• 8 ಸೆಪ್ಟೆಂಬರ್ 2024

ಫ್ರಾನ್ಸ್‌ನಲ್ಲಿ ಬಾಸ್ಟಿಲ್‌ ಡೇ ಪರೇಡ್‌ನಲ್ಲಿ ಭಾಗಿಯಾದ ಮೋದಿ

 ಫ್ರಾನ್ಸ್‌ನಲ್ಲಿ ಬಾಸ್ಟಿಲ್‌ ಡೇ ಪರೇಡ್‌ನಲ್ಲಿ ಭಾಗಿಯಾದ ಮೋದಿ
Digiqole Ad

ಫ್ರಾನ್ಸ್‌ನಲ್ಲಿ ಬಾಸ್ಟಿಲ್‌ ಡೇ ಪರೇಡ್‌ನಲ್ಲಿ ಭಾಗಿಯಾದ ಮೋದಿ

ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಬಾಸ್ಟಿಲ್ ಡೇನಲ್ಲಿ ಪಾಲ್ಗೊಂಡಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಮ್ಯಾನುಯೆಲ್ ಮ್ಯಾಕ್ರೋನ್ ಅಹ್ವಾನದ ಮೇರೆಗೆ ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗಿಯಾದ ಮೋದಿಗೆ ಗೌರವ ವಂದನೆ ನೀಡಲಾಗಿದೆ. ಫ್ರಾನ್ಸ್ ಸೇನಾ ವಿಮಾನಗಳ ವೈಮಾನಿಕ ಪ್ರದರ್ಶನ ಮೈನವೀರೇಳುವಂತಿತ್ತು. ಇತ್ತ ಆಕರ್ಷಕ ಪಥಸಂಚಲನ ಬಾಸ್ಟಿಲ್ ಡೇ ಮೆರುಗು ಹೆಚ್ಚಿಸಿತ್ತು. ಪ್ರಧಾನಿ ಮೋದಿಯನ್ನು ಈ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಪ್ರಧಾನಿ ಮೋದಿ, ಮ್ಯಾಕ್ರೋನ್ ಸೇರಿದಂತೆ ಗಣ್ಯರು ತಮ್ಮ ಆಸೀನದಲ್ಲಿ ಕುಳಿತಕೊಂಡ ಬೆನ್ನಲ್ಲೇ ಸೇನೆಯ ವೈಮಾನಿಕ ಪ್ರದರ್ಶನ ಆರಂಭಗೊಂಡಿತು.ಫ್ರಾನ್ಸ್ ಬ್ಯೂರೋಕ್ರಾಟ್ಸ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ನಾಯಕರ ಜೊತೆ ಮೋದಿ ಮಾತುಕತೆ ನಡಸಿದರು. ಆಗಸದಲ್ಲಿ ಸೇನಾ ಏರ್‌ಕ್ರಾಫ್ಟ್ ಚಿತ್ತಾರ ಮೂಡಿಸಿತು. ಫ್ರಾನ್ಸ್ ತನ್ನ ರಾಷ್ಟ್ರೀಯ ದಿನದ ಅಂಗವಾಗಿ ವಿಝಿಂಗ್ ಯುದ್ಧವಿಮಾನಗಳು ಮತ್ತು ಪ್ಯಾರಿಸ್‌ನಲ್ಲಿ ಭವ್ಯವಾದ ಬಾಸ್ಟಿಲ್ ಡೇ ಪರೇಡ್‌ ಅನ್ನು ಆಚರಿಸುತ್ತಿದೆ, ಅಲ್ಲಿ ಭಾರತೀಯ ಸೇನಾ ತುಕಡಿ ಸಹ ಭಾಗವಹಿಸುತ್ತಿದೆ. ಈ ವರ್ಷವು ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವನ್ನು ಸಹ ಸೂಚಿಸುತ್ತದೆ. ಇದಕ್ಕೂ ಮೊದಲು ಮೋದಿಯವರಿಗೆ ಮ್ಯಾಕ್ರೋನ್‌ ಫ್ರಾನ್ಸಿನ ಅತ್ಯುನ್ನತ ನಾಗರಿಕ ಗೌರವವನ್ನು ಪ್ರದಾನಿಸಿದರು.

ಬಾಸ್ಟಿಲ್ ಡೇ ಪರೇಡ್ ಆಚರಣೆಯ ಪ್ರಮುಖ ಅಂಶವಾಗಿದೆ.ಎರಡು ದಿನಗಳ ಅಧಿಕೃತ ಭೇಟಿಗಾಗಿ ಪ್ರಧಾನಿ ಮೋದಿ ಫ್ರಾನ್ಸ್‌ನಲ್ಲಿದ್ದಾರೆ. 1789 ರಲ್ಲಿ ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಬಾಸ್ಟಿಲ್ ಜೈಲು ದಾಳಿಯ ನೆನಪಿಗಾಗಿ ಫ್ರೆಂಚ್ ರಾಷ್ಟ್ರೀಯ ದಿನ ಅಥವಾ ಬಾಸ್ಟಿಲ್ಲೆ ದಿನವು ಫ್ರೆಂಚ್ ಕಮಾಂಡ್‌ನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. .ಜುಲೈ 15ರಂದು ಅಬುಧಾಬಿ ಪ್ರವಾಸ ಕೈಗೊಳ್ಳಲಿರುವ ಅವರು, ಯುಎಇ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್‌ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. 269 ಸದಸ್ಯರ ಭಾರತೀಯ ತ್ರಿ-ಸೇವಾ ತುಕಡಿಯು ಪರೇಡ್‌ನಲ್ಲಿ ಭಾಗವಹಿಸಿವೆ. ಈ ಸಂದರ್ಭದಲ್ಲಿ ಫ್ರೆಂಚ್ ಜೆಟ್‌ಗಳೊಂದಿಗೆ ಭಾರತೀಯ ವಾಯುಪಡೆಯ (ಐಎಎಫ್) ಮೂರು ರಫೇಲ್ ಫೈಟರ್ ಜೆಟ್‌ಗಳು ಫ್ಲೈಪಾಸ್ಟ್‌ಗೆ ಸೇರಿಕೊಂಡಿವೆ. ಯುಎಇ ಜತೆಗಿನ ಭಾರತದ ಸಂಬಂಧ ವೃದ್ಧಿ, ರಕ್ಷಣೆ, ವ್ಯಾಪಾರ, ಆಹಾರ ಸೇರಿ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ