• 8 ಸೆಪ್ಟೆಂಬರ್ 2024

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಉಚಿತ ವೈದ್ಯಕೀಯ ಶಿಬಿರ.

 ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಉಚಿತ ವೈದ್ಯಕೀಯ ಶಿಬಿರ.
Digiqole Ad

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಉಚಿತ ವೈದ್ಯಕೀಯ ಶಿಬಿರ.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ವಿಟ್ಲ ಘಟಕ ಇವರ ಸಹಯೋಗದೊಂದಿಗೆ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಇಲ್ಲಿಯ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಸಮುದಾಯ ದಂತ ವಿಭಾಗ ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ, ಇಲ್ಲಿಯ ವೈದ್ಯರ ತಂಡದವರಿಂದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಜು.14ರಂದು ವಿಟ್ಲ ವಿಠಲ ಪದವಿ ಪೂರ್ವ ಕಾಲೇಜು ಸುವರ್ಣ ರಂಗ ಮಂದಿರದಲ್ಲಿ ಜರಗಿತು.ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸಿ ಉದ್ಘಾಟಿಸಿದರು. ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾ ಶಿಕ್ಷಣ ಸಂಯೋಜಕ ಆನಂದ ರೈ , ಕೆಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಕ್ಯಾಂಪಸ್ ಆರ್ಗನೈಜರ್ ಮನುರಾಜ್ ಶೆಟ್ಟಿ, ಯೆನೆಪೋಯ ಆಸ್ಪತ್ರೆಯ ಡಾ.ಸುಪ್ರಿತಾ, ಯೆನೆಪೋಯ ದಂತ ಆಸ್ಪತ್ರೆಯ ಪಿಆರ್ ಒ ಭರತ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರಸನ್ನ ಮಾರ್ತಾ, ವಿಟ್ಲ ಅರಮನೆಯ ಪ್ರಮುಖರಾದ ಕೃಷ್ಣಯ್ಯ, ವಿಟ್ಲ ಗ್ರಾಮೀಣ ಬ್ಯಾಂಕ್ ನ ಅಧ್ಯಕ್ಷರಾದ ಜಗನ್ನಾಥ್ ಸಾಲ್ಯಾನ್, ವಿಠಲ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ವಿಟ್ಲ ಘಟಕ ಅಧ್ಯಕ್ಷರಾದ ಮೋಹನ್ ಸೇರಾಜೆ, ರಘುರಾಮ ರೈ ಮುಖ್ಯ ಅತಿಥಿಗಳಾಗಿದ್ದರು. ಶ್ರೀಕೃಷ್ಣ ವಿಟ್ಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಮ್ಯ ರಾಜೇಶ್ ಭಟ್ ಹಾಗೂ ಹರೀಶ್ ಮರುವಾಳ ಕಾರ್ಯಕ್ರಮ ನಿರೂಪಿಸಿದರು. ಸುಕನ್ಯಾ ಸೇರಾಜೆ ಪ್ರಾರ್ಥಿಸಿ, ಲಕ್ಷ್ಮಣ್ ಮಾಡ ಧನ್ಯವಾದಗೈದರು ಶಿಬಿರದಲ್ಲಿ ಲಭ್ಯವಿದ್ದ ಸೇವೆಗಳು : ದಂತ ಚಿಕಿತ್ಸೆ ವಿಭಾಗ, ಸಾಮಾನ್ಯ ವೈದ್ಯಕೀಯ ವಿಭಾಗ, ಬಿ.ಪಿ, ಶುಗರ್ ತಪಾಸಣೆ, ನೇತ್ರ ತಪಾಸಣ, ರಕ್ತದಾನ, ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸೆ,ಎಲುಬು, ಚರ್ಮ ಮತ್ತು ಮಕ್ಕಳ ಚಿಕಿತ್ಸೆ, ಇಸಿಜಿ ಹಾಗೂ ಕಣ್ಣು ಪರೀಕ್ಷೆ ನಡೆಸಿ ಉಚಿತ ಕನ್ನಡಕ ವಿತರಿಸಲಾಯಿತು. ಶಿಬಿರದಲ್ಲಿ ನೂರಾರು ಜನ ಸೌಲಭ್ಯ ಪಡೆದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಕಾರ್ಯಕರ್ತರು ಸಹಕರಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ