• 8 ಸೆಪ್ಟೆಂಬರ್ 2024

ಕಡಬ: ಸೇವಾಪ್ರತಿನಿಧಿಗಳ 2024-25ನೇ ಸಾಲಿನ ನವೀಕರಣ ಕಾರ್ಯಕ್ರಮ.

 ಕಡಬ: ಸೇವಾಪ್ರತಿನಿಧಿಗಳ 2024-25ನೇ ಸಾಲಿನ ನವೀಕರಣ ಕಾರ್ಯಕ್ರಮ.
Digiqole Ad

ಕಡಬ: ಸೇವಾಪ್ರತಿನಿಧಿಗಳ 2024-25ನೇ ಸಾಲಿನ ನವೀಕರಣ ಕಾರ್ಯಕ್ರಮ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವಧ್ಧಿ ಯೋಜನೆಯ ಕಡಬ ತಾಲೂಕಿನ ಕಡಬ ವಲಯ ಹಾಗೂ ಬಿಳಿನೆಲೆ ವಲಯದ ಸೇವಾಪ್ರತಿನಿಧಿಗಳ 2024-25ನೇ ಸಾಲಿನ ನವೀಕರಣವು ಕಡಬ ಯೋಜನಾ ಕಛೇರಿ ಸಭಾಂಗಣದಲ್ಲಿ ನಡೆಯಿತು.
ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ನಾವೂರು ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಸಮರ್ಪಕವಾಗಿ ಅನುಷ್ಟಾನಿಸಲು ಸ್ಥಳೀಯ ವಾಗಿ ಸೇವಾ ಮನೋಭಾವನೆ ಯುಳ್ಳ ಆಸಕ್ತರನ್ನು ಗುರುತಿಸಿ ಸೇವಾಪ್ರತಿನಿಧಿ ಯಾಗಿ ಆಯ್ಕೆಮಾಡಲಾಗುವುದು.
ತಮ್ಮ ಕೌಟುಂಬಿಕ ಕೆಲಸ ದೊಂದಿಗೆ ಗ್ರಾಮೀಣ ದುರ್ಬಲ ವರ್ಗದ ಜನರನ್ನು ಸರ್ವತೋಮುಖವಾಗಿ ಸಭಲರನ್ನಾಗಿಸಲು ಸೇವಾಪ್ರತಿನಿಧಿಗಳು ಸೇವಾಮನೋಭಾವನೆಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ.
ಸೇವಾಪ್ರತಿನಿಧಿಗಳು ಸೇವಾಮನೋಭಾವನೆಯೊಂದಿಗೆ ಕೆಲಸ ಮಾಡುವುದರಿಂದ ಕುಟುಂಬದ ಗೌರವ ಹೆಚ್ಚಾಗುವುದರ ಜೊತೆಗೆ ಆರ್ಥಿಕವಾಗಿಯೂ ಸದೃಡರಾಗಲು ನಾಯಕತ್ವವನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಬಿಳಿನೆಲೆ ವಲಯ ಮೇಲ್ವೀಚಾರಕ ಆನಂದ್ ಡಿ ಬಿ ಉಪಸ್ಥಿತರಿದ್ದರು.
ಕಡಬ ವಲಯದ ಸೇವಾಪ್ರತಿನಿಧಿ ಸಂಧ್ಯಾ ಸ್ವಾಗತಿಸಿ ಸುಗುಣ ವಂದಿಸಿದರು.
ಸೇವಾಪ್ರತಿನಿಧಿ ಸರಿತಾ ಕಾರ್ಯಕ್ರಮ ನಿರೂಪಿಸಿದರು.
ಕಡಬ ಹಾಗೂ ಬಿಳಿನೆಲೆ ವಲಯದ ಸೇವಾಪ್ರತಿನಿಧಿಗಳು ಹಾಗೂ ಸೇವಾಪ್ರತಿನಿಧಿಗಳ ಪೋಷಕರು ಉಪಸ್ಥಿತರಿದ್ದು 2024-25ನೇ ಸಾಲಿನ ಸೇವಾಪ್ರತಿನಿಧಿ ಗಳ ನವೀಕರಣ ನಡೆಯಿತು.

Digiqole Ad

ಈ ಸುದ್ದಿಗಳನ್ನೂ ಓದಿ