• 8 ಸೆಪ್ಟೆಂಬರ್ 2024

ಅಪಾಯವನ್ನು ಕೈಬೀಸಿ ಕರೆಯುತ್ತಿರುವ ರಸ್ತೆ ಬದಿಯ ಸಾಲು ಸಾಲು ಮರಗಳು

 ಅಪಾಯವನ್ನು ಕೈಬೀಸಿ ಕರೆಯುತ್ತಿರುವ ರಸ್ತೆ ಬದಿಯ ಸಾಲು ಸಾಲು ಮರಗಳು
Digiqole Ad

ಅಪಾಯವನ್ನು ಕೈಬೀಸಿ ಕರೆಯುತ್ತಿರುವ ರಸ್ತೆ ಬದಿಯ ಸಾಲು ಸಾಲು ಮರಗಳು

ಪುತ್ತೂರು : ಕುರಿಯ ಗ್ರಾಮದ ನೈತಾಡಿಯಿಂದ ಇಡಬೆಟ್ಟು ನಡುವೆ ರಸ್ತೆಗೆ ಬಾಗಿ ಸಾಲು ಸಾಲು ಮರಗಳು ಅಪಾಯದ ಮಟ್ಟಕ್ಕೆ ಬೆಳೆದು ಯಾವುದೇ ಸಮಯದಲ್ಲೂ ಮುರಿದು ಬೀಳುವ ಪರಿಸ್ಥಿಯಲ್ಲಿದೆ.ಅಂದಾಜು ಸುಮಾರು 100 ಅಧಿಕ ಮನೆಗಳು ಈ ಪ್ರದೇಶದಲ್ಲಿದ್ದು ಜನರು ಇದೇ ರಸ್ತೆ ಮಾರ್ಗವಾಗಿ ಹಾದು ಹೋಗುವ ಕಾರಣ ಅಪಾಯದ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ‌ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.ಸತತ ಮಳೆಯಿಂದಾಗಿ ಕಳೆದ ಒಂದು ವಾರದಲ್ಲಿ ಹಲವು ಮರಗಳು ಧರೆಗುಳಿದಿವೆ.ಅದೃಷ್ಟವಶಾತ್ ಜನ ಸಂಚಾರ ಇಲ್ಲದ ಸಮಯದಲ್ಲಿ ಸಂಭವಿಸಿರುವುದರಿಂದ ಯಾವುದೇ ಹಾನಿ ಸಂಭವಿಸಿಲ್ಲ.ಹಲವು ವರ್ಷಗಳಿಂದ ಮರೀಚಿಕೆಯಾಗಿ ಉಳಿದಿದ್ದ ರಸ್ತೆಯ ಕಾಮಾಗಾರಿ ಕಾರ್ಯ ಊರವರ ಪ್ರತಿಭಟನೆ ಮತ್ತು ಹೋರಾಟದ ನಂತರ ಕಳೆದ ವರ್ಷ ರಸ್ತೆ ಮರು ನವೀಕರಿಸಲಾಗಿದ್ದು ಕಾಮಗಾರಿ ನಡೆಯುವ ಸಂದರ್ಭದಲ್ಲಿ ರಸ್ತೆಯನ್ನು ತಗ್ಗಿಸಿದ ಪರಿಣಾಮ ಮರಗಳು ಅಪಾಯದ ಮಟ್ಟಕ್ಕೆ ತಲುಪಿವೆ.ಮಾನ್ಯ ಶಾಸಕರು ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ತಕ್ಷಣವೇ ಸೂಚನೆ ನೀಡಿ ಮರಗಳನ್ನು ತೆರವುಗೊಳಿಸಿ ಕೊಡಬೇಕೆಂದು ಈ‌ ಮೂಲಕ‌ ಮನವಿ ಮಾಡಿಕೊಳ್ಳುತ್ತೇವೆ. ವಂದನೆಗಳೊಂದಿಗೆ……….. ಸಮಸ್ತ ನಾಗರೀಕ ಬಂಧುಗಳು ಇಡಬೆಟ್ಟು,ಕುರಿಯ ಗ್ರಾಮ ,ಪುತ್ತೂರು. __________________________

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ