಾರತೀಯರ ಪ್ರಾರ್ಥನೆಯಾಗಿದೆ’ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ