• 8 ಸೆಪ್ಟೆಂಬರ್ 2024

ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ವಿಶ್ವಯೋಗ ದಿನಾಚರಣೆ.

 ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ವಿಶ್ವಯೋಗ ದಿನಾಚರಣೆ.
Digiqole Ad

ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ವಿಶ್ವಯೋಗ ದಿನಾಚರಣೆ.

ಕಾಣಿಯೂರು : ಜೂನ್ 21 ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ ಹತ್ತನೇ ವಿಶ್ವ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶ್ರೀ ಜಯಸೂರ್ಯ ರೈ ಮಾದೋಡಿಯವರು ವಹಿಸಿ ಶುಭ ಹಾರೈಸಿದರು. ಮುಖ್ಯಅತಿಥಿಗಳಾದ ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷರೂ, ನ್ಯಾಯವಾದಿಗಳೂ ಆದ ಶ್ರೀ ಗಿರೀಶ್ ಮಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಪುತ್ತೂರು ಯೋಗ ಕೇಂದ್ರದ ಗುರುಗಳಾದ ಡಾ. ಪ್ರಸಾದ್ ಪಾಣಾಜೆ ಅವರು ಮಾತನಾಡುತ್ತಾ ಯೋಗದಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಒತ್ತಡ ರಹಿತ ಬದುಕನ್ನು ನಡೆಸಬಹುದು ಎಂದರು, ವಾಣಿಜ್ಯ ತೆರಿಗೆ ಅಧಿಕಾರಿಗಳಾದ ರಾಮಚಂದ್ರ ಐ , ಶ್ರೀ ಸೂರ್ಯನಾರಾಯಣ, ಶ್ರೀಮತಿ ಮಂಜುಳಾ ಗಿರೀಶ್ ಮಳಿ, ಸಹಆಡಳಿತಾಧಿಕಾರಿ ಹೇಮಾನಾಗೇಶ್ ರೈ , ಆಂಗ್ಲ ಮಾಧ್ಯಮದ ಮುಖ್ಯ ಗುರುಗಳಾದ ಶ್ರೀಯುತ ನಾರಾಯಣ ಭಟ್, ಆಂಗ್ಲ ಮಾಧ್ಯಮದ ಸಹಮುಖ್ಯಸ್ಥೆ ಶ್ರೀಮತಿ ಅನಿತಾ ಜೆ ರೈ ಉಪಸ್ಥಿತರಿದ್ದರು.

ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು . ಕನ್ನಡ ಮಾಧ್ಯಮದ ಮುಖ್ಯಗುರು ಶ್ರೀಮತಿ ವಿನಯ ವಿ ಶೆಟ್ಟಿ ಧನ್ಯವಾದ ಸಮರ್ಪಿಸಿದರು . ವಿದ್ಯಾರ್ಥಿನಿಯರಾದ ರಾಶಿ ಕೆ ಸಿ ಗ್ರೀಷ್ಮ ರೈ ಮಾನ್ವಿ ಜಿ ಎಸ್ ಪ್ರಾರ್ಥಿಸಿದರು .ಶಿಕ್ಷಕಿ ಶುಭಶ್ರೀ ಬಿ ಕೆ ಮತ್ತು ಶಿಕ್ಷಕ ಅಶೋಕ್ ಕುಮಾರ್ ಪಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಸರಳ ಯೋಗಾಸನವನ್ನು ಯೋಗ ಶಿಕ್ಷಕಿ ಶ್ರೀಮತಿ ಶಶಿಕಲಾ ರವರ ಮಾರ್ಗದರ್ಶನದೊಂದಿಗೆ ನಡೆಸಲಾಯಿತು. ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ಶಾಲಾ ವಿದ್ಯಾರ್ಥಿಗಳು ಯೋಗ ಪ್ರದರ್ಶನವನ್ನು ನೀಡಿದರು. ತದ ನಂತರ ಶಾಲಾ ಶಿಕ್ಷಕವೃಂದದವರು ಯೋಗಾಸನ ಮಾಡುವ ಮೂಲಕ ವಿಶ್ವಯೋಗ ದಿನಾಚರಣೆಯನ್ನು ಆಚರಿಸಿದರು.

ಈ ಸುದ್ದಿಯನ್ನು ಓದಿದ್ದೀರಾ.?ಫೋನ್‌ಪೇ ಅಲ್ಲೇ Income Tax Payment ಫೀಚರ್ ಪರಿಚಯ! ಹಾಗಾದ್ರೆ ಈ ಫೀಚರ್ ಬಳಸಿ ಪಾವತಿಸುವುದು ಹೇಗೆ?

Digiqole Ad

ಈ ಸುದ್ದಿಗಳನ್ನೂ ಓದಿ