• 8 ಸೆಪ್ಟೆಂಬರ್ 2024

ಇಪ್ಪತ್ತು ಸಾವಿರಕ್ಕೆ ಮಾರಾಟವಾದ ಮೀನು!ಏನಿದರ ವಿಶೇಷತೆ

 ಇಪ್ಪತ್ತು ಸಾವಿರಕ್ಕೆ ಮಾರಾಟವಾದ ಮೀನು!ಏನಿದರ ವಿಶೇಷತೆ
Digiqole Ad

ಇಪ್ಪತ್ತು ಸಾವಿರಕ್ಕೆ ಮಾರಾಟವಾದ ಮೀನು!ಏನಿದರ ವಿಶೇಷತೆ 

ಆಂಧ್ರಪ್ರದೇಶದಲ್ಲಿ ಅತ್ಯಂತ ವಿರಳವಾಗಿ ಸಿಗುವ ಹಾಗೂ ಪರಿಮಳಯುಕ್ತ ಮೀನು ಇದಾಗಿದೆ. ಚೇಪಾಲ ಪುಲುಸು ಎನ್ನುವ ಮೀನಿನ ಖಾದ್ಯದಿಂದಲೇ ಈ ಮೀನಿಗೆ ಪುಲಸ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ತನ್ನ ವಿಶೇಷ ರುಚಿಯಿಂದಾಗಿ ಇಡೀ ಆಂಧ್ರದಲ್ಲಿ ಇದು ಫೇಮಸ್‌ ಆಗಿದೆ. ಪುಲಸ ಮೀನು ಆಂಧ್ರಪ್ರದೇಶದಲ್ಲಿ ಎಷ್ಟು ಫೇಮಸ್‌ ಎಂದರೆ, ಈ ಮೀನು ಸಿಗುವ ಋತುವಿನ ಮುಂಚಿತವಾಗಿಯೇ ಗ್ರಾಹಕರು ಮೀನುಗಾರರಿಗೆ ಮೀನುನ ಅಡ್ವಾನ್ಸ್‌ ಹಣವನ್ನು ಪಾವತಿ ಮಾಡಿರುತ್ತಾರೆ.ಚೇಪಾಲ ಪುಲುಸು ಎಂದರೆ ಮೀನು ಸಾರು ಎಂದರ್ಥ.ಆಂಧ್ರದ ಕರಾವಳಿ ಪ್ರದೇಶದ ಕುಟುಂಬಗಳು ಚೇಪಾಲ ಪುಲುಸುವನ್ನು ರಾಜ ಭಕ್ಷ್ಯವೆಂದು ಪರಿಗಣಿಸುವುದು ಮಾತ್ರವಲ್ಲ ಮೀನುಗಾರಿಕೆಗೆ ಹೋದಾದ ಈ ಮೀನು ಸಿಕ್ಕಲ್ಲಿ ಅದನ್ನು ಊರಿನ ಪ್ರಭಾವಿ ಜನರಿಗೆ ಉಡುಗೊರೆಯಾಗಿ ನೀಡುತ್ತಾರೆ.

ಜುಲೈನಿಂದ ಸೆಪ್ಟೆಂಬರ್ ಆರಂಭದವರೆಗೆ ಗೋದಾವರಿ ಪ್ರದೇಶದಲ್ಲಿ ಮಾತ್ರ ಮೀನುಗಳು ವಿರಳವಾಗಿ ಕಂಡುಬರುತ್ತವೆ. ‘ಹಿಲ್ಸಾ’ ಎಂದೂ ಕರೆಯಲ್ಪಡುವ ಈ ಮೀನುಗಳು ಮಳೆಗಾಲದಲ್ಲಿ ಸಂತಾನೋತ್ಪತ್ತಿಗಾಗಿ ನದಿಮುಖಜಗಳಿಗೆ ವಲಸೆ ಹೋಗುತ್ತವೆ. ಸಂತಾನೋತ್ಪತ್ತಿ ಅವಧಿಯ ನಂತರ ಪುಲಸ ಮೀನುಗಳು ಸಾಯುತ್ತವೆ. ಆದ್ದರಿಂದ ಸೂಕ್ತವಾದ ಸಮಯದಲ್ಲಿ ಮೀನುಗಳನ್ನು ಹಿಡಿಯಬೇಕು. ಮೀನು ಉಪ್ಪುನೀರಿನಿಂದ ಸಿಹಿನೀರಿಗೆ ಚಲಿಸುವಾಗ ಬದಲಾವಣೆಗಳಿಗೆ ಒಳಗಾಗುತ್ತದೆ, ಆಗ ಮೀನು ತನ್ನ ಪರಿಮಳವನ್ನು ಹೆಚ್ಚಿಸಿಕೊಳ್ಳುತ್ತದೆ. ನದೀಮುಖಗಳು ಕರಾವಳಿಯ ಜಲಮೂಲಗಳಾಗಿವೆ, ಅಲ್ಲಿ ಭೂಮಿ ಸಮುದ್ರಕ್ಕೆ ಪರಿವರ್ತನೆಯಾಗುತ್ತದೆ ಮತ್ತು ನದಿಗಳು ಮತ್ತು ತೊರೆಗಳಿಂದ ಸಿಹಿನೀರು ಸಮುದ್ರದಿಂದ ಉಪ್ಪುನೀರಿನೊಂದಿಗೆ ಬೆರೆಯುತ್ತದೆ.ಗೋದಾವರಿ ಪ್ರದೇಶದ ಸ್ಥಳೀಯ ಮಾರುಕಟ್ಟೆಗಳಲ್ಲಿ ಒಂದು ಕಿಲೋಗ್ರಾಂ ಮೀನು 4,000 ರೂ.ಗೆ ಮಾರಾಟವಾಗುತ್ತದೆ. ಒಮ್ಮೊಮ್ಮೆ ಒಂದು ಮೀನು 20 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ