• 8 ಸೆಪ್ಟೆಂಬರ್ 2024

ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ “ಶೈಕ್ಷಣಿಕ ಅಭಿವೃದ್ಧಿ “ಬಗ್ಗೆ ಮಾಹಿತಿ ಕಾರ್ಯಕ್ರಮ 

 ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ “ಶೈಕ್ಷಣಿಕ ಅಭಿವೃದ್ಧಿ “ಬಗ್ಗೆ ಮಾಹಿತಿ ಕಾರ್ಯಕ್ರಮ 
Digiqole Ad

ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ “ಶೈಕ್ಷಣಿಕ ಅಭಿವೃದ್ಧಿ “ಬಗ್ಗೆ ಮಾಹಿತಿ ಕಾರ್ಯಕ್ರಮ

ಕಾಣಿಯೂರು: ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಎದುರಿಸುತ್ತಿರುವ ಕಲಿಕಾ ನ್ಯೂನತೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಶೈಕ್ಷಣಿಕ ಅಭಿವೃದ್ಧಿಯನ್ನು ಹೇಗೆ ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಶಿಕ್ಷಕವೃಂದದವರಿಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆ ಮಾನಸಗಂಗೋತ್ರಿ ಮೈಸೂರಿನ ಚಿಕಿತ್ಸಾ ಮನೋವಿಜ್ಞಾನ ವಿಭಾಗದ ನಿವೃತ್ತ ಪ್ರೊಫೆಸರ್ ಹಾಗೂ ಮುಖ್ಯಸ್ಥರು ಆಗಿದ್ದ, ಪ್ರಸ್ತುತ ಕ್ಲಿನಿಕಲ್ ಸೈಕಾಲಜಿಸ್ಟ್ ಆಗಿ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಜಿ ಜಯರಾಮರವರು ಶಿಕ್ಷಕರಿಗೆ ಬಹಳ ಅರ್ಥಪೂರ್ಣವಾಗಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಲಿಕಾ ನ್ಯೂನತೆಗೆ ಕಾರಣಗಳನ್ನು ತಿಳಿಸಿದರು. ಶಿಕ್ಷಕ ವೃಂದದವರು ತಾವು ಬೋಧಿಸುವ ಸಂದರ್ಭದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡರು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀ ಜಯಸೂರ್ಯ ರೈ ಮಾದೋಡಿ ,ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ ,ಸಹ ಆಡಳಿತಾಧಿಕಾರಿ ಹೇಮನಾಗೇಶ್ ರೈ, ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ್ ಭಟ್, ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಮತ್ತು ಎಲ್ಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ