• 7 ಸೆಪ್ಟೆಂಬರ್ 2024

ವಾರ್ತೆಗಳು – TEA TIME NEWS

 ವಾರ್ತೆಗಳು – TEA TIME NEWS
Digiqole Ad

ವಾರ್ತೆಗಳು

 

TEA TIME NEWS

ಹಿಂದುತ್ವಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ದ ಪುತ್ತಿಲ ಹೇಳಿಕೆ.

ಸುಳ್ಯ ತಾಲೂಕಿನ ಅಡ್ಕಾರು ಗ್ರಾಮದಲ್ಲಿ ಜರುಗಿದ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರರಾದ ಪುತ್ತಿಲ ಮಾತನಾಡುತ್ತಾ,, ಹಿಂದುತ್ವಕ್ಕಾಗಿ ನನ್ನ ಪ್ರಾಣ ನೀಡಲು ಸಿದ್ದನಿದ್ದೇನೆ ಎಂದು ಕಾರ್ಯಕರ್ತರಿಗೆ ಹೇಳಿದರಲ್ಲದೇ ಸುಳ್ಯದ ಹಿಂದು ಸಮಾಜದ ಜೊತೆ ನನಗೆ ಇಂದಿನಿಂದ ಋಣವಿದೆ ನಿಮ್ಮ ನೋವು ನಲಿವಿನ ಜೊತೆಗೆ ನಾನು ನಿಲ್ಲುತ್ತೇನೆ ಸಂಘಟಿತರಾಗಿ ಹೋರಾಟಮಾಡೋಣ ಹಿಂದುವಸಮಾಜವನ್ನು ಕಟ್ಟೋಣ ಎಂದರು.ನಾನು ಇಲ್ಲಿ ಭಾಗವಹಿಸುತ್ತಿರುವುದರಲ್ಲಿ ಕೆಲವರಿಗೆ ಸಹಿಸಲು ಸಾಧ್ಯವಾಗದೇ ಇರಬಹುದು ಆದರೆ ನನಗೆ ರಾಜಕೀಯ ಬೇಕು ಎಂದಿಲ್ಲಾ ನಾನು ಹಿಂದೆಯು ಕಾರ್ಯಕರ್ತರ ಜೊತೆಗೆ ಇದ್ದವನು ಇಂದು ಕಾರ್ಯಕರ್ತರ ಜೊತೆಗೆ ಇದ್ದೇನೆ ಎಂದು ಹೇಳಿದರು.

ಟ್ರ್ಯಾಕ್ ಮರು ಜೋಡಣೆ.. 1,000 ಮಂದಿಯಿಂದ ಅವಿರತ ಕೆಲಸ

Odishi ಒಡಿಶಾ ರೈಲು ಅಪಘಾತದ ಸ್ಥಳದಲ್ಲಿ ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ. ಸುಮಾರು 1,000 ಸಿಬ್ಬಂದಿ ಮತ್ತು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಏಳು ಪಾಕೆಟಿಂಗ್ ಯಂತ್ರಗಳು, ಒಂದು ಹೆವಿ ರೈಲ್ವೆ ಕ್ರೇನ್ ಮತ್ತು 4 ರೋಡ್ ಕ್ರೇನ್‌ಗಳನ್ನು ಬಳಸಲಾಗುತ್ತಿದೆ. ಇಂದು ಮಧ್ಯಾಹ್ನದೊಳಗೆ ಮುಖ್ಯ ಟ್ರ್ಯಾಕ್ ಸಿದ್ಧಪಡಿಸಲಾಗಿದೆ. ಕಾಮಗಾರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬುಧವಾರದೊಳಗೆ ಎಲ್ಲಾ ಹಳಿಗಳನ್ನು ಮರು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

 

ಕರ್ನಾಟಕದಲ್ಲಿ BJPಯನ್ನು ಸರ್ವನಾಶ ಮಾಡಿದ್ದೇವೆ: ರಾಹುಲ್ ಗಾಂಧಿ

BJPಯ ದ್ವೇಷದ ಸಿದ್ಧಾಂತಗಳನ್ನು ಸೋಲಿಸಲು ಇಡೀ ದೇಶ ಸಿದ್ಧವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ BJP ನಿರ್ನಾಮವಾಗುವುದು ಖಚಿತ ಎಂದು ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್-ಯುಎಸ್ಎ ಕಾರ್ಯಕ್ರಮದಲ್ಲಿ ಹೇಳಿದರು. ಕರ್ನಾಟಕದಲ್ಲಿ BJP ಸೋತಿಲ್ಲ, ಸರ್ವನಾಶವಾಗಿದೆ. ಮುಂದಿನ ಚುನಾವಣೆಯ ನಂತರ ತೆಲಂಗಾಣದಲ್ಲಿ BJP ನೋಡಲೂ ಸಿಗಲ್ಲ. ಪ್ರತಿಪಕ್ಷಗಳ ಒಗ್ಗಟ್ಟಾಗಿ 2024ರಲ್ಲಿ BJPಯನ್ನು ಸೋಲಿಸುತ್ತವೆ ಎಂದರು

 

ಸಿಎಂ ಜೀರೋ ಟ್ರಾಫಿಕ್ ಬಳಕೆ: ಬಿಜೆಪಿ ಟೀಕೆ

ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರು ಜೀರೋ ಟ್ರಾಫಿಕ್ ಬಳಸಿದ್ದು, BJP ವಾಗ್ದಾಳಿ ನಡೆಸಿದೆ. ‘ಇದು ರಿವರ್ಸ್ ಗೇಸ್ ಕಾಂಗ್ರೆಸ್ ಎಂದು ನಾವು ಮೊದಲೇ ಹೇಳಿದ್ದೆವು. ಈಗದು ಸಾಬೀತಾಗುತ್ತಿದೆ’ ಎಂದು ಆರೋಪಿಸಿದೆ. ‘ಜೀರೋ ಟ್ರಾಫಿಕ್ ಬೇಡ ಎಂದು ಸಿಎಂ ಹೇಳಿದ್ದು ಸುದ್ದಿಯಾಗೋದಕ್ಕೆ ಮಾತ್ರ. ಈಗ ಸದ್ದಿಲ್ಲದೆ ಮತ್ತೆ ಜೀರೋ ಟ್ರಾಫಿಕ್‌ನಲ್ಲಿ ಓಡಾಡುತ್ತಿದ್ದಾರೆ. 200 ಯುನಿಟ್ ಫ್ರೀ ಅಂದಿಲ್ಲವೆಂದು ಇಂಧನ ಸಚಿವರೇ ರಿವರ್ಸ್ ಕನೆಕ್ಷನ್ ಕೊಡುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

 

ಕುಟುಂಬ ಒಡೆಯುವ ಕೆಲಸ ನಾವು ಮಾಡಲ್ಲ’

ಗೃಹ ಲಕ್ಷ್ಮಿ ಯೋಜನೆ ರಾಜ್ಯದ ಎಲ್ಲ ಮಹಿಳೆಯರಿಗೂ ತಲುಪುತ್ತದೆ, ಕುಟುಂಬ ಒಡೆಯುವ ಕೆಲಸ ನಾವು ಮಾಡಲ್ಲ’ ಎಂದು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ‌ ಹೇಳಿದ್ದಾರೆ. ಗ್ಯಾರೆಂಟಿ ಯೋಜನೆಯಿಂದ ಕುಟುಂಬ ಒಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ತೀರುಗೇಟು ನೀಡಿ, ಕುಟುಂಬ ಒಡೆಯುವ ಕೆಲಸ ನಾವು ಮಾಡಲ್ಲ, ಪ್ರತಾಪ್ ಸಿಂಹ ಒಬ್ಬ ಒಳ್ಳೆಯ ಸಂಸದ, ಅವರಂತಹ ಸಂಸದ ಇಡೀ ದೇಶದಲ್ಲೇ ಸಿಗಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ‌ ವ್ಯಂಗ್ಯವಾಡಿದ್ದಾರೆ.

 

 

ಶಾಸಕರ ಅಭಿನಂದನಾ ಸಮಾರಂಭದಲ್ಲಿ ಕೊಲೆ

ತರೀಕೆರೆ ಶಾಸಕ ಶ್ರೀನಿವಾಸ್ ಅವರಿಗೆ ಅಭಿನಂದನಾಸಮಾರಂಭದಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡು ಬದಲಿಸುವ ವಿಚಾರಕ್ಕೆ ಗಲಾಟೆ ನಡೆದಿದ್ದು, ವ್ಯಕ್ತಿಯೊಬ್ಬ ವರುಣ್ (28) ಎಂಬುವವರಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮಂಜು ಹಾಗೂ ಸಂಜು ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

 

ಗೋಪೂಜೆ ಅಭಿಯಾನ ಮಾಡುತ್ತೇವೆ: ರವಿಕುಮಾರ್

ಕಾಂಗ್ರೆಸ್ ಸರ್ಕಾರ ಗೋಹತ್ಯೆ ಕಾಯ್ದೆ ವಾಪಸ್ಸು ಪಡೆದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಜೊತೆಗೆ ಗೋಪೂಜೆ ಅಭಿಯಾನ ಕೈಗೊಳ್ಳುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ, ಬೆಂಗಳೂರಿನಲ್ಲಿ ಮಾತನಾಡಿ, ಗೋವನ್ನು ಹಿಂದೂಗಳು ಪೂಜಿಸುತ್ತಾರೆ, ಇದರಿಂದ ಕೃಷಿ ಭೂಮಿ ಫಲವತ್ತತೆ ಹೆಚ್ಚುತ್ತದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಗೋಹತ್ಯೆ ಕಾನೂನು ರದ್ದುಪಡಿಸಿದರೆ, ಎಂದೂ ಕಾಣದ ಹೋರಾಟ ಮಾಡುತ್ತೇವೆ ಎಂದು ರವಿಕುಮಾರ್ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

 

ಸಚಿವರ ಹೇಳಿಕೆಗೆ ಮಾಜಿ ಸಿಎಂ ಬೊಮ್ಮಾಯಿ ಕಿಡಿ

ಗೋವುಗಳನ್ನು ಏಕೆ ಕಡಿಯಬಾರದು? ಎಂದು ಪ್ರಶ್ನಿಸಿರುವ ಸಚಿವ ಕೆ.ವೆಂಕಟೇಶ್ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಗೋವಿನೊಂದಿಗೆ ಭಾರತೀಯರಾದ ನಾವು ಭಾವನಾತ್ಮಕ ಸಂಬಂಧ ಹೊಂದಿದ್ದು, ತಾಯಿ ಸ್ಥಾನದಲ್ಲಿ ಇಟ್ಟಿದ್ದೇವೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ತಡೆಯಲು ಕಾನೂನು ತರಲಾಗಿದೆ. ಇರುವ ಕಾನೂನಿಗೆ ಬಲ ತುಂಬಿದ್ದೇವೆ ಅಷ್ಟೇ ಎಂದಿದ್ದಾರೆ.

 

ಕೇಂದ್ರ ಸಚಿವರಿದ್ದ ವಿಮಾನ ತುರ್ತು ಭೂಸ್ಪರ್ಶ

ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ರಾಮೇಶ್ವ‌ ತೇಲಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ ಆಗಿದೆ. ದಿಬ್ರುಘಡಕ್ಕೆ ತೆರಳುತ್ತಿದ್ದ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಇರುವುದನ್ನು ಗಮನಿಸಿದ ಪೈಲೆಟ್ ವಿಮಾನವನ್ನು ತಕ್ಷಣ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದರು. ವಿಮಾನದಲ್ಲಿ ಸಚಿವ ತೇಲಿ ಸೇರಿದಂತೆ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತೇಲಿ ಮಾಹಿತಿ ನೀಡಿದ್ದಾರೆ.

 

ದೇಶಾದ್ಯಂತ ಸ್ಫೋಟಕ್ಕೆ HUT ಸಂಚು: NIA

ಹಿಜ್ಜೆ-ಉತ್-ತಹೀರ್ (HUT) ದೇಶಾದ್ಯಂತ ಸ್ಫೋಟಗಳ ಮಾಸ್ಟರ್ ಮೈಂಡ್ ಎಂದು ಎನ್‌ಐಎ ಹೇಳಿದೆ. ಮಧ್ಯಪ್ರದೇಶ ಮತ್ತು ತೆಲಂಗಾಣ ಗುಪ್ತಚರ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಳೆದ ತಿಂಗಳು ಭೋಪಾಲ್ ಮತ್ತು ಹೈದರಾಬಾದ್‌ನಲ್ಲಿ 17 HUT ಶಂಕಿತರನ್ನು ಬಂಧಿಸಲಾಗಿತ್ತು. ಈ ಸಂಬಂಧ ಎನ್‌ಐಎ ಸಮಗ್ರ ತನಿಖೆ ನಡೆಸುತ್ತಿದ್ದು, ಆರೋಪಿಗಳು ಬಾಂಬ್ ಸ್ಫೋಟದ ಮೂಲಕ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ಎಸಗಲು ಪ್ಲಾನ್ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

 

ಸಾಹಿತಿ ಕೆ.ಎಸ್.ಭಗವಾನ್ ಪ್ರಾಣಾಪಾಯದಿಂದ ಪಾರು

ಸಾಹಿತಿ KS ಭಗವಾನ್ ಹಾಗೂ ಕೆಲವು ಪ್ರವಾಸಿಗರು ಕಾಡಾನೆ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ಸಫಾರಿಗೆ ತೆರಳಿದ್ದ ವೇಳೆ ಕಾಡಾನೆಯೊಂದು ಜೀಪ್ ಅನ್ನು ಅಟ್ಟಿಸಿಕೊಂಡು ಬಂದಿದೆ. ಕೆ.ಗುಡಿಯಲ್ಲಿ ಈ ಘಟನೆ ನಡೆದಿದ್ದು, ಸಫಾರಿ ವಾಹನದ ಚಾಲಕ ವಾಹನವನ್ನು ತಕ್ಷಣ ರಿವರ್ಸ್‌ ತೆಗೆದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಆನೆಗಳ ಹಿಂಡಿನಲ್ಲಿದ್ದ ಹೆಣ್ಣಾನೆಯೊಂದು ಭಗವಾನ್ ಅವರಿದ್ದ ಸಫಾರಿ ವಾಹನದತ್ತ ನುಗ್ಗಿತ್ತು.

ಹಾಲಿನ ಪ್ರೋತ್ಸಾಹ ಧನ ಕಡಿತ ಮಾಡದಂತೆ CM ಸೂಚನೆ

Sidduರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಯಾವುದೇ ಕಡಿತ ಮಾಡದಂತೆ CM ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಹಾಲು ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆ ಬಮುಲ್ ಹಾಲಿನ ಪ್ರೋತ್ಸಾಹ ಧನ ಲೀಟರ್‌ಗೆ 1.50ರೂ. ಕಡಿತಗೊಳಿಸಿ ಆದೇಶಿಸಿತ್ತು. ಈ ಕಾರಣಕ್ಕಾಗಿ ಸಿದ್ದು ತಕ್ಷಣ ಈ ಸೂಚನೆ ಕೊಟ್ಟಿದ್ದಾರೆ. ಈ ಬಗ್ಗೆ ಕರ್ನಾಟಕ ಹಾಲು ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತನಾಡಿದ CM, ಏಕಾಏಕಿ ದರ ಕಡಿತ ಮಾಡುವಂತಿಲ್ಲ. ಈ ಕುರಿತು ಸರ್ಕಾರದ ಜೊತೆ ಚರ್ಚಿಸಬೇಕು ಎಂದಿದ್ದಾರೆ.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ