• 8 ಸೆಪ್ಟೆಂಬರ್ 2024

ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ!

 ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ!
Digiqole Ad

ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ!

ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತನ್ನ ಗಂಡನನ್ನು ಅಪಘಾತದಲ್ಲಿ ಕಳೆದುಕೊಂಡರೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನ ಓದಿಸುವ ತಾಯಿ ಕನಸು. ಆದರೆ, ಮನೆಯಲ್ಲಿ ದುಡಿಯುವುದು ಈ ತಾಯಿ ಮಾತ್ರ. ಬೇರೆ ಯಾರ ಆಸರೆ ಇಲ್ಲದೇ, ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿಕೊಂಡು ಮಕ್ಕಳನ್ನು ದಡ ಸೇರಿಸುವ ಆ ತಾಯಿಯ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಬಡತನದ ಬೇಗೆಯ ನಡುವೆ ಈಕೆಯ ಮಗಳು ಮಾಡಿರುವ ಸಾಧನೆ ಕರುನಾಡು ಮೆಚ್ಚುವಂತದ್ದು.

ಹರಿಹರ ನಗರದಲ್ಲಿರುವ ಸಿಬಾರ ವೃತ್ತದ ನಿವಾಸಿ ಲತಾ ಎಂಬವರ ಪುತ್ರಿ ಭೂಮಿಕ ತಾಯಿಯ ಆಸರೆಯಲ್ಲೇ ಬೆಳೆದವರು. ಇದೀಗ ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ತಂದೆಯನ್ನು ಕಳೆದುಕೊಂಡ ಭೂಮಿಕಾರಿಗೆ ಆ ಕೊರಗು ನೀಗಿಸಿದವರು ತಾಯಿ ಲತಾ. ಅಂಗನವಾಡಿ ಕೇಂದ್ರದಲ್ಲಿ ಆಯಾ ಕೆಲಸ ಮಾಡುತ್ತಾ, ಎರಡು ಹಸುಗಳನ್ನು ಸಾಕುತ್ತಿದ್ದಾರೆ. ಇದರಿಂದ ಕೈ ಸೇರಿದ ಹಣದಿಂದ ತನ್ನ ಮೂರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಇದನ್ನು ಹೊರತುಪಡಿಸಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಲತಾ ಸಾಕಷ್ಟು ಸಾಲ ಕೂಡಾ ಮಾಡಿದ್ದರು.

ಭೂಮಿಕಾಫಾರ್ಮಸಿ ವ್ಯಾಸಂಗ ಮಾಡಿರುವ ಭೂಮಿಕ ಸಾಕಷ್ಟು ಅರ್ಜಿ ಹಾಕಿ ಕೆಲಸಕ್ಕಾಗಿ ಅಲೆದಿದ್ದರು. ಭೂಮಿಕ ನಿಷ್ಠೆಯಿಂದ ಓದಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದು ಕೇರಳದಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನೌಕಾದಳ ಮೊದಲನೇ ಪಟ್ಟಿಯಲ್ಲೇ ಇವರ ಹೆಸರು ಬಂದಿದ್ದು, ಕುಟುಂಬ ಖುಷಿ ಹೆಚ್ಚಿಸಿದೆ. ಏಳು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಲತಾ ಅವರ ಮೇಲೆ ಮೂರು ಮಕ್ಕಳ ಪಾಲನೆ ಪೋಷಣೆಯ ಹೊರೆ ಬಿದ್ದಿತ್ತು. ಪತಿ ಭೀಕರ ಅಪಘಾತದಲ್ಲಿ ಸಾವಿಗೀಡಾಗಿದ್ದರು.‌ ಈ ಸಂದರ್ಭದಲ್ಲಿ ಕಂಗೆಟ್ಟು ಕೂರದ ಲತಾ ಮಕ್ಕಳನ್ನು ಸಾಕಿ ಸಲುಹಿ ಉತ್ತಮ ಶಿಕ್ಷಣ ಕೊಡಿಸಿದ್ದಾರೆ.

ಭೂಮಿಕಾ ಬಾಲ್ಯ ಜೀವನ

ಭೂಮಿಕಾಭೂಮಿಕಾ ಬಾಲ್ಯ ಎಲ್ಲರಂತಿಲ್ಲ. ಒಂದೆಡೆ ತಂದೆ ಕಳೆದುಕೊಂಡ ನೋವು, ಮತ್ತೊಂದೆಡೆ ತಾಯಿಯೇ ಆಶಾಗೋಪುರ. ಅಮ್ಮನೇ ಎಲ್ಲವೂ. ಆಕೆ ಕಷ್ಟವನ್ನು ಕಣ್ಣಾರೆ ಕಂಡಾಕೆ. ಜೀವನದಲ್ಲಿ ಏನನ್ನಾದರೂ ಸಾಧಿಸಿ ತಾಯಿಯ ಕಣ್ಣೀರು, ಬಡತನದ ಬದುಕು ಬದಲಾಯಿಸಬೇಕೆಂಬ ಹಠ ತೊಟ್ಟವರು. ದಾವಣಗೆರೆಯಲ್ಲಿ 1 ಹಾಗೂ 2 ನೇ ತರಗತಿಯನ್ನು ರಶ್ಮಿ ಶಾಲೆಯಲ್ಲಿ ಓದಿದ ಈಕೆ ಹಾಸ್ಟೆಲ್‌ನಲ್ಲಿದ್ದರು. 3 ರಿಂದ 7ನೇ ತರಗತಿಯವರೆಗೆ ಹರಿಹರ ಜಿ ಹೆಚ್ ಪಿ ಎಸ್ ಶಾಲೆಯಲ್ಲಿ ಅಭ್ಯಾಸ ಮಾಡಿದ ಭೂಮಿಕಾ, 8ರಿಂದ 10ನೇ ತರಗತಿಯವರೆಗೆ ಸುತ್ತೂರಿನ ಜೆಎಸ್‌ಎಸ್ ಶಾಲೆಯಲ್ಲಿ ಓದಿದರು.

ಮೈಸೂರಿನ ದೊಡ್ಡಕಾನ್ಯ ಮೊರಾರ್ಜಿ ದೇಸಾಯಿ ರೆಸಿಡೆನ್ಶಿಯಲ್ ವಿದ್ಯಾರ್ಥಿನಿಯರ ಕಾಲೇಜು ಹಾಗೂ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಫಾರ್ಮಸಿ ಅಭ್ಯಾಸ ಮಾಡಿದರು. ಆ ಬಳಿಕ ಭಾರತೀಯ ನೌಕಾದಳಕ್ಕೆ ಅರ್ಜಿ ಆಹ್ವಾಸನಿಸಲಾಗಿತ್ತು.

ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದ ಭೂಮಿಕಾ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯಕ್ಕೆ ತರಬೇತಿ ಪಡೆದು ಆ ಬಳಿಕ ಕೆಲಸಕ್ಕೆ ಹೋಗಲಿದ್ದಾರೆ.

ಹರಿಹರ ಪಟ್ಟಣದ ಬಡ ಕುಟುಂಬದಲ್ಲಿ ಜನಿಸಿದ ಭೂಮಿಕಾ ಇಂದು ದೇಶದ ಪ್ರತಿಷ್ಠಿತ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗುವ ಮೂಲಕ ಬೆಂಕಿಯಲ್ಲಿ ಅರಳಿದ ಹೂವು ಎಂಬಂತೆ ಬಡತನಕ್ಕೆ ಸೆಡ್ಡು ಹೊಡೆದು ಜೀವನದಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಲಿ ಎಂಬುದು ಶಿಕ್ಷಕರು ಹಾಗೂ ಹರಿಹರ ಪಟ್ಟಣದ ಜನರ ಆಶಯವಾಗಿದೆ..

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ