• 8 ಸೆಪ್ಟೆಂಬರ್ 2024

ಕಾಣಿಯೂರು ಶಾಲಾ ಪ್ರಾರಂಭೋತ್ಸವ 

 ಕಾಣಿಯೂರು ಶಾಲಾ ಪ್ರಾರಂಭೋತ್ಸವ 
Digiqole Ad

ಕಾಣಿಯೂರು ಶಾಲಾ ಪ್ರಾರಂಭೋತ್ಸವ 

ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರಿನಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಬ್ಯಾಂಡ್ ಘೋಷ್ ಗಳೊಂದಿಗೆ ಮೆರವಣಿಗೆ ನಡೆಸಿ ಮಕ್ಕಳಿಗೆ ಆರತಿ ಬೆಳಗಿಸಿ ತಿಲಕವಿಟ್ಟು ಸಾಂಪ್ರದಾಯಿಕವಾಗಿ ಶಾಲಾ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು .ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಯಶೋದಾ ನೇರೋಳ್ತಡ್ಕ, ಕಾಣಿಯೂರು ಕ್ಲಸ್ಟರ್ ಸಿಆರ್ ಪಿ ಯಶೋದಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಮುಗರಂಜ, ಕೋಶಾಧಿಕಾರಿ ರಾಜೇಶ್ ಮೀಜೆ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಧರ್ಮೇಂದ್ರ ಗೌಡ ಕಟ್ಟತ್ತಾರು, ಬಾಲಕೃಷ್ಣ ಕರಂದ್ಲಾಜೆ, ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ಶಿಕ್ಷಕರಾದ ಮೋಹಿನಿ, ಭಾರತಿ, ದೇವಕಿ,ವೀಕ್ಷಿತಾ,ಶಿರಿನ ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಪುಂಡಲೀಕ ಪೂಜಾರ ಸ್ವಾಗತಿಸಿ, ಶಿಕ್ಷಕಿ ಸುಜಯ ವಂದಿಸಿದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ