• 8 ಸೆಪ್ಟೆಂಬರ್ 2024

ಅಡಿಕೆ ಹೆಕ್ಕಲು ಹೊಸ ಮಾದರಿಯ ಉಪಕರಣ ತಯಾರಿಸಿದ ಪುತ್ತೂರಿನ ಕೃಷಿಕ.

 ಅಡಿಕೆ ಹೆಕ್ಕಲು ಹೊಸ ಮಾದರಿಯ ಉಪಕರಣ ತಯಾರಿಸಿದ ಪುತ್ತೂರಿನ ಕೃಷಿಕ.
Digiqole Ad

ಅಡಿಕೆ ಹೆಕ್ಕಲು ಹೊಸ ಮಾದರಿಯ ಉಪಕರಣ ತಯಾರಿಸಿದ ಪುತ್ತೂರಿನ ಕೃಷಿಕ.

ಪುತ್ತೂರು: ಕರಾವಳಿ ಭಾಗದ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ (Arecanut) ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ಈ ಕಾರಣಕ್ಕಾಗಿ ಇಂದು ಕರಾವಳಿ ಜೊತೆಗೆ ಇತರ ರಾಜ್ಯದ ಕೃಷಿಕರೂ ಅಡಿಕೆ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ. ಅಡಿಕೆ ಬೆಳೆಯುವ ಬೆಳೆಗಾರರಿಗೆ ಇತ್ತೀಚಿನ ದಿನಗಳಲ್ಲಿ ಕೆಲಸಗಾರರ ಸಮಸ್ಯೆಯೂ ಕಾಡುತ್ತಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಬೇಸಿಗೆಯಿಂದ ಬತ್ತಿದ ನದಿಗೆ ನೀರು ಬಿಟ್ಟು ಭಗೀರಥನಾದ ರೈತ

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪ್ರಗತಿಪರ ಕೃಷಿಕರೊಬ್ಬರು ಅಡಿಕೆ ಹೆಕ್ಕಲೆಂದು ಸಿಂಪಲ್ ಉಪಕರಣವೊಂದನ್ನು ಕಂಡುಹಿಡಿದಿದ್ದಾರೆ. ಪುತ್ತೂರಿನ ಸವಣೂರು ನಿವಾಸಿ ವಿವೇಕ್ ರೈ ಈ ಉಪಕರಣವನ್ನು ನಿರ್ಮಿಸಿದರು. ಈ ಉಪಕರಣದ ಮೂಲಕ ಅನಾಯಾಸವಾಗಿ ಅಡಿಕೆಗಳನ್ನು ಹೆಕ್ಕಲು ಸಾಧ್ಯವಾಗಿದ್ದು,ಹಲವು ಪ್ರಯೋಗಗಳ ಬಳಿಕ ಈ ಉಪಕರಣವನ್ನು ಕೃಷಿಕರಿಗೆ ನೀಡಲು ವಿವೇಕ್ ತೀರ್ಮಾನಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಸಾನಿಧ್ಯ ಅಭಿವೃದ್ಧಿಗಾಗಿ ದೇವಿ ಮೂಲಕ ಇರುವಿಕೆ ತೋರಿಸಿದ್ದ ದೈವ ..!

ದೊಡ್ಡ ಗಾತ್ರದ ಪ್ಲಾಸ್ಟಿಕ್ ಡಬ್ಬಕ್ಕೆ ಪ್ಲಾಸ್ಟಿಕ್ ಪೈಪ್‌ ಅಳವಡಿಸಿ, ಇನ್ನೊಂದು ಕೈಯಲ್ಲಿ ಪ್ಲಾಸ್ಟಿಕ್ ಪೈಪ್‌ಗೆ ಅಗಲ ಗಾತ್ರದ ಚಮಚಾದಂತಹ ಉಪಕರಣವನ್ನು ಜೋಡಿಸಿದ್ದಾರೆ. ಅಡಿಕೆ ಬಿದ್ದಿರುವ ಕಡೆ ಒಂದು ಕೈಯಲ್ಲಿ ಪ್ಲಾಸ್ಟಿಕ್ ಡಬ್ಬ ಹಾಗು ಇನ್ನೊಂದು ಕೈಯಲ್ಲಿ ಅಗಲ ಗಾತ್ರದ ಚಮಚಾದಂತಹ ಉಪಕರಣವನ್ನು ಬಳಸಿ ಸುಲಭವಾಗಿ ಅಡಿಕೆಯನ್ನು ಹೆಕ್ಕಬಹುದಾಗಿದೆ. ಹುಲ್ಲಿನ ಅಡಿಯಲ್ಲಿ, ಸೋಗೆಯ ಅಡಿಯಲ್ಲಿ ಸಿಲುಕಿರುವಂತಹ ಅಡಿಕೆಯನ್ನೂ ಕೂಡ ಇದರಿಂದ ಸುಲಭವಾಗಿ ತೆಗೆಯಲು ಸಾಧ್ಯವಿದ್ದು, ಅಡಿಕೆ ಹೆಕ್ಕಲು ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಪ್ರಿಂಗ್ ಹಾಗು ಕ್ಲಿಪ್ ಬಳಸಿದ ಉಪಕರಣಗಳಿಗಿಂತ ಇದು ಸುಲಭ ಹಾಗು ಪರಿಣಾಮಕಾರಿಯಾಗಿದೆ. ಕೇವಲ 50-100 ರೂಪಾಯಿ ವಿನಿಯೋಗಿಸಿ ಈ ಉಪಕರಣವನ್ನು ತಯಾರಿಸಬಹುದಾಗಿದೆ ಎಂದಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ