• 8 ಸೆಪ್ಟೆಂಬರ್ 2024

ಸಂಸದನಾದ ಆರೇ ತಿಂಗಳಲ್ಲಿ ಸಂಸತ್ತಿನಲ್ಲಿ ಭಾಷಣ : ಕೋಟ ಚಾಲೆಂಜ್.

 ಸಂಸದನಾದ ಆರೇ ತಿಂಗಳಲ್ಲಿ ಸಂಸತ್ತಿನಲ್ಲಿ ಭಾಷಣ : ಕೋಟ ಚಾಲೆಂಜ್.
Digiqole Ad

ಸಂಸದನಾದ ಆರೇ ತಿಂಗಳಲ್ಲಿ ಸಂಸತ್ತಿನಲ್ಲಿ ಭಾಷಣ : ಕೋಟ ಚಾಲೆಂಜ್.

ಉಡುಪಿ: ತನ್ನ ಭಾಷಾ ಜ್ಞಾನದ ಬಗ್ಗೆ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾಡಿರುವ ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು ಸಂಸದನಾದ ಆರೇ ತಿಂಗಳಲ್ಲಿ ಸಂಸತ್ತಿನಲ್ಲಿ ಭಾಷಣ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ಭಾಷೆ ನನ್ನ ಬದುಕಿನ ಅವಿಭಾಜ್ಯ ಅಂಗ. ನನ್ನ ಹಿರಿಯರು ನನ್ನ ಭಾಷೆ ಬಗ್ಗೆ ಕಾಳಜಿಯ ಮಾತನ್ನು ಹೇಳಿದ್ದಾರೆ ಎಂದರು.

ಈ ಸುದ್ದಿಯನ್ನು ಓದಿದ್ದೀರಾ.?ಪ್ರಸಿದ್ಧ ಗಾಯಕಿ ಅನುರಾಧಾ ಪಡುವಾಲ್ ಬಿಜೆಪಿಗೆ ಸೇರ್ಪಡೆ

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸತ್ತಿನಲ್ಲಿ ಭಾಷಣ ಮಾಡಿ ಮತದಾರರನ್ನು ಮತ್ತು ಆ ಹಿರಿಯರನ್ನು ಸಂತೋಷ ಪಡಿಸುತ್ತೇನೆ ಎಂದು ಕೋಟ ಹೇಳಿದ್ದಾರೆ. ಉಡುಪಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಭಾಷೆಯ ಕುರಿತಾಗಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಂಸದನಾದ ಆರೇ ತಿಂಗಳಿನ ಒಳಗೆ ಸಂಸತ್ತಿನಲ್ಲಿ ನಾನು ಭಾಷಣ ಮಾಡಿ ಅವರನ್ನು ಸಂತೋಷ ಪಡಿಸುತ್ತೇನೆ ಎಂದರು. ಬಿಜೆಪಿ ಅಭ್ಯರ್ಥಿಯಾಗಿ ನನಗೆ ಇರುವ ಹೆಮ್ಮೆ ಏನೆಂದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಇಡೀ ವಿಶ್ವವೇ ಗೌರವಿಸುತ್ತದೆ. ಆ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ಅವರು ಮಾಡಿರುವ ಉತ್ತಮವಾದ, ಅಭಿವೃದ್ಧಿಪರ ಆಡಳಿತ, ಭಾರತವನ್ನು ವಿಶ್ವಗುರು ಮಾಡುವ ಆಡಳಿತ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾನು ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರು ಪ್ರಧಾನಿಯಾಗಲು ಕೈ ಜೋಡಿಸಲು ಅವಕಾಶ ಮಾಡಿ ಕೊಡಿ ಎಂದು ಮತದಾರರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಓದಿದ್ದೀರಾ.?ಕೊಯನಾಡಿನ ಸ್ವಾಮಿ ಕೊರಗಜ್ಜನ ಪವಾಡ!

ಪ್ರಜಾಪ್ರಭುತ್ವದಲ್ಲಿ ಒಬ್ಬನೇ ಅಭ್ಯರ್ಥಿ ಗೆದ್ದರೆ ಸಂಸತ್ತು ನಡೆಸಲು ಆಗಲ್ಲ, ನಾಯಕತ್ವದ ಪ್ರಶ್ನೆ ಬಂದಾಗ ನರೇಂದ್ರ ಮೋದಿಯವರ ನಾಯಕತ್ವವನ್ನು ನಾವು ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್‌ನವರು ಅವರ ನಾಯಕತ್ವದ ಬಗ್ಗೆ ಅವರು ಮಾತನಾಡಲಿ. ನಾಲ್ಕು ಬಾರಿ ಎಂಎಲ್‌ಯಾಗಿ ಮಂತ್ರಿಯಾಗಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದ್ದೇನೆ. ಪರಿಣಾಮಕಾರಿಯಾಗಿ ಕೆಲಸ ಮಾಡುವ ಅನುಭವ ನನಗೆ ಇದೆ. ಹೀಗಾಗಿ ಸಂಸದನಾಗಿ ಕೂಡಾ ದಾಖಲೆಯ ಅಭಿವೃದ್ಧಿಯನ್ನು ನಾನು ಮಾಡಬಲ್ಲೆ. ನಾನು ಆ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ