• 8 ಸೆಪ್ಟೆಂಬರ್ 2024

ವಾಟ್ಸ್​ಆ್ಯಪ್ ಚಾಟ್​ನಲ್ಲಿ ಬಂದಿದೆ ಹೊಸ ಫೀಚರ್: ಈಗ ವಿಡಿಯೋ ಮೂಲಕ ಮೆಸೇಜ್ ಕಳುಹಿಸಿ

 ವಾಟ್ಸ್​ಆ್ಯಪ್ ಚಾಟ್​ನಲ್ಲಿ ಬಂದಿದೆ ಹೊಸ ಫೀಚರ್: ಈಗ ವಿಡಿಯೋ ಮೂಲಕ ಮೆಸೇಜ್ ಕಳುಹಿಸಿ
Digiqole Ad

ವಾಟ್ಸ್​ಆ್ಯಪ್ ಚಾಟ್​ನಲ್ಲಿ ಬಂದಿದೆ ಹೊಸ ಫೀಚರ್: ಈಗ ವಿಡಿಯೋ ಮೂಲಕ ಮೆಸೇಜ್ ಕಳುಹಿಸಿ

ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ವಾರಕ್ಕೊಂದು ಫೀಚರ್ ಬಿಡುಗಡೆ ಮಾಡುತ್ತಿರುವ ವಾಟ್ಸ್​ಆ್ಯಪ್ ಇದೀಗ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ.ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ತನ್ನ ವಾಟ್ಸ್​ಆ್ಯಪ್ ಬಳಕೆದಾರರಿಗೆ ಒಂದಲ್ಲ ಒಂದು ಹೊಸ ಫೀಚರ್ ನೀಡುವ ಬಗ್ಗೆ ಘೋಷಣೆ ಮಾಡುತ್ತಲೇ ಇರುತ್ತಾರೆ. ಈಗಾಗಲೇ ಈ ಫೀಚರ್ ಕೆಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗುತ್ತಿದೆ. ಕೆಲವು ದಿನಗಳಲ್ಲಿ ಎಲ್ಲ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗುತ್ತದಂತೆ.ಈ ಹೊಸ ಆಯ್ಕೆ ಬಳಕೆದಾರರಿಗೆ 60 ಸೆಕೆಂಡುಗಳ ಕಿರು ವಿಡಿಯೋ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅನುಮತಿಸುತ್ತದೆ. ಖುಷಿಯಲ್ಲಿ ನಗುವುದು ಅಥವಾ ಒಳ್ಳೆಯ ಸುದ್ದಿಯನ್ನು ಹೇಳಲು, ವಿಡಿಯೋ ಮೂಲಕ ಎಲ್ಲಾ ಭಾವನೆಗಳೊಂದಿಗೆ ನಿಮ್ಮ ಕ್ಷಣಗಳನ್ನು ಹಂಚಿಕೊಳ್ಳಲು ಇದು ಒಳ್ಳೆಯ ಮಾರ್ಗವಾಗಿದೆ ಎಂದು ವಾಟ್ಸ್​ಆ್ಯಪ್ ಹೇಳಿದೆ.ಸೇವ್ ಮಾಡದೆ.


ಈ ಹಿಂದೆ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಆನೌನ್ ನಂಬರ್​ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಆ ಸಂಖ್ಯೆಯನ್ನು ಕಾಂಟೆಕ್ಟ್ ಲಿಸ್ಟ್​ನಲ್ಲಿ ಸೇವ್ ಮಾಡಬೇಕಿತ್ತು.ಇನ್ನುಂದೆ ವಾಟ್ಸ್​ಆ್ಯಪ್​ನ ಆಂಡ್ರಾಯ್ಡ್ ಮತ್ತು ಐಎಸ್ ಬಳಕೆದಾರರು ಆನೌನ್ ನಂಬರ್​ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು ಎಂದಿಲ್ಲ. ಬದಲಾಗಿ ನೇರವಾಗಿ ಮೆಸೇಜ್ ಮಾಡುವಂತಹ ಆಯ್ಕೆ ನೀಡಲಾಗಿದೆ.ಇದಕ್ಕಾಗಿ ನೀವು ವಾಟ್ಸ್​ಆ್ಯಪ್ ತೆರೆದು ‘ಸ್ಟಾರ್ಟ್ ನ್ಯೂ ಚಾಟ್’ ಬಟನ್ ಮೇಲೆ ಟ್ಯಾಪ್ ಮಾಡಬೇಕು. ಸರ್ಚ್ ಬಾರ್​ನಲ್ಲಿ ಅನೌನ್ ನಂಬರ್ ಅನ್ನು ಟೈಪ್ ಮಾಡಿದ ನಂತರ ಆ ಕಾಂಟೆಕ್ಟ್ ಅನ್ನು ಹುಡುಕಿ ಮೆಸೇಜ್ ಕಳುಹಿಸಲು ಆಯ್ಕೆ ಕೇಳುತ್ತದೆ.ಈ ಸಮಸ್ಯೆಯನ್ನು ಮನಗಂಡು ನೂತನ ಫೀಚರ್ ಅನ್ನು ವಾಟ್ಸ್​ಆ್ಯಪ್ ಬಿಡುಗಡೆ ಮಾಡಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ