• 8 ಸೆಪ್ಟೆಂಬರ್ 2024

STORY:- ಪುಕ್ಸಟ್ಟೆ ಸಲಹೆ

 STORY:- ಪುಕ್ಸಟ್ಟೆ ಸಲಹೆ
Digiqole Ad

ಪುಕ್ಸಟ್ಟೆ ಸಲಹೆ

ಈ ಎಲ್ಲಾ ಯೋಚನೆಗಳು ಕೆಲವಿಲ್ಲದ ಸಮಯದಲ್ಲೇ ಬರುವುದು ಮಾರ್ರೆ… ಅದ್ರಲ್ಲೂ ಕನಸು ಕಾಣುವ ಹುಚ್ಚು… ಕೆಲವು ಕನಸು ನನಸಾಗುವಂತ್ತದೆ.. ಇನ್ನು ಕೆಲವು ಈ ಜನ್ಮದಲ್ಲಿ ಆಗದ್ದು… ಹೀಗೆ ಕುಳಿತು ಯೋಚನೆ ಮಾಡುವಾಗ ಹೀಗೊಂದು ಯೋಚನೆ ಬಂತ್ತು.. ಎಲ್ಲರೂ ದೇಶದ ಬಗ್ಗೆ ಯೋಚನೆ ಮಾಡುವಾಗ ನಾನು ಸುಮ್ಮನೆ ಊರಿನ ಬಗ್ಗೆ ಆಲೋಚನೆ ಮಾಡಲು ಹೊರಟೆ…ಊರು ಅಂದ್ರೆ ಬರೇ ಊರು ಅಲ್ಲ ಸಾವಿರಾರು ಊರು ಕೇರಿ ಸೇರಿ ದೇಶ.. ದೇಶವೆಂದರೆ ದೊಡ್ಡದೊಂದು ಹೆಮ್ಮರ ಇದ್ದಂತ್ತೆ.. ಈ ಮರದ ಮೂಲ ಬೀಜವೇ ಆಗಿರಬಹುದು.. ಆ ಬೀಜವೇ. ಊರು ಯಾಕಾಗಬಾರದು ಅಲ್ವಾ… ಮರದಿಂದ ಬೀಜವೋ.. ಬೀಜದಿಂದ ಮರವೊ ಏನೇ ಇರಲಿ.. ಮೊದಲು ಬೀಜ ಉತ್ತಮವಿದ್ದರೆ ಮೊಳಕೆಯೊಡೆದು ಸಸಿಯಾಗಿ ಮರವಾಗಿ ನೆರಳು ಕೊಡಬಲ್ಲದು…. ಅದೇ ರೀತಿ ಮೊದಲು ನಾವು ಊರ ಅಭಿವೃದ್ಧಿ ಮಾಡಿದರೆ ಅದನ್ನು ನೋಡಿ ಪಕ್ಕದ ಊರಿನವರೂ ಅಭಿವೃದ್ಧಿ ಮಾಡುತ್ತಾರೆ ..(ಎಂಬ ಭ್ರಮೆ).. ಬಹರದಿಂದ ಬದಲಾವಣೆ ಸಾಧ್ಯವಿಲ್ಲ ಯಾಕಂದ್ರೆ ಬರಹವನ್ನು ಸರಿಯಾಗಿ ಓದೊದು ನಮ್ಮಂತವರೆ ಹೊರತು ರಾಜಕೀಯ ರಂಗದರು ಓದೊದು ಬಹಳ ಕಡಿಮೆ.. ಅವರಿಗೆಲ್ಲಿ ಪುರ್ಸೊತ್ತು ಉಂಟ್ಟು ಮಾರ್ರೆ.. ಕತೆ ಕವನ ಕಾದಂಬರಿ, ಪ್ರಬಂಧ ಓದ್ಲಿಕ್ಕ ಅವರು ರಾಜಕೀಯ ಸೇರಿದ್ದು … ದೊಡ್ಡ ಮಂತ್ರಿ ಮಹೋದಯರ ವಿಷಯ ನಮ್ಗೆ ಯಾಕೆ ಅಲ್ವ.. ನಾವು ಊರ ಮೆಂಬರ್ನ ಬಗ್ಗೆಯೇ ಮಾತಾಡಲ್ಲ.. ಮಾತಾಡಿದರು ಪ್ರಯೋಜನವಿಲ್ಲ.. ಯಾರೇ ಏನೇ ಸಮಸ್ಯೆ ಹೇಳಿದ್ರೂ ಮೊದಲ ಉತ್ತರ.. “ಅವು ಅಂಚ್ಚ ಪೂರ ಆಪುಜಣ್ಣಾ..ಅಯ್ಕೊಂಜಿ ನಿಯಮ ರೀತಿಂದ್ ಉಂಡು” ಅಂತ ಹೇಳುವಾಗ ಸಮಸ್ಯೆ ಹೇಳಲು ಬಂದವನೆ ಗೂಡಂಗಡಿಯಲ್ಲಿ ಚಾಯ ಕುಡಿಸಿ ಕಳುಹಿಸಬೇಕಷ್ಟೆ.. ದೊಡ್ಡ ದೊಡ್ಡ ಪೇಟೆಗಳಲ್ಲಿ. ನಾಲ್ಕು ಕವಲಿನ ರೋಡುಗಳು.. ಅದಕ್ಕೆ ನೂರಾರು ಜಗಮಗಿಸುವ ಲೈಟುಗಳು.. ನಾವು ಬೇರೆ ದೇಶದವರಂತೆ ಹೋಲಿಕೆ ಮಾಡಿಕೊಳ್ಳೊದು…

ನಮ್ಮ ಸಂಸ್ಕೃತಿ ನಮ್ಮ ನೆಲದ ರೀತಿಯೇ ಬೇರೆ ನಾವು ಅದಕ್ಕೆ ನಾವು ಹೊಂದಿಕೊಂಡು ಹೋಗಬೇಕು.. ಹಲವು ಮಾರ್ಗ ಮಾಡಿದರೆ ಊರ ಬಡವನಿಗೆ ಏನು ಮಾಡುವುದು.? ದೊಡ್ಡ ದೊಡ್ಡ ಮೂರ್ತಿ ಮಾಡಿದರೂ ಹಳ್ಳಿಯ ಬಡವರ ಬಡತನ ಹೋದಿತೇ… ಇಲ್ಲ .. ಇನ್ನೂ ಉಚಿತ ಕೊಡುಗೆಗಳ ಬಗ್ಗೆ ನೋಡಿದರೆ. .‌ ಕೆಲವರು ರೇಶನ್ ಅಕ್ಕಿಯನ್ನು ಬೇಯಿಸಿ ಹಂದಿಗಳಿಗೆ ಕೊಡುತ್ತಾರೆ ಹೊರತು ನಾವು ತಿನ್ನುವಷ್ಟು ಯೋಗ್ಯವಲ್ಲ…ಎಷ್ಟೊ ಮನೆಗಳಲ್ಲಿ ಆ ಅಕ್ಕಿ ಕೊಳೆತು ನಾರುತ್ತಿದೆ.. ಹೇಗು ಅಕ್ಕಿ ಕೊಡುವಾಗ. ಆಯಾಯ ಜಿಲ್ಲೆಯ ಜನ ದಿನ ಬಳಸುವಂತ್ತಹ ಉತ್ತಮವಾದ ಅಕ್ಕಿಯನ್ನು ಯಾಕೆ ಕೊಡಬಾರದು… ಹಾಗೆ ಎಲ್ಲಾ ಉಚಿತ ಕೊಟ್ಟರೆ ನಾನು ಸೋಮಾರಿಯಾಗುತ್ತೇನೆ.. ಕೆಲಸದ ಚಿಂತೆ ಸುಮ್ಮನೆ ಯಾಕೆ ಅಲ್ವ…. ಅಲ್ಲಾ ಮಾರ್ರೆ ಈ ರೇಶನ್ ಅಕ್ಕಿಯಿಂದ ಮಾಡಿದ ಅನ್ನವನ್ನು ಯಾವನಾದ್ರು ಮಂತ್ರಿ ಮಹಾಶಯ ಒಮ್ಮೆಯಾದರು ತಿಂದಿರುವನೆ..? ಕೆಲವು ಯೋಜನೆಗಳಲ್ಲಿ ಬಾಡಿಗೆ ರೂಂ ಅಲ್ಲಿ ಇದ್ದವರಿಗೆ ಏನು ಮಣ್ಣಂಗಟ್ಟಿಯು ಇಲ್ಲ. ಅವರ ಓಟು ಮಾತ್ರ… ಎರಡು ಪಿಕಾಸು ಮಣ್ಢು ಅಗೆದು ಫೊಟೊ ತೆಗೆದರೆ ಅದು ಉದ್ಯೋಗ ಖಾತ್ರಿ.. ಅವ್ಯವಹಾರಗಳು… ಯಾರಲ್ಲಿ ಹೇಳೊದು… ಪಂಚಾಯತ್ ಮೆಂಬರ್‌ನಲ್ಲಿ ಮಾತಾಡಬೇಕಿದರೆ. ಟೋಕನ್ ಮಾಡಬೇಕಾದ ಪರಿಸ್ಥಿತಿ… ಇವರಿಗೆ ಊರ ಸಮಸ್ಯೆ ಅಂದ್ರೆ ಅಲರ್ಜಿ ಸುರುವಾಗತೊಡಗುತ್ತದೆ.. ಕುಡಿಯುವ ನೀರಿನ ಅವಸ್ಥೆ.. ಹೇಳಿ ಗುಣವಿಲ್ಲದ್ದು.. ಅಂತರ್ಜಲ ಕುಸಿತ ಭೂಮಿಯಲ್ಲಿ ವಸರು ಇಲ್ಲ ಎಂದು ನಳ್ಳಿಯಿಂದ ತೊಟ್ಟಿಕ್ಕುವ ನೀರ ಹನಿಯ ಫೊಟೊ ರೆಡಿ ಮಾಡಿ ..ನೀರು ಉಳಿಸಿ ಎಂದು ಬೋರ್ಡು ಹಾಕಿದರೆ. ನೀರು ತುಂಬುವುದೇ..?

ಸಕಲ ಸರಕಾರಿ ಗೌರವಗಳೊಂದಿಗೆ ಕಾಡಿನ ಮರವನ್ನು ಕಡಿದು ವನಪಾಲಕರ ಸೂಚನೆಯಂತ್ತೆ ಲಾರಿ ಲಾರಿ ಸಾಗಿಸಿ ಬರಡು ಭೂಮಿ ಸೃಷ್ಟಿ ಮಾಡುವವರು ಯಾರು..? ಪೇಟೆಯಲ್ಲಿ ಒಂದು ಬಿಸಿಲಿಗೆ ನಿಲ್ಲಲಾಗದ ಪರಿಸ್ಥಿತಿಯನ್ನು ನಮ್ಮ ಊರಿಗೂ ತರುವ ಮಹಾನ್ ಸಾಧಕರು ಯಾರು..? ಕಾಡು ಬೆಳೆಸಿ ನಾಡು ಉಳಿಸಿ.. ಆ ಬೋರ್ಡು ಓದಿ ಮರ ಬೆಳೆಯಬೇಕು… ಮಳೆಗಾಲ ಸುರುವಾಗಿ ಮುಗಿಯುವ ಹೊತ್ತಿಗೆ ಚರಂಡಿ ರಿಪೇರಿ.. ಅದೂ ಗಂಡಿಯಿಂದ ಮಣ್ಣು ಕಸ ತೆಗೆದು ಅಲ್ಲೆ ಹಾಕಿಬಿಡುವುದು..ಯಾಕಂದ್ರೆ ಜೆಸಿಬಿ ಗಂಟೆಲೆಕ್ಕ ಅಲ್ವಾ… ಇದೆಲ್ಲ ನಮ್ಮ ಊರಿನ ಸಮಸ್ಯೆ.. ಇದನ್ನು ಪಂಚಾಯತ್ ಮೆಂಬರುಗಳೇ ಪ್ರತೀ ವಾರ ವಾರ ತಮ್ಮ ತಮ್ಮ ವಾರ್ಡ್‌ಗಳಿಗೆ ಬೇಟಿ ನೀಡಿ ಸಮಸ್ಯೆಗಳನ್ನು ನೋಡಿ ಅದಕ್ಕೆ ಬೇಕಾದ ಪರಿಹಾರ ನೀಡ ಬೇಕೆ ಹೊರತು ತಿಂಗಳ ಸಭೆಯ ಬಿಸ್ಕೆಟ್ ಚಾಯದಲ್ಲಿ ಪರಿಹಾರ ಸಿಗದು.. ಓಟಿನ ಹೊತ್ತು ಮನೆ ಮನೆಗೆ ತಿರುಗಾಟ ಮಾಡುದಿಲ್ಲವೇ.. ಜನಾಸೇವೆಗೆಂದು ನಿಂತ್ತವನಿಗೆ ಅದೇ ಕೆಲಸವಲ್ಲದೆ ಪ್ಯಾನಿನಡಿಯಲ್ಲಿ ಪೇಪರ್ ಓದುವುದಕ್ಕಲ್ಲ.. ಕೆಲವು ಕಡೆ ವಿದ್ಯುತ್ತಿನ ಸಮಸ್ಯೆ. ಕಂಬ ಹಾಕಿ ಲೈನ್ ಎಳೆಯಲು ಅರಣ್ಯ ಇಲಾಖೆಯವರು ಬಿಡುವುದಿಲ್ಲ ಸಣ್ಣ ಗೆಲ್ಲು ಕಡಿಯಲೂ ಬಿಡದ ಪಾಲಕರು. ದೊಡ್ಡ ದೊಡ್ಡ ದಿಮ್ಮಿಗಳು ಸಾಗುವಾಗ ಬೆನ್ನು ಹಾಕಿ ತಿರುಗಿ ನಿಲ್ಲುತ್ತಾರೆ… ಕರೆಂಟ್ ಎಲ್ಲರಿಗೂ ಬೇಕು ಎಲ್ಲರೂ ನಮ್ಮವರೆ. ಒಂದೇ ಸರಕಾರದ ಅಡಿಯಲ್ಲಿ ಕೆಲಸ ಮಾಡೊರು ಅಂದ ಮೇಲೆ. ವೈರಿ ದೇಶಗಳ ಅಧಿಕಾರಿಗಳಂತೆ ಯಾಕೆ ಆಡೊದು.. ಹೊಂದಾಣಿಕೆ ಮಾಡಿ ಕೊಂಡು ಎರಡೂ ಇಲಾಖೆಯೂ ನಮ್ಮದೆ ಎನ್ನುವ ಭಾವನೆ ಯಾಕೆ ಬರಲ್ಲ..?? ಹಾಗೆ ನೋಡಿದರೆ ಎಷ್ಟೊಂದು ಸಮಸ್ಯೆ ಇದೆ ಅಲ್ವ ನಮ್ಮ ಊರಲ್ಲಿ .. ಮೊದಲು ಊರು ಉದ್ದಾರ ಆದ್ರೆ ಎಲ್ಲಾನು ಉದ್ದಾರ ಆಗ ಬಹುದು ಎಂಬ ನನ್ನ ಯೋಚನೆ ಮಾತ್ರ.. ನಿಮ್ಮ ಪ್ರಕಾರ ಹೇಗಿದ್ದರ ಉತ್ತಮ… ನನ್ಗೆ ಯೋಚಿಸಿ ಯೋಚಿಸಿ ಮಂಡೆಬೆಚ್ಚವಾಗ್ತಾ ಬಂತ್ತು.. ನೀವು ನಿಮ್ಮ ಅಭಿಪ್ರಾಯವನ್ನು ತಪ್ಪದೆ ತಿಳಿಸಿ ಅಲ್ಲಿಯವರೆಗೆ ನಾನು ರಪ್ಪ ಹೋಗಿ ಕಟ್ಟಂಚಾಯ ಕುಡಿದು ಬರುವೆ…

 

Suggestion

M ರಾಮ ಈಶ್ವರಮಂಗಲ

( ನಾಟಕ ಬರಹಗಾರ,ನಿರ್ದೇಶಕ)

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ