• 8 ಸೆಪ್ಟೆಂಬರ್ 2024

ಈಶ್ವರಮಂಗಲದ ಆಟೋ ಚಾಲಕರ ಮಾಲಕ ಸಹೋದರರ ಜೊತೆ:ಅರುಣ್ ಕುಮಾರ್ ಪುತ್ತಿಲ

 ಈಶ್ವರಮಂಗಲದ ಆಟೋ ಚಾಲಕರ ಮಾಲಕ ಸಹೋದರರ ಜೊತೆ:ಅರುಣ್ ಕುಮಾರ್ ಪುತ್ತಿಲ
Digiqole Ad

ಈಶ್ವರಮಂಗಲದ ಆಟೋ ಚಾಲಕರ ಮಾಲಕ ಸಹೋದರರ ಜೊತೆ:ಅರುಣ್ ಕುಮಾರ್ ಪುತ್ತಿಲ

ಈಶ್ವರಮಂಗಲ:ನಮ್ಮ ನೆಚ್ಚಿನ  ಆಟೋ ಚಾಲಕರ ಮಾಲಕ ಸಹೋದರರ ಜೊತೆ ಮಾತುಕತೆ ನಡೆಸುತ್ತಿರುವ ಅರುಣ್ ಅಣ್ಣಾ ಕಾರ್ಯಕರ್ತ ಜನಸಾಮಾನ್ಯರ ಜೊತೆ ಸರಳತೆ ಯಿಂದ ಬೆರೆಯುವ ನಾಯಕ.

ಅರುಣ್ ಕುಮಾರ್‌ ಪುತ್ತಿಲರ ಪರಿಚಯ ಇಲ್ಲಿದೆ

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ.

“ಇದು ಬಂಡಾಯವಲ್ಲ. ಪ್ರತಿರೋಧ. ಇದು ನನ್ನ ಸ್ಪರ್ಧೆಯಲ್ಲ. ಕಾರ್ಯಕರ್ತರ ಆಯ್ಕೆ” – ಈ ಬರೆಹ ಅರುಣ್‌ ಕುಮಾರ್‌ ಪುತ್ತಿಲರ ಪ್ರಚಾರ ವಾಹನದಲ್ಲಿ ಎದ್ದುಕಾಣುವ ವಿಷಯ. ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಿಂದು ಮುಖಂಡರಾಗಿ ಕೆಲಸ ಮಾಡುತ್ತಿರುವವರು. ಹಿಂದು ಸಮುದಾಯದವರ ಯಾವುದೇ ನೋವಿಗೂ ಸ್ಪಂದಿಸುವ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡವರು.

ಅರುಣ್‌ ಕುಮಾರ್‌ ಪುತ್ತಿಲರ ಮಾಧ್ಯಮ ವಿಭಾಗ ಶೇರ್‌ ಮಾಡಿರುವ ಪ್ರೊಫೈಲ್‌ ಪ್ರಕಾರ, ಅವರು ಬಾಲ್ಯದ ದಿನಗಳಲ್ಲಿ ಸಂಘದ ಶಾಖೆ ನಡೆಸುತ್ತಿದ್ದರು. ಕಾಲೇಜು ಕಲಿಕೆಯ ಸಮಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌ನ ಸಕ್ರಿಯ ಸದಸ್ಯರಾಗಿದ್ದರು. ಐ ಜೆಸಿಐ ನರಿಮೊಗರು ಘಟಕದ ಅಧ್ಯಕ್ಷರಾಗಿದ್ದರು. ಮೂರು ದಶಕದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ನ ಸ್ವಯಂಸೇವಕ.

ಭಜರಂಗದಳದ ಜಿಲ್ಲಾ ಸಂಚಾಲಕನಾಗಿ ಜವಾಬ್ದಾರಿ ಇತ್ತು. ವಿಶ್ವ ಹಿಂದು ಪರಿಷತ್‌ನ ಸುವರ್ಣ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತ ಗ್ರಾಮ ಮಟ್ಟದ ಯುವ ಮೋರ್ಚಾ ಅಧ್ಯಕ್ಷರಾಗಿದ್ದರು. 2014ರಲ್ಲಿ ನಮೋ ಭಾರತ್‌ ಮೂಲಕ 10ಕ್ಕೂ ಹೆಚ್ಚು ನಮೋ ರಾಲಿ ಕಾರ್ಯಕ್ರಮ ಆಯೋಜಿಸಿದ್ದರು. 2018-19ರಲ್ಲಿ ಮೂಲ್ಕಿ-ಮೂಡಬಿದಿರೆ ವಿಧಾನಸಭಾಕ್ಷೇತ್ರದಲ್ಲಿ ಚುನಾವಣಾ ಅವಧಿಯಲ್ಲಿ 15 ದಿನ ಕ್ಷೇತ್ರ ವಿಸ್ತಾರಕನಾಗಿ ಕೆಲಸ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಕ್ಷೇತ್ರಗಳಲ್ಲಿ ಬಿಜೆಪಿ ಪರ ಮತಯಾಚನೆಗೂ ಹೋಗಿದ್ದರು. ಹಿಂದಿನ ಲೋಕಸಭೆ ಚುನಾವಣೆ ವೇಳೆ ಕೇರಳದ ಕಾಸರಗೋಡು, ಮಂಜೇಶ್ವರ ಕ್ಷೇತ್ರಗಳಲ್ಲಿ ತಲಾ ಐದು ದಿನ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಕೆಲಸ ಮಾಡಿದ್ದರು

ಇನ್ನು ಸ್ವಗ್ರಾಮ ಮುಂಡೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ 8 ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರತಿಗ್ರಾಮಕ್ಕೆ ತೆರಳಿ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಅರುಣ್ ಪುತ್ತಿಲ ಅವರು ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶ ಸಮಿತಿಯ ಹೊಣೆಗಾರಿಕೆ ನಿರ್ವಹಿಸಿದ್ದರು. ಮುಂಡೂರಿನ ಶ್ರೀ ಮೃತ್ಯುಂಜಯೇಶ್ವರ ದೇವಾಲಯದ ಬ್ರಹ್ಮಕಲಶ ಕಾರ್ಯಕ್ರಮದ ಹೊಣೆಗಾರಿಕೆ ನಿರ್ವಹಿಸಿದ್ದರು. ಪುತ್ತೂರು ಮತ್ತು ಸುತ್ತಮುತ್ತಲಿನ 52ಕ್ಕೂ ಹೆಚ್ಚು ದೇವಸ್ಥಾನ, ದೈವಸ್ಥಾನಗಳ ಬ್ರಹ್ಮಕಲಶ, ಜೀರ್ಣೋದ್ಧಾರ ಮುಂತಾದ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ.

ಸಾಮಾಜಿಕವಾಗಿ ಗಣೇಶೋತ್ಸವ, ನವರಾತ್ರಿ ಹಾಗೂ ಹಿಂದು ಸಂಸ್ಕೃತಿಯ ವಿವಿಧ ಚಟುವಟಿಕೆಗಳಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲೂ ತೊಡಗಿಸಿಕೊಂಡು ಹಿಂದುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ನೆರವಾಗಲು ಗ್ರಾಮ ಮಟ್ಟದಲ್ಲಿ ಶಿಬಿರಗಳನ್ನು ಏರ್ಪಡಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮನೆಗಳ ಸಂಪರ್ಕಕ್ಕೆ ರಸ್ತೆ ನಿರ್ಮಾಣ, ಅಶಕ್ತರಿಗೆ ಆರ್ಥಿಕ ನೆರವಿನ ಜತೆಗೆ ಮನೆ ನಿರ್ಮಾಣ, ಕೊರೊನಾ ಸಂದರ್ಭದಲ್ಲಿ ಸಾಮಾಜಿಕವಾಗಿ ನೆರವು ನೀಡುವುದು ಮುಂತಾದ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದಾರೆ.

ಹಿಂದೂ‌ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ‘ಪುತ್ತಿಲ ಪರಿವಾರ’ ಹೆಸರಿನಲ್ಲಿ ಹೊಸ ಸಂಘಟನೆ ಕೂಡ ಲೋಕಾರ್ಪಣೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರುಣಕುಮಾರ್ ಪುತ್ತಿಲ ಹೆಸರು ಟ್ರೆಂಡ್ನಲ್ಲಿದೆ. ಪುತ್ತಿಲ ಅವರನ್ನೇ ಎಂಪಿ ಅಭ್ಯರ್ಥಿಯಾಗಿ ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬಂದಿದೆ.

ಒಬ್ಬ ಪಕ್ಷೇತರ ಅಭ್ಯರ್ಥಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ  ಇತಿಹಾಸದಲ್ಲೇ ಪ್ರಥಮ ಬಾರಿಗೆ 60 ಸಾವಿರಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದ ಈ ಮಹಾನುಭಾವನ ಬಗ್ಗೆ ಬಣ್ಣಿಸಲು ಪದಗಳೇ ಸಿಗುತ್ತಿಲ್ಲ……..

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ