• 8 ಸೆಪ್ಟೆಂಬರ್ 2024

ಬರಹಕ್ಕೊಂದು ಬಂಗಾರದಂತಹ ಅವಕಾಶ: ಲೇಖಕರ ಪ್ರೀತಿಯ ಪತ್ರ! ‌‌

 ಬರಹಕ್ಕೊಂದು ಬಂಗಾರದಂತಹ ಅವಕಾಶ: ಲೇಖಕರ ಪ್ರೀತಿಯ ಪತ್ರ! ‌‌
Digiqole Ad

” ಪ್ರತಿಭೆ ” ಪ್ರತೀ ಒಬ್ಬರಲ್ಲೂ ಒಂದೊಂದು ರೀತಿಯ ‌ಪ್ರತಿಭೆಗಳು ಇರುತ್ತವೆ..‌ ಚಿತ್ರ ಕಲೆ, ನಾಟಕ, ಸಂಗೀತ, ಬರಹ, ಇಂತಹ ಹಲವಾರು ರೀತಿಯ ಕಲಾ ಪ್ರತಿಭೆಗಳು ಇರುತ್ತವೆ.. ಆದ್ರೆ ಅದನ್ನು ಪ್ರಕಟಪಡಿಸಲು ಕೆಲವರಿಗೆ ಸಂಕೋಚ ಯಾರು ಏನಂದು ಕೊಳ್ತಾರೊ ಏನೊ ಎನ್ನುವ ಸಂಕೋಚ.. ಇನ್ನೂ ಕೆಲವರಿಗೆ ಸರಿಯಾದ ವೇದಿಕೆ ಸಿಕ್ಕಿಲ್ಲ ಎಂಬ ಕೊರಗು, ಇನ್ನೂ ಕೆಲವರಿಗೆ ಅವಕಾಶ ಸಿಕ್ಕಿದರೆ ದೊಡ್ಡದಾದ ವೇದಿಕೆಯೇ ಸಿಗಬೇಕು ಎಂದು ಹುಡುಕಾಟ… ಸಿಗದಿದ್ದಾಗ ನಿರಾಸೆ..

ಹಿಂದಿನ ಹಾಗೆ ಈಗ ಇಲ್ಲ ಈಗ ಮೊಬೈಲ್ ಬಂದ ನಂತ್ತರ ತಾವು ರಚಿಸಿದ ಕಲಾ ಪ್ರಕಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಬಿಡುತ್ತಾರೆ.. ಕೆಲವರಿಗೆ ಅದು ಹೆಸರನ್ನು ಕೀರ್ತಿಯನ್ನು ತಂದು ಕೊಟ್ಟಿದೆ..

ಹಿಂದೆಯಾದಾರೆ ಪತ್ರಿಕೆಗಳ ಕಾಲ ನಾವು ಬರೆದು ಕಳುಹಿಸಿದ ಲೇಖನವಾಗಲಿ ,ಕತೆ, ಕಾದಂಬರಿಯೆ ಇರಲಿ. ಅದನ್ನು ಪತ್ರಿಕೆಯವರು ಪ್ರಕಟಿಸಲು ಯೋಗ್ಯವಾದದನ್ನು ಆಯ್ಕೆ ಮಾಡಿ ಪ್ರಕಟಿಸುವ ಕಾಲ .. ನಾವು ಕಳುಹಿಸಿದ ಲೇಖನ ಪತ್ರಿಕೆಯಲ್ಲಿ ಬಂದ್ರೆ ಅದು ಒಂದು ಪದ್ಮಭೂಷಣ ಪ್ರಶಸ್ತಿ ಗೆದ್ದಂತ್ತಹ ಅನುಭವ..ಅಷ್ಟು ಕುಶಿ.. ನೆರೆಕರೆಯವರಲ್ಲಿ ಅದೇ ರಾಗ .. ನನ್ನ ಕತೆ ಪೇಪರಲ್ಲಿ ಬಂದಿದೆ ಮಾರ್ರೆ…

ನಾವೆಲ್ಲ ಬಾಲಮಿತ್ರ, ಚಂದಮಾಮ, ಓದುತ್ತಿರುವಾಗ ನಮಗೂ ಈ ತರ ಬರಿಬೇಕು ಅನಿಸುತಿತ್ತು.. ಬಾಲ ಮಿತ್ರ ,ಚಂದಮಾಮದ ಕತೆಗಳನ್ನು ಓದುವಾಗ. ಆ ಕಾಲಕ್ಕೆ ಅದೇ ಸಿನಿಮದ ತರ.. ನಂತ್ತರ ಬಾಲಮಂಗಳ ಪ್ರಾರಂಭವಾಯಿತು.. ಎಲ್ಲಾ ಹಿರಿ ಕಿರಿಯರ ಅಚ್ಚುಮೆಚ್ಚಿನ ಪತ್ರಿಕೆಯಾಗಿ ಪ್ರಸಿದ್ದಿ ಪಡೆಯಿತು. ಅದ್ರಲ್ಲಿ ಮಕ್ಕಳಿಗೆ ಸ್ಪರ್ಧೆಯೂ ಇತ್ತು.. ಮಕ್ಕಳ ಬರಹಕ್ಕೂ ಚಿತ್ರಗಳಿಗೂ ಪ್ರೋತ್ಸಾಹ ಕೊಡುತಿದ್ದರು.. ಅದೇ ಹೊತ್ತಿಗೆ ಪ್ರತೀ ಮನೆಯಲ್ಲೂ ಮಂಗಳ ವಾರ ಪತ್ರಿಕೆ ಮಿಂಚತೊಡಗಿತು. ಅತೀ ಹೆಚ್ಚು ಬೇಡಿಕೆಯ ಪತ್ರಿಕೆಯಾಗಿ ಪ್ರಸಿದ್ದಿ ಗಳಿಸಿತು , ಬೀಡಿ ಕಟ್ಟುವ ಮಹಿಳೆಯರು ತಮ್ಮ ಬೀಡಿನ ಸೂಪಿನಲ್ಲೆ ಇರಿಸಿಕೊಂಡು. ಅದರಲ್ಲಿ ಬರುವ ಕಾದಂಬರಿ ಕತೆ ಕವನಗಳನ್ನು ಓದುತ್ತಾ ಇರುತ್ತಿದ್ದರು.. ಕೆಲವರು ಕವಿತೆ ಕತೆ,ಓದುಗರ ಸವಾಲ್, ಪದಪಂದಗಳನ್ನು ಬರೆದು ಕಳುಹಿಸಲಾರಂಬಿಸಿದರು..

ಇಷ್ಟೆಲ್ಲ ಪೀಠಿಕೆ ಯಾಕೆಂದ್ರೆ. ಈಗಿನ ಹವ್ಯಾಸಿಗರಲ್ಲಿ ಒಂದು ಮಾತು ಹೇಳ್ತೇನೆ.. ನಿಮ್ಮ ಹೆಸರನ್ನು. ನೀವೇ ಮೊದಲು ಗೌರವಿಸಬೇಕು.. ಯಾರು ಅವಕಾಶ ಕೊಟ್ಟಿಲ್ಲ ಎಂದು ಕೊರಗದಿರಿ.. ನೀವೆ ಪ್ರಚಾರ ಪಡಿಸಿಕೊಳ್ಳಿ ಬೇರೆಯವರು ಏನಂದು ಕೊಳ್ತಾರೊ ಎಂಬ ಕೀಳರಿಮೆ ಬಿಟ್ಟು ಬಿಡಿ.. ನಿಮ್ಮ ಪ್ರತಿಭೆಗೆ ನೀವೇ ಮೊದಲ ಸ್ಟಾರ್ ಪ್ರಚಾರಕರು.. ನಂತ್ತರ ನಿಮ್ಮನೇ ಅವಕಾಶಗಳು ಹುಡುಕಿ ಕೊಂಡು ಬರುತ್ತವೆ.. ಈಗ ಹಲವಾರು ವೆಬ್ ಸೈಟ್‌ಗಳು. ಬ್ಲಾಗ್‌ಗಳು ಇವೆ.. ನಿಮ್ಮದೇ ಆದ ಒಂದು ಬ್ಲಾಗ್ ರಚಿಸಿ ಅದರಲ್ಲಿ ನಿಮ್ಮನು ಗುರುತಿಸಿಕೊಳ್ಳಿ..

ಇಲ್ಲಿ ನಾನು ಈ ಗೋಲ್ಡನ್ ಫ್ಯಾಕ್ಟರಿಯ ಸಂಪಾದಕರಿಗೆ ,ಹಾಗು ತಂಡದವರಿಗೆ ಧನ್ಯವಾದವನ್ನು ಹೇಳ ಬಯಸುತ್ತೇನೆ..ಯಾಕಂದ್ರೆ ನಾನು ಒಬ್ಬ ನಾಟಕ ರಚನೆಗಾರ .. ಇಲ್ಲಿ ನನ್ನ ಬರಹಕ್ಕು ಮಾನ್ಯತೆ ನೀಡಿ ಪ್ರಕಟಿಸಿ ಪ್ರೋತ್ಸಾಹ ನೀಡಿದ್ದಾರೆ.. ನನ್ನಂತ್ತಹ ಸಣ್ಣ ಪುಟ್ಟ ಬರಹಗಾರರಿಗೆ. ಈ” ಗೋಲ್ಡನ್ ಫ್ಯಾಕ್ಟರಿ” ಒಂದು ಉತ್ತಮ ವೇದಿಕೆಯಾಗಿ ಎಲ್ಲಾ ತರದ ಹವ್ಯಾಸಿ ಬರಹಗಾರಿಗೂ ಬಂಗಾರದ ಅವಕಾಶಗಳು ಸಿಗಲಿ ಎಂಬುದೇ ನನ್ನ ಆಶಯ.. ತಾವು ಬೆಳೆಯುತ್ತಾ. ಇತರರನ್ನು ಬೆಳೆಸುವ ಈ “ಗೋಲ್ಡ್ ಫ್ಯಾಕ್ಟರಿ” ಇನ್ನೂ ಎತ್ತರಕ್ಕೆ ಬೆಳೆದು ಹೆಸರವಾಸಿಯಾಗಿ ಪ್ರಸಿದ್ದಿಯನ್ನು ಪಡೆಯಲಿ…

M RAMA ISHWARAMANGALA (ನಾಟಕ ಬರಹಗಾರ, ನಿರ್ದೇಶಕ )

ನಿಮ್ಮ ಪ್ರೀತಿಯ ಬರಹಕ್ಕೆ ಚಿರಋಣಿ ಸರ್  – by GOLD FACTORY NEWS TEAM 

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ