• 8 ಸೆಪ್ಟೆಂಬರ್ 2024

ಹ್ಯುಂಡೈ ಎಕ್ಸ್‌ಟರ್ SUV ಕಾರು ಬಿಡುಗಡೆ! ಈ ಕಾರಿಗೆ ಭಾರೀ ಡಿಮಾಂಡ್!

 ಹ್ಯುಂಡೈ ಎಕ್ಸ್‌ಟರ್ SUV ಕಾರು ಬಿಡುಗಡೆ! ಈ ಕಾರಿಗೆ ಭಾರೀ ಡಿಮಾಂಡ್!
Digiqole Ad

ಹ್ಯುಂಡೈ ಎಕ್ಸ್‌ಟರ್ SUV ಕಾರು ಬಿಡುಗಡೆ

 

ಹ್ಯುಂಡೈ ಹೊಚ್ಚ ಹೊಸ ಮೈಕ್ರೋ ಎಸ್‌ಯುವಿ ಎಕ್ಸ್‌ಟರ್ ಕಾರು ಬಿಡುಗಡೆ ಯಾಗಿದ್ದು. ಟಾಟಾ ಪಂಚ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಈ ಹ್ಯುಂಡೈ ಎಕ್ಸ್‌ಟರ್ ಆರಂಭಿಕ ಬೆಲೆ 5.99 ಲಕ್ಷ ರೂಪಾಯಿ ಯಾಗಿದೆ.

ಈ ಕಾರಿಗೆ ಭಾರೀ ಡಿಮಾಂಡ್!

ಈ ಕಾರು ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ಟಾಟಾ ಪಂಚ್ ಕಾರು ಬಿಡುಗಡೆ ಬಳಿ ಮೈಕ್ರೋ ಎಸ್‌ಯುವಿ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಟಾಟಾ ಪಂಚ್‌ಗೆ ಪ್ರತಿಸ್ಪರ್ಧಿಯಾಗಿ ಹ್ಯುಂಡೈ ಎಕ್ಸ್‌ಟರ್ ಕಾರು ಬಿಡುಗಡೆ ಮಾಡಿದೆ.ನೂತನ ಕಾರಿನ ಬೆಲೆ 5.99 ಲಕ್ಷ ರೂಪಾಯಿಯಿಂದ ಆರಂಭಗೊಂಡಿದೆ ಇದು ಮಿನಿ ಎಸ್‌ಯುವಿ ಕಾರು ಹೌದು.

ಇದರ ಟಾಪ್ ಮಾಡೆಲ್ ಬೆಲೆ 9.31 ಲಕ್ಷ ರೂಪಾಯಿ ಹ್ಯುಂಡೈನ ಕೈಗೆಟುಕವ ದರ ಎಸ್‌ಯುವಿ ಅನ್ನೋ ಹೆಗ್ಗಳಿಕೆಗೆ ಈ ನೂತನ ಕಾರು ಪಾತ್ರವಾಗಿದೆ. ಮೈಕ್ರೋ ಎಸ್‌ಯುವಿ ಅತ್ಯುತ್ತಮ ಕಾರುಗಳ ಪೈಕಿ ಹ್ಯುಂಡೈ ಎಕ್ಸ್‌ಟರ್ ಅತೀ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹ್ಯುಂಡೈ ಎಕ್ಸ್‌ಟರ್ ಬೆಲೆ 5.99 ಲಕ್ಷ ರೂಪಾಯಿ.ಸಿಎನ್‌ಜಿ ವೇರಿಯೆಂಟ್ ಕಾರು 68 BHP ಪವರ್ ಹಾಗೂ 95.2 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.ನೂನತ ಕಾರು 81.86BHP ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ ಹ್ಯುಂಡೈ ಪೆಟ್ರೋಲ್ ಮ್ಯಾನ್ಯುಯೆಲ್ ಎಂಜಿನ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 19.4 ಕಿ.ಮೀ ಮೈಲೇಜ್ ನೀಡಲಿದೆ.

ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು 19.2 ಕಿಲೋಮೀಟರ್ ಹಾಗೂ ಸಿಎನ್‌ಜಿ ವೇರಿಯೆಂಟ್ ಕಾರು 27.1 ಕಿಲೋಮೀಟರ್ ಮೈಲೇಜ್ ನೀಡಲಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ