• 8 ಸೆಪ್ಟೆಂಬರ್ 2024

HSRP ಪಡೆಯಲು ನೋಂದಣಿ ಮಾಡಿಕೊಳ್ಳಲು ಮೇ.31 ಕೊನೆಯ ಅವಕಾಶ

 HSRP ಪಡೆಯಲು ನೋಂದಣಿ ಮಾಡಿಕೊಳ್ಳಲು ಮೇ.31 ಕೊನೆಯ ಅವಕಾಶ
Digiqole Ad

HSRP ಪಡೆಯಲು ನೋಂದಣಿ ಮಾಡಿಕೊಳ್ಳಲು ಮೇ.31 ಕೊನೆಯ ಅವಕಾಶ

ಬೆಂಗಳೂರು: 2019ಕ್ಕಿಂತ ಮೊದಲು ಖರೀದಿಸಿದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ರಾಜ್ಯ ಸಾರಿಗೆ ಇಲಾಖೆ ಮೇ 31ರವರೆಗೆ HSRP ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಜೂನ್ 1ರಿಂದ ಪೊಲೀಸ್ ಇಲಾಖೆ ಜೊತೆಗೂಡಿ HSRP ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಈ ಸುದ್ದಿ ಓದಿದ್ದೀರಾ ಅಪ್ಪೆ ಬೊಳ್ಳೆನ ಅಮರ್ ಬೊಳ್ಳಿಲು ಕಾನದ ಕಟದೆರ್ ತುಳು ಭಕ್ತಿಗೀತೆ ಆಲ್ಬಂ ಹಾಡು ಲೋಕಾರ್ಪಣೆ 

HSRP ಅಳವಡಿಕೆಗೆ ಈಗಾಗಲೇ ಎರಡು ಬಾರಿ ಗುಡುವು ವಿಸ್ತರಿಸಲಾಗಿದೆ. ಈ ಹಿಂದೆ 2023ರ ನವೆಂಬರ್ 13ರೊಳಗೆ HSRP ಅಳವಡಿಕೆಗೆ ಗಡುವು ನೀಡಲಾಗಿತ್ತು. ಆಗ ಕೇವಲ 30,000 ವಾಹನಗಳ ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದರಿಂದ ಫೆಬ್ರವರಿ 17ರ ವರೆಗೆ ಗಡುವನ್ನು ವಿಸ್ತರಿಸಲಾಯಿತು. ಆ ವೇಳೆಗೆ 18 ಲಕ್ಷ ವಾಹನಗಳು ಮಾತ್ರ HSRP ಅಳವಡಿಕೆ ಮಾಡಿಕೊಂಡಿದ್ದವು. ಮೇ 31ರವರೆಗೆ HSRP ಅಳವಡಿಕೆ ಗಡುವು ವಿಸ್ತರಿಸಲಾಗಿದೆ.

ಗುಡುವಿನ ನಂತರ HSRP ವಾಹನಗಳ ವಿರುದ್ಧ ದಂಡ ಪ್ರಯೋಗ ಮಾಡುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು, ನಂತರದಲ್ಲಿ ವಾಹನ ಮಾಲೀಕರು ನೋಂದಣಿ ಪ್ರಮಾಣ ಹೆಚ್ಚಾಗಿ 18ಲಕ್ಷಕ್ಕೆ ತಲುಪಿದೆ. ಈಗ 52 ಲಕ್ಷ ವಾಹನಗಳ ನೋಂದಣಿಯಾಗಿದೆ. ಎರಡನೇ ತಿಂಗಳಲ್ಲಿ 34 ಲಕ್ಷ ವಾಹನಗಳು HSRP ಅಳವಡಿಸಿಕೊಂಡಿದ್ದು, ಇನ್ನೂ ಸುಮಾರು 1.48 ಕೋಟಿ ವಾಹನಗಳು HSRP ಅಳವಡಿಸಿಕೊಳ್ಳಬೇಕಿದೆ. ನಿಗದಿತ ಗಡುವಿನೊಳಗೆ HSRP ಅಳವಡಿಸದಿದ್ದರೆ ಮತ್ತೊಮ್ಮೆ ಗಡುವು ವಿಸ್ತರಿಸಬಹುದು. ಗಡುವು ವಿಸ್ತರಿಸದಿದ್ದರೆ HSRP ಇಲ್ಲದ ವಾಹನಗಳಿಗೆ 500 ರಿಂದ 1000 ರೂ. ದಂಡ ವಿಧಿಸಲಾಗುವುದು ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ… ಮಲ್ಪೆ : ಬೋಟ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಒರಿಸ್ಸಾ ಮೂಲದ ಯುವಕ ನಾಪತ್ತೆ

www.goldfactorynews.com
Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಪ್ರವೀಣ ಕಾಸರಗೋಡು

https://goldfactorynews.com

ಈ ಸುದ್ದಿಗಳನ್ನೂ ಓದಿ