• 8 ಸೆಪ್ಟೆಂಬರ್ 2024

ಸಾಹಿತಿ, ಭಾಷಾಂತರ ಸಮಾಜ ಸೇವಕ ಕೆ.ವಿ ಕುಮಾರನ್ ಮಾಸ್ಟರ್ ಗೆ  ಕಾಸರಗೋಡು   ಕನ್ನಡ ಭವನದ “ಗುರು ನಮನ” ಹಾಗೂ “ಕನ್ನಡ ಭವನ” ಅಭಿನಂದನಾ ಪ್ರಶಸ್ತಿ.

 ಸಾಹಿತಿ, ಭಾಷಾಂತರ ಸಮಾಜ ಸೇವಕ ಕೆ.ವಿ ಕುಮಾರನ್ ಮಾಸ್ಟರ್ ಗೆ  ಕಾಸರಗೋಡು   ಕನ್ನಡ ಭವನದ “ಗುರು ನಮನ” ಹಾಗೂ “ಕನ್ನಡ ಭವನ” ಅಭಿನಂದನಾ ಪ್ರಶಸ್ತಿ.
Digiqole Ad

ಸಾಹಿತಿ, ಭಾಷಾಂತರ   ಸಮಾಜ ಸೇವಕ ಕೆ.ವಿ ಕುಮಾರನ್ ಮಾಸ್ಟರ್ ಗೆ  ಕಾಸರಗೋಡು   ಕನ್ನಡ ಭವನದ “ಗುರು ನಮನ ” ಹಾಗೂ “ಕನ್ನಡ ಭವನ” ಅಭಿನಂದನಾ ಪ್ರಶಸ್ತಿ.

 

ಕಾಸರಗೋಡು :28.7.2024 ಆದಿತ್ಯವಾರ ಬೆಳಿಗ್ಗೆ 9.30 ಗಂಟೆಗೆ ಶ್ರೀ ಕೆ.ವಿ ಕುಮಾರನ್ ಇವರ ವಿದ್ಯಾನಗರದ ಸ್ವಗ್ರಹದಲ್ಲಿ ಕಾರ್ಯಕ್ರಮ ನಡೆಯಲಿದೆ.
ಶಿವರಾಮ ಕಾರಂತರ ಚೋಮನ ದುಡಿ, ಭೈರಪ್ಪ ನವರ ಯಾನ, ಗೋಪಾಲಕೃಷ್ಣ ಪೈ ಯವರ ಸ್ವಪ್ನ ಸಾರಸ್ವತ ಸಹಿತ ಹಲವು ಕಾದಂಬರಿಗಳನ್ನು ಮಲಯಾಲಕ್ಕೆ ಅನುವಾದಿಸಿದ ಕೆ.ವಿ ಕುಮಾರನ್ ರವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಅವಾರ್ಡ್ ಪ್ರಕಟಿಸಿದೆ. ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಈ ಗೌರವ ಪ್ರಶಸ್ತಿ ಲಭಿಸಿದೆ. ಇವರು ಹೈಸ್ಕೂಲ್ ಅಧ್ಯಾಪಕರಾಗಿ, ಸಹಾಯಕ ವಿದ್ಯಾಧಿಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ  ಜೀವನವನ್ನು ಸಾಹಿತ್ಯ ಸೃಷ್ಟಿ, ಹಾಗೂ ವಿವಿಧ ಸಂಘಟನೆಗಳ ಸಾಹಿತ್ತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇವರು ಹಿಂದಿನಿಂದಲೂ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.
ಇವರ ಸಾಹಿತ್ಯ, ಸಾಮಾಜಿಕ ಸರ್ವತೋಮುಖ ಸೇವೆಯನ್ನು ಪರಿಗಣಿಸಿ ಕನ್ನಡ ಭವನ “ಗುರು ನಮನ “ನೀಡಿ ಗೌರವಿಸಲಿರುವುದು. ಕೇರಳ ಸಾಹಿತ್ಯ ಅಕಾಡೆಮಿ ಅವಾರ್ಡ್ ಲಭಿಸಿದ ಈ ಸುವಾರ್ತೆಯನ್ನು ಪರಿಗಣಿಸಿ ಇವರಿಗೀಗ “ಕನ್ನಡ ಭವನ” ಅಭಿನಂದನಾ ಪ್ರಶಸ್ತಿ ಯನ್ನು ಕೂಡ ನೀಡಿ ಅಭಿನಂದಿಸಲಿರುವುದು.
ಸಾಹಿತ್ಯ ಅಭಿಮಾನಿಗಳು, ಕುಮಾರನ್ ಮಾಸ್ಟರ್ ಇವರ ಅಭಿಮಾನಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕೆಂದು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಇದರ ಸ್ಥಾಪಕ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ವಿನಂತಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ