• 8 ಸೆಪ್ಟೆಂಬರ್ 2024

ಪಳೆಯುಳಿಕೆಯಂತೆ ನೆಲೆ ನಿಂತಿದೆ ಬಾಲಕರ ವಸತಿ ನಿಲಯದ ಗೋಡೆಗಳು

 ಪಳೆಯುಳಿಕೆಯಂತೆ ನೆಲೆ ನಿಂತಿದೆ ಬಾಲಕರ ವಸತಿ ನಿಲಯದ ಗೋಡೆಗಳು
Digiqole Ad

ಪಳೆಯುಳಿಕೆಯಂತೆ ನೆಲೆ ನಿಂತಿದೆ ಬಾಲಕರ ವಸತಿ ನಿಲಯದ ಗೋಡೆಗಳು

ಪೊನ್ನಂಪೇಟೆ ಕುಂದಾ ರಸ್ತೆಗೆ ಹೋಗುವ ಮಾರ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯ ಕಟ್ಟಡವು ಶಿಥಿಲಾ ವ್ಯವಸ್ಥೆಯಿಂದ ಕೂಡಿದ್ದರಿಂದ ಈ ಕಟಡವನ್ನು ಕೆಡವಿ ನೂತನ ಕಟ್ಟಡವನ್ನು ಕಟ್ಟಲು ಸರ್ಕಾರ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆಯನ್ನು ನೀಡಿದೆ. ಈ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಳೆ ಕಟ್ಟಡದ ಹೆಂಚು ಮತ್ತು ಮೇಲ್ಚಾವಣಿಗಳನ್ನು ಕಳಚಿ. ಗೋಡೆಗಳನ್ನು ತೆರವುಗೊಳಿಸದೆ ಕಳೆದ 2 ತಿಂಗಳಿಂದ ಪಳೆಯುಳಿಕೆಯ ರೀತಿಯಲ್ಲಿ ಉಳಿಸಿಕೊಂಡಿದ್ದಾರೆ. ಇಲ್ಲಿ ತಂಗುತ್ತಿದ್ದ ಒಟ್ಟು 44 ಹೆಚ್ಚು ಬಾಲಕರನ್ನು ತಾತ್ಕಾಲಿಕವಾಗಿ ಹಿಂಬದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಬಾಲಕರು ಈ ಗೋಡೆ ಬದಿಗಾಗಿ ಓಡಾಡುತ್ತಿದ್ದು ಶಿಥಿಲ ವ್ಯವಸ್ಥೆಯಲ್ಲಿರುವ ಗೋಡೆಗಳು ಏನಾದರೂ ವಿದ್ಯಾರ್ಥಿಗಳ ಮೇಲೆ ಬಿದ್ದರೆ ದೊಡ್ಡ ಪ್ರಮಾಣದ ಅನಾಹುತ ಸಂಭವಿಸಲಿದೆ. ಮಳೆಗಾಲವಾದರಿಂದ ಗೋಡೆಗಳು ನೀರು ಕುಡಿದು ಬೀಳುವ ಹಂತದಲ್ಲಿದೆ. ಈ ಭಾಗಕ್ಕಾಗಿ ಹಾದು ಹೋಗುವರು ನಿರ್ಮಿತಿ ಕೇಂದ್ರದ ಈ ನಿರ್ಲಕ್ಷತನದ ಬಗ್ಗೆ ಕೂರ್ಗ್ ಎಕ್ಸ್ಪ್ರೆಸ್ ನೊಂದಿಗೆ ಹೇಳಿಕೊಂಡಿದ್ದಾರೆ. ಸಾಮಾನ್ಯ ಜ್ಞಾನವಿಲ್ಲದ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಒಂದಡೆಯಾದರೆ. ಇದರ ಹಿಂಬದಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಇದ್ದು ಇವರುಗಳು ಕೂಡ ಈ ಬಗೆ ಕ್ರಮ ಕೈಗೊಳ್ಳದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಸಂಬಂಧಿಸಿದ ಇಲಾಖೆಯವರು ಮತ್ತು ಆಡಳಿತ ಈ ಗೋಡೆಗಳ ತೆರವು ಗೋಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಕಳೆದ ಎಂಟು ದಿನಗಳ ಹಿಂದೆ ಸಂಪೂರ್ಣ ಬಿಸಿಲಿದ್ದರೂ ಕೂಡ ಈ ಕಟ್ಟಡಗಳನ್ನು ತೆರವು ಗೊಳಿಸಿಲ್ಲ.. ಈಗಲೂ ಕೂಡ ಮಳೆಯ ಪ್ರಮಾಣ ಕಡಿಮೆ ಇದ್ದು ತೆರವು ಕಾರ್ಯ ಮಾಡಬಹುದಾಗಿದೆ. ನಿರ್ಮಿತಿ ಕೇಂದ್ರದ ಬಹುತೇಕ ಕೆಲಸ ಕಾರ್ಯಗಳು ಕೂಡ ಜಿಲ್ಲೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದು. ಹಿಂದೆ ಜಿಲ್ಲಾ ಪಂಚಾಯತ್ ಸಭೆಗಳಲ್ಲಿಯೂ ಕೂಡ ಲ್ಯಾಂಡ್ ಆರ್ಮಿ ಹಾಗು ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆಯನ್ನು ನೀಡದಂತೆ ಕೂಡ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ