• 8 ಸೆಪ್ಟೆಂಬರ್ 2024

ಅಂಬೆ ನಾಟಕ ನೋಡಿ ಬದಲಾಗದೆ ಇರಲಾರ! ಸಜ್ಜಾಗಿದೆ ಈ ತಂಡ ದೂರದ ಮುಂಬೈಗೆ!

 ಅಂಬೆ ನಾಟಕ ನೋಡಿ ಬದಲಾಗದೆ ಇರಲಾರ! ಸಜ್ಜಾಗಿದೆ ಈ ತಂಡ ದೂರದ ಮುಂಬೈಗೆ!
Digiqole Ad

ಅಂಬೆ ನಾಟಕ ನೋಡಿ ಬದಲಾಗದೆ ಇರಲಾರ! ಸಜ್ಜಾಗಿದೆ ಈ ತಂಡ ದೂರದ ಮುಂಬೈಗೆ!

ಬೆಳಗಾವಿಯ ಡಾ. ಸರಜೂ ಕಾಟ್ಕರ್ ರವರ ರಚನೆಯ ಅಂಬೆ ಎಂಬ ಕನ್ನಡ ನಾಟಕವನ್ನು ನಮ ತುಳುವೆರ್ ಕಲಾ ಸಂಘಟನೆ (ರಿ.) ನಾಟ್ಕದೂರು, ಮುದ್ರಾಡಿಯ ತಂಡ ಪ್ರಸ್ತುತ ಪಡಿಸಿದ್ದು ಈ ನಾಟಕವನ್ನು ನಿನಾಸಂ ಪದವೀದರ ಮತ್ತು ಕರ್ನಾಟಕದ ಅನೇಕ ರಂಗ ತಂಡಗಳಿಗೆ ನಾಟಕ ನಿರ್ದೇಶಿಸಿದ ನಾಡಿನ ಪ್ರಮುಖ ಯುವ ನಿರ್ದೇಶಕರಲ್ಲಿ ಒಬ್ಬರಾದ ಸಾಲಿಯಾನ್ ಉಮೇಶ್ ನಾರಾಯಣರವರು ನಿರ್ದೇಶಿಸಿದ್ದಾರೆ.ತಂಡದ ಸಂಚಾಲಕರಾಗಿ ಮತ್ತು ನಾಟ್ಕ ಮುದ್ರಾಡಿಯ ಅಧ್ಯಕ್ಷರೂ ಆಗಿರುವ ಸುಕುಮಾರ್ ಮೋಹನ್ ರವರು ಈ ತಂಡ ರಚಿಸಿ ನಟಿಸಿದ್ದಾರೆ.ಎಂಟು ಜನ ಕಲಾವಿದರರೊಳಗೊಂಡ ತಂಡವೂ ಸಂಗೀತ ಮತ್ತು ಬೆಳಕಿನ ನಿರ್ವಹಣೆ ವಸ್ತ್ರಾಲಂಕಾರ ತಂಡದ ಕಲಾವಿದರೇ ನಿರ್ವಹಿಸುತ್ತಾರೆ.

ಮುಂಬೈಯ ಮೀರಾರೋಡಿನಲ್ಲಿರುವ ಸೈಂಟ್ ಥೋಮಸ್ ಚರ್ಚ್ ಹಾಲ್ ನಲ್ಲಿ ಮಾರ್ಚ್ 26 ರ ಸಂಜೆ 6 ಕ್ಕೆ ಮತ್ತು ಕರ್ನಾಟಕ ಸಂಘ ಪನ್ವೆಲ್ ನಲ್ಲಿ ಮಾರ್ಚ್ 29 ರಂದು ಸಂಜೆ 7 ಕ್ಕೆ ಹಾಗೂ ಮಹರಾಷ್ಟ್ರದ ಥಾಣೆಯಲ್ಲಿರುವ ರಾಮ್ ಗಣೇಶ್ ಗಡ್ಕರಿ ಥಿಯೇಟರ್ ನಲ್ಲಿ ಮಾರ್ಚ್ 27 ರ ಸಂಜೆ 4 ಗಂಟೆಗೆ ಪ್ರದರ್ಶನ ಕಾಣಲಿದೆ ಕಲಾವಿದರಾಗಿ ವಾಣಿ ಸುಕುಮಾರ್ , ಸುಕುಮಾರ್ ಮೋಹನ್ ,ಉಮೇಶ್ ಕಲ್ಮಾಡಿ, ಸುಗಂಧಿ ಉಮೇಶ್ ಕಲ್ಮಾಡಿ, ಸಂದೇಶ್ ಕೋಟ್ಯಾನ್ ಕಾರ್ಕಳ, ಮಿಥುನ್ ಕುಮಾರ್ ಸೋನ ಕೊಲ್ಲಮೊಗ್ರು , ಪುಷ್ಪರಾಜ್ ಏನೇಕಲ್ , ಪ್ರತೀಕ ಎಸ್ ಎಸ್ ಶಿವಮೊಗ್ಗ ನಟಿಸಿದ್ದಾರೆ.ಈ ತಂಡ ಅಂಬೆ ನಾಟಕದ ಪ್ರದರ್ಶನಕ್ಕಾಗಿ ಮುಂಬೈ ಪ್ರವಾಸ ಕೈಗೊಳ್ಳುತ್ತಿದೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ