• 7 ಸೆಪ್ಟೆಂಬರ್ 2024

ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ಭವಿತ್ ಪಕ್ಕಳ ಕುಟುಂಬಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ವತಿಯಿಂದ 1ಲಕ್ಷ ರೂಪಾಯಿ ಹಸ್ತಾಂತರ 

 ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ಭವಿತ್ ಪಕ್ಕಳ ಕುಟುಂಬಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ವತಿಯಿಂದ 1ಲಕ್ಷ ರೂಪಾಯಿ ಹಸ್ತಾಂತರ 
Digiqole Ad

ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ಭವಿತ್ ಪಕ್ಕಳ ಕುಟುಂಬಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ವತಿಯಿಂದ 1ಲಕ್ಷ ರೂಪಾಯಿ ಹಸ್ತಾಂತರ

ಪುತ್ತೂರಿನ ತಿಂಗಳಾಡಿಯ ನೂಜಿ ಲೋಕನಾಥ ಪಕ್ಕಳರ ಪುತ್ರ 18 ವರ್ಷದ ಭವಿತ್ ಪಕ್ಕಳ ಎಲ್ಲರಂತೆ ಲವಲವಿಕೆಯಿಂದಿದ್ದ ವಿದ್ಯಾರ್ಥಿ. ಇದಕ್ಕಿದ್ದಂತೆ ಮರಣಾಂತಿಕ ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ. 

ಈ ಕೆಲವು ತಿಂಗಳುಗಳ ಹಿಂದೆ ನಮ್ಮ ಮನೆಯ ಆಧಾರ ಸ್ತಂಭವಾಗಿರುವ ಈತನ ತಂದೆ ಲೋಕನಾಥ ಪಕಳರು ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ 25 ಲಕ್ಷಕ್ಕೂ ಮೀರಿ ಖರ್ಚಾಗಿದೆ.

ಈಗ ಮಗನಿಗೂ 15 ಲಕ್ಷಕ್ಕೂ ಮೀರಿ ಹಣ ಬೇಕಾಗುವುದೆಂದು ವೈದ್ಯರು ತಿಳಿಸಿದ್ದಾರೆ . ಅವನ ಆಸ್ಪತ್ರೆ ವೆಚ್ಚಕ್ಕೆ ಬಿಡಿಗಾಸು ಇಲ್ಲದೆ ಇದ್ದ ಪರಿಸ್ಥಿತಿಲ್ಲಿರುವ ಕುಟುಂಬದ ಕಣ್ಣಿರಿರೊರೆಸಲು ಕೈಲಾದ ಸಹಾಯ ಮಾಡಬೇಕೆಂದು ನಿರ್ಧರಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಹಾಯ ಹಸ್ತಕ್ಕೆ ಮನವಿ ಮಾಡಿತ್ತು. ದಾನಿಗಳಿಂದ ಸಂಗ್ರಹಿಸಿದ ರೂ.1 ಲಕ್ಷದ ಚೆಕ್ ಅನ್ನು ಎಂದು ಭವಿಶ್ ನ ಮನೆಗೆ ತೆರಳಿ ವಿತರಿಸಲಾಯಿತು. 

ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ , ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಭೀಮಯ್ಯ ಭಟ್, ಪ್ರವೀಣ್ ಶೆಟ್ಟಿ ತಿಂಗಳಾಡಿ, ರಾಜೀವ್ ಶೆಟ್ಟಿ, ಪ್ರಸಾದ್ ರೈ ಸಿಎಚ್, ವೇಣುಗೋಪಾಲ್ ರೈ, ಕೆದಂಬಾಡಿ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ನಿರ್ದೇಶಕ ರಿತೇಶ್ ಪಾಟಳಿ, ದಿವಾಕರ ಪಳ್ಳತ್ತಡ್ಕ, ಪ್ರವೀಣ್ ಕಟ್ಟತ್ತಾರು, ಸಂದೇಶ್ ನಾಯ್ಕ್ ಕೆಯ್ಯೂರು, ಮನೋಜ್ ರೈ ಸಹಿತ ಹಲವರು ಉಪಸ್ಥಿತರಿದ್ದರು. 

ಭವಿಶ್ ನ ಆಸ್ಪತ್ರೆಯ ವೆಚ್ಚಕ್ಕೆ ಇನ್ನಷ್ಟು ಹಣಕಾಸಿನ ಅಗತ್ಯವಿದ್ದು, ದಾನಿಗಳು ಸಹಾಯಹಸ್ತ ಚಾಚಬೇಕಾಗಿ ವಿನಂತಿ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ