• 8 ಸೆಪ್ಟೆಂಬರ್ 2024

ಕಡಬ:ತಂಬಾಕಿಗೆ ಹೇಳಿ ಬೈ ಬೈ ಆರೋಗ್ಯವಂತ ಜೀವನಕ್ಕೆ ಹೇಳಿ ಹಾಯ್ ಹಾಯ್ ಕಡಬ ಜೆ ಎಮ್ ಜೇ ಆಸ್ಪತ್ರೆ ವೈದ್ಯಾಧಿಕಾರಿ ಯೇಲ್ಸೀ ಸಲಹೆ.

 ಕಡಬ:ತಂಬಾಕಿಗೆ ಹೇಳಿ ಬೈ ಬೈ ಆರೋಗ್ಯವಂತ ಜೀವನಕ್ಕೆ ಹೇಳಿ ಹಾಯ್ ಹಾಯ್ ಕಡಬ ಜೆ ಎಮ್ ಜೇ ಆಸ್ಪತ್ರೆ ವೈದ್ಯಾಧಿಕಾರಿ ಯೇಲ್ಸೀ ಸಲಹೆ.
Digiqole Ad

ಕಡಬ:ತಂಬಾಕಿಗೆ ಹೇಳಿ ಬೈ ಬೈ ಆರೋಗ್ಯವಂತ ಜೀವನಕ್ಕೆ ಹೇಳಿ ಹಾಯ್ ಹಾಯ್
ಕಡಬ ಜೆ ಎಮ್ ಜೇ ಆಸ್ಪತ್ರೆ ವೈದ್ಯಾಧಿಕಾರಿ ಯೇಲ್ಸೀ ಸಲಹೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆಯ ವತಿಯಿಂದ ಕಡಬ ವಲಯದ ಕಡಬ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಡಬ ಜೆ ಎಮ್ ಜೇ ಆಸ್ಪತ್ರೆಯ ವೈದ್ಯರಾದ ಯೇಲ್ಸೀ ರವರು ತಂಬಾಕು ಬಳಕೆಯಿಂದ ಕ್ಯಾನ್ಸರ್ ಗಳಂತ ಮಾರಕ ರೋಗಗಳು ಮನುಷ್ಯನ ದೇಹವನ್ನು ಆಕ್ರಮಿಸಿ ಕುಟುಂಬದ ನೆಮ್ಮದಿಯನ್ನು ಹಾಳುಮಾಡುವುದರೊಂದಿಗೆ ವ್ಯಸನಿಯ ಜೀವಕ್ಕೆ ಮಾರಕ ವಾಗುತ್ತದೆ.
ತಂಬಾಕು ಮುಕ್ತ ಜೀವನ ನಡೆಸಿ ತಂಬಾಕುಗೆ ಹೇಳಿ ಬಾಯ್ ಬಾಯ್ ಆರೋಗ್ಶವಂತ ಜೀವನಕ್ಕೆ ಹೇಳಿ ಹಾಯ್ ಹಾಯ್ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರು ಆದ ಶಿವಪ್ರಸಾದ್ ರೈ ಮೈಲೇರಿಯವರು ಉಧ್ಘಾಟಿಸಿ ಮಾತನಾಡಿ ಕಡಬ ವಲಯದ ಲ್ಲಿ ಜನಜಾಗೃತಿ ವೇದಿಕೆಯಿಂದ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಒಕ್ಕೂಟದ ಸಹಕಾರ ಅತೀ ಅಗತ್ಯವಾಗಿರುತ್ತದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಶ ಸಂಕಲ್ಪ ಕಾರ್ಯಕ್ರಮ ಸಾರ್ವಜನಿಕರಿಗೆ ಮಾದಕ ವಸ್ತುಗಳ ಹಾಗೂ ತಂಬಾಕು ವಿರೋಧಿ ಕಾರ್ಯಕ್ರಮಗಳನ್ನು ಜನಜಾಗೃತಿ ವೇದಿಕೆ ವತಿಯಿಂದ ಪ್ರತೀ ವರ್ಷವೂ ನಡೆಸುತ್ತಿದ್ದು ಈ ವರ್ಷ ಮದ್ಯವರ್ಜನ ಶಿಬಿರವನ್ನೂ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಹಕಾರನೀಡುವಂತೆ ತಿಳಿಸಿದರು.
ಕಡಬ ವಲಯ ಒಕ್ಕೂಟದ ವಲಯಾಧ್ಯಕ್ಷ ರಾದ ರಮೇಶ್ ರೈ ಅರ್ಪಾಜೆ ಅಧ್ಶಕ್ಷತೆ ವಹಿಸಿದ್ದರು.
ಕಡಬ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಳಿನಿ ರೈ ಹಾಗೂ ಮಾಲೇಶ್ವರ ಒಕ್ಕೂಟದ ಪಧಾದಿಕಾರಿಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಸವಿತಾ ಸ್ವಾಗತಿಸಿ ಒಕ್ಕೂಟದ ಕಾರ್ಯದರ್ಶಿ ವನಿತಾ ರೈ ವಂದಿಸಿದರು.
ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು.
ಕಡಬ ಹಾಗೂ ಮಾಲೇಶ್ವರ ಒಕ್ಕೂಟದ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

Digiqole Ad

ಈ ಸುದ್ದಿಗಳನ್ನೂ ಓದಿ