• 8 ಸೆಪ್ಟೆಂಬರ್ 2024

ಇಂದು ದಾದಾ ರವರ ಜನ್ಮದಿನ: ಸೌರವ್

 ಇಂದು ದಾದಾ ರವರ ಜನ್ಮದಿನ: ಸೌರವ್
Digiqole Ad

ಇಂದು ದಾದಾ ರವರ ಜನ್ಮದಿನ: ಸೌರವ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಇಂದು (ಜುಲೈ 8) 51ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೌರವ್ ಗಂಗೂಲಿಯನ್ನು ಕ್ರಿಕೆಟಿಗರು ಮತ್ತು ಅಭಿಮಾನಿಗಳು “ದಾದಾ’ ಎಂದು ಕರೆಯುತ್ತಾರೆ.

1972, ಜುಲೈ 8ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಜನಿಸಿದ ಸೌರವ್ ಗಂಗೂಲಿ, ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳ, ಅನಂತರ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದರು. ಈ ಎಡಗೈ ಬ್ಯಾಟರ್ ಮುಂದೊಂದು ದಿನ ತಂಡದ ನಾಯಕನಾಗಿ, ಬಿಸಿಸಿಐ ಅಧ್ಯಕ್ಷರೂ ಕೂಡ ಆಗಿದ್ದರು.

ಸೌರವ್ ಗಂಗೂಲಿ ಭಾರತ ತಂಡದ ಪರ ಉತ್ತಮ ರನ್ ಗಳಿಸಿದ್ದಾರೆ ಮತ್ತು ನಾಯಕನಾಗಿ ಭಾರತ ತಂಡವನ್ನು ಉತ್ತುಂಗಕ್ಕೆ ಏರಿಸಿದವರಲ್ಲಿ ಇವರೂ ಒಬ್ಬರು. ಎದುರಾಳಿ ತಂಡಗಳ ಸ್ಲೆಡ್ಜಿಂಗ್‌ಗೆ ಮೈದಾನದಲ್ಲಿ ದಿಟ್ಟ ಉತ್ತರ ನೀಡಲು ಪ್ರಾರಂಭಿಸಿದ್ದೇ ಸೌರವ್ ಗಂಗೂಲಿ ನಾಯಕತ್ವದಲ್ಲಿ.

ಸೌರವ್ ಗಂಗೂಲಿ ಅವರ ಚಾಣಾಕ್ಷ ನಾಯಕತ್ವದಲ್ಲಿ ಭಾರತ ತಂಡ ಅನೇಕ ದೊಡ್ಡ ಸರಣಿಗಳನ್ನು ಗೆದ್ದಿದೆ.

ಗಂಗೂಲಿಯ ಅದ್ಭುತ ದಾಖಲೆಗಳು

  • ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ ಶತಕ
  • ಒಡಿಐ ವಿಶ್ವಕಪ್‌ನಲ್ಲಿ ಭಾರತೀಯ ಆಟಗಾರನೋರ್ವನ ಅತ್ಯಧಿಕ ಸ್ಕೋರ್ (183)
  • ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಶತಕಗಳು
  • ಭಾರತಕ್ಕಾಗಿ ಒಂದು ಪಂದ್ಯವನ್ನು ಸೋಲದೆ ಅತಿ ಹೆಚ್ಚುಟೆಸ್ಟ್ ಶತಕಗಳು (16)
  •  ಒಡಿಐಗಳಲ್ಲಿ ನಾಲ್ಕು ಸತತ POTM ಹೊಂದಿರುವ ಏಕೈಕ ಕ್ರಿಕೆಟಿಗ
  • ಕಪಿಲ್‌ದೇವ್ ಬಳಿಕ ಭಾರತವನ್ನು ODI WC ಫೈನಲ್‌ಗೆ ತಂಡ ಕೊಂಡೊಯ್ದ 2ನೇ ನಾಯಕ

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ