• 8 ಸೆಪ್ಟೆಂಬರ್ 2024

ವಾಮಾಚಾರ,ಶತ್ರುಭಾಧೆಗೆ ಶಾಶ್ವತ ಪರಿಹಾರ: ಮಾಡಾಯಿಕಾವಿಲಮ್ಮ ಭಗವತಿ

 ವಾಮಾಚಾರ,ಶತ್ರುಭಾಧೆಗೆ ಶಾಶ್ವತ ಪರಿಹಾರ: ಮಾಡಾಯಿಕಾವಿಲಮ್ಮ ಭಗವತಿ
Digiqole Ad

ವಾಮಾಚಾರ,ಶತ್ರುಭಾಧೆಗೆ ಶಾಶ್ವತ ಪರಿಹಾರ: ಮಾಡಾಯಿಕಾವಿಲಮ್ಮ ಭಗವತಿ

ಯಾರಿಗೆ ಏನೇ ನೋವಾದರು ..ಅವರ ಬಾಯಿಂದ ಬರುವ ಮೊದಲ ಪದ ” ಅಮ್ಮಾ” ಎಂದು.. ನಮ್ಮನ್ನು ಹೆತ್ತು ಹೊತ್ತು ಬೆಳೆಸಿದ ತಾಯಿ ಒಂದು ಶಕ್ತಿ ಯಾದರೆ.. ಜಗತ್ತನ್ನು ಕಾಯುವ ಇನ್ನೊಂದು ತಾಯಿ ಇದ್ದಾಳೆ ಅವಳೇ.. ಆದಿಶಕ್ತಿ…

ಈ ಆದಿಶಕ್ತಿಯ ಇನ್ನೊಂದು ರೂಪವೇ ಮಹಾತಾಯಿ ಭಗವತಿ.. ಈ ಭಗವತಿ ತಾಯಿ ತನ್ನ ಮಹಿಮೆಯನ್ನು ತೋರಿಸುತ್ತಾ ದುಷ್ಟರಿಗೆ ಶಿಕ್ಷೆಯನ್ನು ನೀಡಿ ..ನಂಬಿ ಬಂದ ಭಕ್ತರ ಕಷ್ಟಗಳನ್ನು ನಿವಾರಿಸಿ ಸುಖವನ್ನು ಕರುಣಿಸುತ್ತಾ ಇರುವ ಕ್ಷೇತ್ರ ಉತ್ತರ ಕೇರಳದ ಮಾಡಾಯಿ ಕಾವು .. ಭಕ್ತರು ಕಾವಿಲಮ್ಮ ಎಂದೂ ಕರೆಯುತ್ತಾರೆ.. ಕೇರಳ ಕಣ್ಣೂರು ಜಿಲ್ಲೆಯ ಪಯಂಗಾಡಿ ಎಂಬ ಪ್ರದೇಶದಲ್ಲಿ ತರುವರ್ಕಾಡು ಭಗವತಿಯ ಈ ಪುಣ್ಯ ಕ್ಷೇತ್ರವಿದೆ.. ಕೇರಳದ ಎಲ್ಲಾ ಭದ್ರಕಾಳಿ ದೇವಸ್ಥಾನಗಳ ಪೈಕಿ. ಹಿರಿಯ ಕ್ಷೇತ್ರವಿದು.. ಎಲ್ಲಾ ಭದ್ರಕಾಳಿಗಳ ತಾಯಿ ಕ್ಷೇತ್ರವಿದು..

Madayikavuಕೇರಳದ ರಾಜಮನೆತನದ ಚಿರಕಲ್ಲ್ ಮನೆತನದ ಪೂಜ್ಯ ಕ್ಷೇತ್ರವಿದು..

ಹಿಂದಿನ ಕಾಲದಲ್ಲಿ ವಾಮಾಚಾರಕ್ಕೆ ಒಳಗಾದವರು. ಈ ಕ್ಷೇತ್ರಕ್ಕೆ ಬಂದು ದೇವಿಯೆದುರು ಪ್ರಾರ್ಥಿಸಿ ಅಲ್ಲಿಂದ ಪ್ರಸಾದ ಹಿಡಿದು ಮನೆ ಮುಟ್ಟವಷ್ಟರಲ್ಲಿ. ವಾಮಾಚಾರ ಮಾಡಿದವರು ರಕ್ತಕಾರಿ ಸಾಯುತಿದ್ದರು. ಎಂದು ಹಿರಿಯರು ಹೇಳುತಿದ್ದರು.. ರೋಗಬಾಧೆ, ಮನೆ ನಿರ್ಮಾಣದಲ್ಲಿ ಸೋಲು, ಮಾಟ ,ಮಂತ್ರ, ಧುಷ್ಟ ಶಕ್ತಿಗಳ ಭಾದೆಯಿಂದ ಮುಕ್ತಿ ಹೊಂದಲು ಈ ಭಗವತಿಯ ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿದರೆ ಸಾಕು. ಈಗಲೂ ದಕ್ಷಿಣ ಕನ್ನಡ ಉಡುಪಿ ಕಡೆಯಿಂದಲೂ ಜಾಸ್ತಿ ಭಕ್ತರು ಈ ಕ್ಷೇತ್ರಕ್ಕೆ ಹೋಗಿ ಪರಿಹಾರವನ್ನು ಪಡೆದು ಬರುತ್ತಾರೆ.. ಯಾರೇ ಎಷ್ಟೇ ಕಷ್ಟ ಬಂದು ಸೋತರೂ ಈ ಭಗವತಿಯ ನೆನೆದು ನಡೆದರೆ ಅವರ ಕಷ್ಟ ಮಾಯವಾಗಿದ್ದು ಉಂಟ್ಟು… ಹಾಗಾಗಿ ಮಾಡೈಕಾವು ಭಗವತಿ ಎಂದರೆ.. ಒಂದು ರೀತಿಯ ಧೈರ್ಯ… ಈ ಕ್ಷೇತ್ರಕ್ಕೆ ಪುತ್ತೂರು ಸುಳ್ಯ ಕಡೆಯಿಂದ ಹೋಗುವವರು ಕಾಸರಗೋಡು ಚೆರ್ಕಲದಿಂದ ಕಣ್ಣೂರು ಮಾರ್ಗವಾಗಿ. ಪಿಲತರ ಎಂಬಲ್ಲಿಂದ ಪಯಂಗಾಡಿಗೆ ತಲುಪ ಬಹುದು..

Madayikavuಈ ಕ್ಷೇತ್ರಕ್ಕೆ ಮಾನ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭೋಜನ ಶಾಲೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.. ಈ ಕ್ಷೇತ್ರದಲ್ಲಿ ಕನ್ನಡ ಬರಹಗಳ ಫಲಕವನ್ನು ಕಾಣಬಹುದು.. ಈ ಕ್ಷೇತ್ರದ ಪಕ್ಕದಲ್ಲಿ ಈಶ್ವರ ದೇವರ ದೇವಸ್ಥಾನವಿದೆ.. ಬೆಳಿಗ್ಗೆ ನಾವು ಭಗವತಿಯ ದರುಶನ ಮಾಡಿ ಸೇವಾ ರಶೀದಿಗಳ ಮಾಡಿ ನಂತರ ಪಕ್ಕದ ಈಶ್ವರ ದೇವರ ಕ್ಷೇತ್ರಕ್ಕೆ ಹೋಗಿ ಬರುವಾಗ. ಇಲ್ಲಿ ಮಧ್ಯಾಹ್ನದ ಪೂಜೆಗೆ ತಯಾರಾಗಿರುತ್ತದೆ…

ಬೆಳಿಗ್ಗೆ 5.30 ಕ್ಕೆ ಬಾಗಿಲು ತೆರೆಯುವುದು.

ಬೆಳಿಗ್ಗೆ 6.00 ಗಂಟೆಗೆ ಉಷಾ ಪೂಜೆ

11.00 ಗಂಟೆಗೆ ಬಾಗಿಲು ಹಾಕುವುದು

ಸಂಜೆ 5.30ಕ್ಕೆ ಬಾಗಿಲು ತೆರೆಯುವುದು

5.30ರಿಂದ 6.30ಕ್ಕೆ ಸಂಧ್ಯಾ ಪೂಜೆ..

ರಾತ್ರಿ 8.00 ಗಂಟೆಗೆ ಬಾಗಿಲು ಹಾಕುವುದು ..

ಇಲ್ಲಿ ಕೋಳಿಯ ಪದಾರ್ಥಗಳನ್ನು ಮಾಡಿ ಅಗೇಲು ದೇವಿಗೆ ನೈವೇದ್ಯ.. ಇಲ್ಲಿ ಗಂಡಸರು ಪ್ಯಾಂಟು ಧರಿಸಿ ದೇವಸ್ಥಾನದ ಒಳಗೆ ಹೋಗುವಂತಿಲ್ಲ .. ಈಗ ಮಲಬಾರ್ ದೇವಸ್ವಂನ ಆಡಳಿತದಲ್ಲಿ ಇರುವ. ಈ ಭಗವತಿ ತಾಯಿಯ ಕ್ಷೇತ್ರಕೊಮ್ಮೆ. ಬೇಟಿ ನೀಡಿ. ಕಾವಿಲಮ್ಮನ ಅನುಗ್ರಹ ಪಡೆದು ಬನ್ನಿ… ಲೋಕವನ್ನು ಕಾಪಾಡುವ ಸರ್ವ ಶಕ್ತೆ ಜಗನ್ಮಾತೆ ಆದಿಶಕ್ತಿಯ ಕೃಪೆ ನಮ್ಮೆಲ್ಲರ ಮೇಲಿರಲಿ ಎಂದು. ಬೇಡಿಕೊಳ್ಳುವ…ಓಂ ನಮೋ ಭಗವತೇ ..ಭಗವತಿ

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ