• 8 ಸೆಪ್ಟೆಂಬರ್ 2024

ವಿಶ್ವ ಕಂಡ ಅತ್ಯದ್ಭುತ ನಾಯಕನಿಗಿಂದು ಜನ್ಮದಿನ

 ವಿಶ್ವ ಕಂಡ ಅತ್ಯದ್ಭುತ ನಾಯಕನಿಗಿಂದು ಜನ್ಮದಿನ
Digiqole Ad

 

ವಿಶ್ವ ಕಂಡ ಅತ್ಯದ್ಭುತ ನಾಯಕನಿಗಿಂದು ಜನ್ಮದಿನ

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಇಂದು 42ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಂಚಿಯ ಪುಟ್ಟ ಹಳ್ಳಿಯೊಂದರಿಂದ ಬಂದು ಕ್ರಿಕೆಟ್‌ನಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡಿ ವಿಶ್ವದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಮಾಹಿ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆ ಸಾಮಾನ್ಯದ್ದಲ್ಲ. ಎರಡು ವಿಶ್ವಕಪ್ ಗೆದ್ದ ಧೋನಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಯಾವತ್ತೂ ಮರೆಯದ ಅನರ್ಘ್ಯ ರತ್ನ.

ನಾಯಕನಾಗಿ ಧೋನಿ ಗೆದ್ದ ಪ್ರಮುಖ ಪ್ರಶಸ್ತಿಗಳು

2007- ಟಿ20 ವಿಶ್ವಕಪ್

2010- ಐಪಿಎಲ್

2010- ಏಷ್ಯಾ ಕಪ್, ಚಾಂಪಿಯನ್ಸ್ ಲೀಗ್

2011- ಏಕದಿನ ವಿಶ್ವಕಪ್, ಐಪಿಎಲ್

2013- ಚಾಂಪಿಯನ್ಸ್ ಟ್ರೋಫಿ

2014- ಚಾಂಪಿಯನ್ಸ್ ಲೀಗ್

2016- ಏಷ್ಯಾ ಕಪ್

2018- ಐಪಿಎಲ್

2021- ಐಪಿಎಲ್ 2023- ಐಪಿಎಲ್

ಧೋನಿಗೆ ಸೆಹ್ವಾಗ್ ಸ್ಪೆಷಲ್ ಶುಭ ಹಾರೈಕೆ

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ‘ಆಕಾಶದ ರಥವನ್ನು ಎಳೆಯಲು ಸೂರ್ಯನಿಗೆ 7 ಕುದುರೆಗಳಿವೆ. ಋಗ್ವದದಲ್ಲಿ 7 ಭಾಗಗಳು, 7 ಋತುಗಳು ಮತ್ತು 7 ಕೋಟೆಗಳನ್ನು ಹೊಂದಿದೆ. ‘ಸರಿಗಮಪದನಿ 7, ದಾಂಪತ್ಯದಲ್ಲಿ 7 ಹೆಜ್ಜೆಗಳು, ವಿಶ್ವದ 7 ಅದ್ಭುತಗಳು, 7ನೇ ತಿಂಗಳ 7ನೇ ದಿನ ಧೋನಿ ಹುಟ್ಟುಹಬ್ಬ’ ಎಂದು ಸೆಹ್ವಾಗ್ ಟ್ವಿಟ್ ಮಾಡಿದ್ದಾರೆ

 

ಫ್ಯಾನ್ಸ್ ಗೆ ಧೋನಿ ಸರ್ಪ್ರೈಸ್!

ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ವಿಶ್ವದಾದ್ಯಂತ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ಸಂದರ್ಭದಲ್ಲಿ ರಾಂಚಿಯಲ್ಲಿರುವ ಧೋನಿ ನಿವಾಸದ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಧೋನಿ ಮನೆಯ ಮೇಲಿಂದ ಅಭಿಮಾನಿಗಳಿಗೆ ಕೈ ಬೀಸಿ ಧನ್ಯವಾದ ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ವಿಡಿಯೋ ಆಫ್ ದಿ ಡೇ’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ