• 8 ಸೆಪ್ಟೆಂಬರ್ 2024

ಮರ್ಕಂಜ ಗ್ರಾಮ ಸಭೆ:ಅಧಿಕಾರಿಗಳ ಗೈರುಹಾಜರಿ ಬಗ್ಗೆ ಗ್ರಾಮಸ್ಥರ ಆಕ್ರೋಶ

 ಮರ್ಕಂಜ ಗ್ರಾಮ ಸಭೆ:ಅಧಿಕಾರಿಗಳ ಗೈರುಹಾಜರಿ ಬಗ್ಗೆ ಗ್ರಾಮಸ್ಥರ ಆಕ್ರೋಶ
Digiqole Ad

ಮರ್ಕಂಜ ಗ್ರಾಮ ಸಭೆ:ಅಧಿಕಾರಿಗಳ ಗೈರುಹಾಜರಿ ಬಗ್ಗೆ ಗ್ರಾಮಸ್ಥರ ಆಕ್ರೋಶ

ದಿನಾಂಕ 11/7/2023 ರಂದು ಮರ್ಕಂಜ ಸಿ ಎ ಬ್ಯಾಂಕಿನ ಸಭಾ ಭವನದಲ್ಲಿ ಮರ್ಕಂಜ ಗ್ರಾಮ ಪಂಚಾಯಿತಿಯ ದ್ವಿತಿಯ ಹಂತದ ಗ್ರಾಮ ಸಭೆ ನಡೆಯಿತು. ಗ್ರಾಮ ಸಭೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು , ಅರಣ್ಯ ಇಲಾಖೆಯ ಅಧಿಕಾರಿಗಳು,ಗ್ರಾಮ ಲೆಕ್ಕಿಗರು, ಗೈರು ಹಾಜರಾದ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು, ಮರ್ಕಂಜ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಇದ್ದು ವಾರಕ್ಕೆ ಒಂದು ದಿನ ವೈದ್ಯರು ಆರೋಗ್ಯ ಕೇಂದ್ರ ಕ್ಕೆ ಬರುವಂತೆ ಗ್ರಾಮಸ್ಥರು ಆಗ್ರಹಿಸಿದರು, ಗ್ರಾಮ ಪಂಚಾಯತ್ ಸದಸ್ಯರ ಗೌರವಧನ ಹೆಚ್ಚಿಸುವಂತೆ ಸರಕಾರಕ್ಕೆ ಗ್ರಾಮ ಮಟ್ಟದಿಂದ ಮನವಿ ಮಾಡಬೇಕೆಂದು ಚರ್ಚೆ ನಡೆಯಿತು. ಆಕ್ರಮ ಸಕ್ರಮ ಪೈಲ್ ಮೂವ್ ಆಗುವುದಿಲ್ಲ. ಪ್ಲೋಟಿಂಗ್ ಆಗದೆ ಜಾಗದ ದಾಖಲೆಗಳು ಸರಿ ಇಲ್ಲ. ಮನೆ ನಿರ್ಮಾಣ ಮಾಡುವುದಕ್ಕೂ ಕಷ್ಟ ಈ ಬಗ್ಗೆ ಕೂಡ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು,ಗ್ರಾಮ ಲೆಕ್ಕಿಗರ ಸಹಾಯಕರು (ಉಗ್ರಾಣಿ)ಸಭೆಯ ಮಧ್ಯದಿಂದ ಹೊರ ನಡೆದಿರುತ್ತಾರೆ.

ಈ ಸಂದರ್ಭದಲ್ಲಿ ಗ್ರಾಮಪಂಚಾತ್ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು, ಗ್ರಾಮಪಂಚಾಯತ್ ಕಛೇರಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ