• 8 ಸೆಪ್ಟೆಂಬರ್ 2024

ವಿವಿಧ ದೇಶಗಳಿಂದ ಸಂತಾಪ : ರೈಲು ಅಪಘಾತ

 ವಿವಿಧ ದೇಶಗಳಿಂದ ಸಂತಾಪ : ರೈಲು ಅಪಘಾತ
Digiqole Ad

110 ಕನ್ನಡಿಗರು ಸೇಫ್

ಒಡಿಶಾದ ರೈಲು ದುರಂತದಲ್ಲಿ ಪವಾಡವೆಂಬಂತೆ 110 ಕನ್ನಡಿಗರು ಪಾರಾಗಿದ್ದಾರೆ. ಚಿಕ್ಕಮಗಳೂರಿನ ನಿವಾಸಿಗಳಾದ ಅವರು, ಜಾರ್ಖಂಡ್‌ನ ಜೈನ ತೀರ್ಥ ಕ್ಷೇತ್ರವಾದ ಸಮ್ಮೇದ ಶಿಖರ್ಜಿಗೆ ತೆರಳಲು ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲು ಹತ್ತಿದ್ದರು. ಹಿಂದಿನ ಬೋಗಿಯಲ್ಲಿದ್ದ ಅವರು ವಿಶಾಖಪಟ್ಟಣದಲ್ಲಿ ಇಂಜಿನ್ ಬದಲಾದ ಕಾರಣ ಅಷ್ಟೂ ಜನ ಮುಂದಿನ ಬೋಗಿಗೆ ಬಂದಿದ್ದರು. ಅಪಘಾತ ಸಂಭವಿಸಿದ್ದು, ಹಿಂದಿನ ಬೋಗಿಯಾದ ಕಾರಣ ಇವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದರು.

ರೈಲ್ವೆಯ ಐತಿಹಾಸಿಕ ಹೆಜ್ಜೆ, ದೊಡ್ಡ ಪರಿಹಾರ

ಒಡಿಶಾ ರೈಲು ಅಪಘಾತದಲ್ಲಿ ಇಲ್ಲಿಯವರೆಗೆ 288 ಜನರು ಸಾವನ್ನಪ್ಪಿದ್ದಾರೆ, 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಗಾಯಗೊಂಡ ಪ್ರಯಾಣಿಕರಿಗೆ ತಕ್ಷಣದ ಪರಿಹಾರವಾಗಿ ರೈಲ್ವೇ ವತಿಯಿಂದ 50,000 ರೂಪಾಯಿ ನಗದು ನೀಡಲಾಗಿದೆ. ರೈಲ್ವೇ ಅಪಘಾತದ ನಂತರ ಇದು ಬಹುಶಃ ಅತ್ಯಂತ ವೇಗದ ಪರಿಹಾರವಾಗಿದೆ.

ಸಂತಾಪ ಸೂಚಿಸಿದ ವಿರಾಟ್ ಕೊಹ್ಲಿ

ಅಪಘಾತದಲ್ಲಿ ನೂರಾರು ಜನ ಮೃತಪಟ್ಟಿರುವ ಘಟನೆಗೆ ಕ್ರಿಕೆಟಿಗ ವಿರಾಟ ಕೊಹ್ಲಿ ಅವರು ಸಂತಾಪ ಸೂಚಿಸಿದ್ದಾರೆ. ಟ್ವಿಟ್ ಮಾಡಿ, ಈ ಭೀಕರ ಅಪಘಾತದ ಸುದ್ದಿ ಕೇಳಿ ಬಹಳ ದುಃಖವಾಯಿತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ದೇವರು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

ವಿವಿಧ ದೇಶಗಳಿಂದ ಸಂತಾಪ

ರೈಲು ದುರಂತಕ್ಕೆ ಕೆನಾಡದ ಪ್ರಧಾನಿ ಜಸ್ಟಿನ್ ಟ್ರುಡೋ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ರೈಲು ದುರಂತದ ಚಿತ್ರಗಳನ್ನು ನನ್ನ ನೋವುಂಟು ಮಾಡಿವೆ. ಈ ಸಂಕಷ್ಟದ ಸಮಯದಲ್ಲಿ ಕೆನಡಾ ಸರ್ಕಾರವು ಭಾರತೀಯರೊಂದಿಗೆ ನಿಲ್ಲುತ್ತದೆ ಎಂದಿದ್ದಾರೆ. ತೈವಾನ್ ಅಧ್ಯಕ್ಷೆ ಸಾಯ್ ಇಂಗ್-ವೆನ್ ಕೂಡಾ ಸಂತಾಪ ಸೂಚಿಸಿದ್ದು, ರೈಲು ದುರಂತದ ಸಿಲುಕಿದ ಎಲ್ಲರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಟ್ವಿಟಿಸಿದ್ದಾರೆ. ಆಸ್ಟ್ರೇಲಿಯಾ, ಶ್ರೀಲಂಕಾ ಕೂಡಾ ಸಂತಾಪ ಸೂಚಿಸಿವೆ.

 

ಅಪಘಾತವಾದ ಸ್ಥಳಕ್ಕೆ ಪ್ರಧಾನಿ ಮೋದಿ

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ಬಗ್ಗೆ ಪರಿಶೀಲನೆ ನಡೆಸಲು ಪ್ರಧಾನಿ ಮೋದಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಮಾಹಿತಿ ಪ್ರಕಾರ, ಅವರು ಮೊದಲು ಬಾಲಸೋರ್‌ನಲ್ಲಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ನಂತರ ಕಟಕ್‌ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಈ ಅಪಘಾತದಲ್ಲಿ ಇಲ್ಲಿಯವರೆಗೆ 288 ಜನರು ಸಾವನ್ನಪ್ಪಿದ್ದಾರೆ, ಸುಮಾರು 1000 ಜನರು ಗಾಯಗೊಂಡಿದ್ದಾರೆ.

 

ಮೃತರ ಸಂಖ್ಯೆ 280ಕ್ಕೆ ಏರಿಕೆ

ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಈವರೆಗೆ 280 ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಘೋಷಿಸಲಾಗಿದೆ. ಈ ಕುರಿತು NDRF IG ನರೇಂದ್ರ ಸಿಂಗ್ ಬುಂದೇಲಾ ಮಾಹಿತಿ ನೀಡಿದ್ದು, ಇಂದು ಸಂಜೆಯವರೆಗೆ ಕಾರ್ಯಾಚರಣೆ ಮುಂದುವರೆಯುವ ಸಾಧ್ಯತೆಯಿದೆ. ಒಡಿಶಾದಿಂದ ಏಳು ಮತ್ತು ಪಶ್ಚಿಮ ಬಂಗಾಳದಿಂದ ಎರಡು ತಂಡಗಳನ್ನು ಕರೆಸಲಾಗಿದೆ. ಬಹುತೇಕ ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ಅಪಘಾತ:

ಕೇಂದ್ರ ಸಚಿವ ತಾಂತ್ರಿಕ ಸಮಸ್ಯೆಗಳಿಂದಾಗಿ ಒಡಿಶಾದಲ್ಲಿ ರೈಲು ದುರಂತ ಸಂಭವಿಸಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ ಅವರು, ಇದೊಂದು ದುರಾದೃಷ್ಟಕರ ಘಟನೆಯಾಗಿದೆ. ಕಾರಣ ತಿಳಿಯಲು ರೈಲ್ವೆ ಇಲಾಖೆಯ ಕಡೆಯಿಂದ ಆದೇಶ ಹೊರಡಿಸಲಾಗಿದೆ. ಪ್ರಧಾನಿ ಮೋದಿ ಕೂಡಾ ಇಲ್ಲಿಗೆ ಆಗಮಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

 

 

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ