• 8 ಸೆಪ್ಟೆಂಬರ್ 2024

ರುದ್ರಭೂಮಿ ಮೇಲೆ ಕಾಡಾನೆಗಳ ರೌದ್ರಾವತಾರ

 ರುದ್ರಭೂಮಿ ಮೇಲೆ ಕಾಡಾನೆಗಳ ರೌದ್ರಾವತಾರ
Digiqole Ad

 

ರುದ್ರಭೂಮಿ ಮೇಲೆ ಕಾಡಾನೆಗಳ ರೌದ್ರಾವತಾರ

ಮಡಿಕೇರಿ:ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ಜೋಡು ಕೆರೆ ಎಂಬಲ್ಲಿರುವ ರುದ್ರ ಭೂಮಿಯಲ್ಲಿ ತಾ. 4 ರಂದು ರಾತ್ರಿ ಈ ಘಟನೆ ನಡೆದಿದೆ . ಕಾಡಾನೆ ಅಲ್ಲಿನ ರುದ್ರಭೂಮಿಯ ಗೇಟಿನ ಮೇಲೆ ಲಗ್ಗೆಯಿಟ್ಟು ಹಾನಿ ಮಾಡಿದೆ. ಇದರಿಂದ ಗೇಟಿಗೆ ಹೊಂದಿಕೊಂಡಿರುವ ತಡೆಗೋಡೆ ಕೂಡ ಹಾನಿಗೊಳಗಾಗಿದೆ.

ಕಾಡಾನೆಗಳ ಹಾವಳಿಯಿಂದ ಬೇಸತ್ತು ಹೋಗಿರುವ ಮಲೆನಾಡಿನ ಜನರು ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂಬ ದಶಕಗಳ ಬೇಡಿಕೆಗೆಯಾವ ಸರ್ಕಾರಗಳೂ ಸ್ಪಂದಿಸಿಲ್ಲ. ಅಲ್ಪ – ಸ್ವಲ್ಪ ನೆರವು ಒದಗಿಸಿ ಮಲೆನಾಡಿನ ಜನರ ಕಣ್ಣೊರೆಸುವ ಕೆಲಸವನ್ನು ಮಾಡಿಕೊಂಡೇ ಸರ್ಕಾರ ಬರುತ್ತಿದೆ.

3 ದಶಕಗಳಿಂದೀಚೆಗೆ ಕಾಡಾನೆಗಳು ಜೀವ ಹಾನಿ, ಬೆಳೆ ಹಾನಿಯನ್ನುಮಾಡುತ್ತಿವೆ. ಕೊಡಗು ಜಿಲ್ಲೆ ಗೆ ಕಾಡಾನೆಗಳುಬರುತ್ತಿದ್ದು, 40 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಮಲೆನಾಡು ಭಾಗದಲ್ಲಿ ಆಗಿಂದಾಗೆ ಕಾಣಿಸಿಕೊಳ್ಳುತ್ತಿದೆ.

ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರವೇ 1991ರಿಂದ ಈವರೆಗೆ ಕಾಡಾನೆಗಳ ದಾಳಿಗೆ72 ಜನರು ಬಲಿಯಾಗಿದ್ದಾರೆ. ಈಜೀವ ಹಾನಿಗೆ ಸುಮಾರು 16 ಕೋಟಿರೂ. ಪರಿಹಾರ ನೀಡಲಾಗಿದೆ.ಹಾಗೆಯೇ ಹಾನಿಯು ವರ್ಷದಿಂದವರ್ಷಕ್ಕೆ ಏರುತ್ತಲೇ ಬಂದಿದೆ. ಜತೆಗೆ ಜೀವ ಹಾನಿಯ ಪರಿಹಾರವನ್ನುಹೆಚ್ಚಳ ಮಾಡಿಕೊಂಡು ಬರಲಾಗುತ್ತಿದೆ.ಈಗ ಕಾಡಾನೆಗಳ ದಾಳಿಗೆ ತುತ್ತಾಗಿ ಜೀವಕಳೆದುಕೊಂಡವರ ಕುಟುಂಬಕ್ಕೆ 7 ಲಕ್ಷ ರೂ.ಪರಿಹಾರನೀಡಲಾಗುತ್ತಿದೆ. ವೈಜ್ಞಾನಿಕ ಪರಿಹಾರ ಮಾತ್ರ ಸಿಕ್ಕಿಲ್ಲ. ಎಂಬುದೇ ವಿಪರ್ಯಾಸ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ