• 8 ಸೆಪ್ಟೆಂಬರ್ 2024

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಹಾಡು ಕೋಗಿಲೆ ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ

 ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಹಾಡು ಕೋಗಿಲೆ ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ
Digiqole Ad

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಹಾಡು ಕೋಗಿಲೆ ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಆಯೋಜಿಸಿದ್ದ ಹಾಡು ಕೋಗಿಲೆ ಅಂತರ್ ಜಿಲ್ಲಾ ಸಂಗೀತ ಸ್ಪರ್ಧೆಯು ಇತ್ತೀಚಿಗೆ ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನೆರವೇರಿತು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರು , ಗಾಯಕರು ಮತ್ತು ಖ್ಯಾತ ಜ್ಯೋತಿಷ್ಯರಾದ ಎಚ್ .ಭೀಮರಾವ್ ವಾಷ್ಠರ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು . ಗಾಯಕರು ಹಾಗೂ ಪೊಲೀಸ್ ಅಧಿಕಾರಿಯಾದ ಶ್ರೀ ಸುಬ್ರಾಯ ಕಲ್ಪನೆ ಯವರು ಕರೋಕೆ ಸಂಗೀತ ಸ್ಪರ್ಧೆಯನ್ನು ಉದ್ಘಾಟಿಸಿದರು .ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ರವರು ಗಾಯಕ ಮತ್ತು ಖ್ಯಾತ ಜ್ಯೋತಿಷ್ಯರಾದ ಎಚ್ .ಭೀಮರಾವ್ ವಾಷ್ಠರ್ ರವರು ಸಾಹಿತ್ಯ ಬರೆದು ಹಾಡಿದ್ದ ಧರೆಗಿಳಿದ ರತಿದೇವಿ ಭಾವಗೀತೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು .

ವಾಷ್ಟರ್

ಶಾಸಕರಾದ ಭಾಗೀರಥಿ ಮುರುಳ್ಯ ಅವರನ್ನು .ಸಮ್ಮಾನಿಸಲಾಯಿತು . ಮುತ್ತು ಕೃಷಿಯ ಖ್ಯಾತ ಕೃಷಿಕರಾದ ನವೀನ ಚಾತುಬಾಯಿಯವರು ಮುಖ್ಯ ಅತಿಥಿಗಳಾಗಿದ್ದರು . ಬೆಂಗಳೂರಿನ ಖ್ಯಾತ ಗಾಯಕರಾದ ಪ್ರಕಾಶ್ ಪಾವಂಜೆ ಮತ್ತು ಕಬಕದ ಕರುನಾಡ ಗಾನಗಂಧರ್ವ ಬಿರುದಾಂಕಿತ ಮಿಥುನ್ ರಾಜ್ ವಿದ್ಯಾಪುರ ಅವರು ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿದ್ದರು .

ಇದೇ ಸಂದರ್ಭದಲ್ಲಿ ಖ್ಯಾತ ಗಾಯಕರಾದ ರವಿ ಪಾಂಬಾರ್ , ವಸಂತ್ ಕೇಪು ವಿಟ್ಲ , ವಸಂತ್ ಬಾರಡ್ಕ ಮತ್ತು ಶಶಿ ಗಿರಿವನ ಕಡಬ ಅವರಿಗೆ ರಾಜ್ಯಮಟ್ಟದ ಸಂಗೀತ ರತ್ನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು . ಖ್ಯಾತ ಗಾಯಕರಾದ ಪ್ರಕಾಶ್ ಪಾವಂಜೆ ಅವರಿಗೆ ಕರುನಾಡ ಸಂಗೀತ ಮಾಂತ್ರಿಕ ಬಿರುದು ನೀಡಿ ಸನ್ಮಾನಿಸಲಾಯಿತು .ಹಾಡು ಕೋಗಿಲೆ -2023 ಕರೋಕೆ ಸಂಗೀತ ಸ್ಪರ್ಧೆಯಲ್ಲಿ 6 ಜಿಲ್ಲೆಗಳಿಂದ ಒಟ್ಟು 38 ಜನ ಗಾಯಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು . ಸುಧಾ ಕೋಟೆ ಪಂಜ ಅವರು ವಿನ್ನರ್ ಆಗಿ ಮೂಡಿಬಂದರು .

ತನ್ಮಯ್ ಸೋಮಯಾಗಿ ಮತ್ತು ಆರಾಧ್ಯ ಮುಂಡೂರು ಪುತ್ತೂರು ರವರು ರನ್ನರ್ ಆಗಿ ಮೂಡಿಬಂದರು . ಅಶ್ವಿಜ್ ಆತ್ರೇಯ ಮತ್ತು ಮೂರನೆಯ ಬಹುಮಾನ ಪಡೆದುಕೊಂಡರು. ಕವಯಿತ್ರಿ ಪೂರ್ಣಿಮಾ ಪೆರ್ಲಂಪಾಡಿ ಅವರು ಸರ್ವರನ್ನು ಸ್ವಾಗತಿಸಿದರು . ಗಾಯಕ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ವಂದಿಸಿದರು . ಭಾಗವಹಿಸಿದ ಎಲ್ಲಾ ಗಾಯಕರಿಗೂ ಆಕರ್ಷಕ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು . ಪ್ರಜ್ವಲ್ ವಾಷ್ಠರ್ ಸಹಕರಿಸಿದರು .

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ