• 7 ಸೆಪ್ಟೆಂಬರ್ 2024

ನರಿಮೊಗರು: ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಭತ್ತ ಬೇಸಾಯದ ಪಾಠ

 ನರಿಮೊಗರು: ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಭತ್ತ ಬೇಸಾಯದ ಪಾಠ
Digiqole Ad

ನರಿಮೊಗರು: ಕೆಸರುಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಭತ್ತ ಬೇಸಾಯದ ಪಾಠ

ಜಿಟಿ ಜಿಟಿ ಮಳೆಯ ಸಿಂಚನದ ಜೊತೆ ಸಾಂದೀಪನಿ  ಕಬ್,ಬುಲ್ ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತರಗತಿ ಪಾಠದ ಹೊರತಾಗಿ ಗದ್ದೆಯತ್ತ ಪಯಣಿಸಿ ಭತ್ತ ಬೇಸಾಯದ ಪಾಠವನ್ನು ತಿಳಿದುಕೊಂಡರು.ಆದರೆ ಅಲ್ಲಿ ಶಿಕ್ಷಕರ ಬದಲು ಪರಿಶ್ರಮಿ ರೈತರೊಬ್ಬರು ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟರು.

ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು(ರಿ) ನರಿಮೊಗರು ,ಪುತ್ತೂರು ಇಲ್ಲಿನ ಸ್ಕೌಟ್ಸ್, ಗೈಡ್ಸ್, ಕಬ್,ಬುಲ್ ಬುಲ್ ವಿದ್ಯಾರ್ಥಿಗಳಿಗೆ ನರಿಮೊಗರಿನ ಶ್ರೀಯುತ ಜಯರಾಮ ಪ್ರಭು ಇವರ ಗದ್ದೆಯಲ್ಲಿ ಉಳುಮೆ,ನಾಟಿ ಮಾಡುವ ವಿಧಾನದ ಮಾಹಿತಿ ಕಾರ್ಯಕ್ರಮವು ನಡೆಯಿತು.

ಗದ್ದೆಯಲ್ಲಿ ಉಳುಮೆ, ನಾಟಿ ಮಾಡುವ ಕುರಿತಾದ ಮಾಹಿತಿಯನ್ನು ತನ್ನ ಗದ್ದೆಯಲ್ಲಿ ಶ್ರೀಯುತ ಜಯರಾಮ ಪ್ರಭು ಇವರು ವಿದ್ಯಾರ್ಥಿಗಳಿಗೆ ಸವಿವರವಾಗಿ ತಿಳಿಸಿಕೊಟ್ಟರು.

ವಿದ್ಯಾರ್ಥಿಗಳು ಸ್ವತಃ ತಾವೇ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಹೊಸ ಜ್ಞಾನವನ್ನು ಪಡೆದುಕೊಂಡರು.ಗದ್ದೆ ನೀರಿನಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.ಸಂಸ್ಥೆಯ ಪೋಷಕರೂ, ಕೃಷಿಕರೂ ಆದ ಶ್ರೀಯುತ ಜಯರಾಮ ಪ್ರಭು ಹಾಗೂ ಮನೆಯವರು ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಸಿಹಿತಿಂಡಿ ವಿತರಿಸಿದರು.

ವಿದ್ಯಾರ್ಥಿಗಳು ಕೃಷಿಪಾಠದೊಂದಿಗೆ ಸಂಭ್ರಮದಿಂದ ಶಾಲೆಯತ್ತ ಹಿಂತಿರುಗಿದರು.ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಸಂಚಾಲಕರಾದ ಶ್ರೀಯುತ ಭಾಸ್ಕರ ಆಚಾರ್ ಹಿಂದಾರು, ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ‌.ವಿ.ಎನ್.ಇವರು ಮಾರ್ಗದರ್ಶನ ಮಾಡಿದರು.ಈ ವಿನೂತನ ಕಾರ್ಯಕ್ರಮದಲ್ಲಿ ಬುಲ್ ಬುಲ್ ಪ್ಲಾಕ್ ಲೀಡರ್ ಶ್ರೀಮತಿ ಅನಿತಾ‌.ಕೆ , ಸ್ಕೌಟ್ಸ್ ಶಿಕ್ಷಕರಾದ ಶ್ರೀ ಮುರಳಿಕೃಷ್ಣ. ‌ಪಿ, ಶ್ರೀ ಹರೀಶ್.ಕೆ,ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ರೇಷ್ಮಾ, ಯೋಗ ಶಿಕ್ಷಕರಾದ ಶ್ರೀ ನವೀನ್ ಕುಮಾರ್, ಸಹಶಿಕ್ಷಕರಾದ ಶ್ರೀ ರಮೇಶ್, ಶ್ರೀಮತಿ ಅಕ್ಷತಾ ಇವರು ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕ ವೃಂದ ಹಾಗೂ ಸಿಬ್ಬಂದಿವರ್ಗದವರು ಈ ಕಾರ್ಯಕ್ರಮಕ್ಕೆ ಸಹಕರಿಸಿದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ