• 8 ಸೆಪ್ಟೆಂಬರ್ 2024

ಖಾಸಗಿ ಸಾರಿಗೆ ಸಂಘಟನೆಗಳ ಜೊತೆ 2 ನೇ ಸುತ್ತಿನ ಸಭೆ: ಸಚಿವ ರಾಮಲಿಂಗ ರೆಡ್ಡಿ

 ಖಾಸಗಿ ಸಾರಿಗೆ ಸಂಘಟನೆಗಳ ಜೊತೆ 2 ನೇ ಸುತ್ತಿನ ಸಭೆ: ಸಚಿವ ರಾಮಲಿಂಗ ರೆಡ್ಡಿ
Digiqole Ad

ಖಾಸಗಿ ಸಾರಿಗೆ ಸಂಘಟನೆಗಳ ಜೊತೆ 2 ನೇ ಸುತ್ತಿನ ಸಭೆ ನಡೆಸಲಿರುವ ಸಚಿವ ರಾಮಲಿಂಗ ರೆಡ್ಡಿ

 

ಬೆಂಗಳೂರು: ‘ಶಕ್ತಿ’ ಯೋಜನೆಯಿಂದ ಖಾಸಗಿ ಸಾರಿಗೆ ಸಂಘಟನೆಗಳ ಕುಟುಂಬವು ಸಂಕಷ್ಟಕ್ಕೆ ಒಳಗಾಗಿದ್ದು ಈ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ಕೊಟ್ಟಿದ್ದ ಈ ಸಂಘಟನೆಗಳ ಮನವೊಲಿಸಿ ಹೋರಾಟ ಹಿಂಪಡೆಯುವಂತೆ ಮಾಡುವಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಯಶಸ್ವಿಯಾಗಿದ್ದು ಇದೀಗ ಇಂದು ಎರಡನೇ ಸುತ್ತಿನ ಸಭೆ ನಡೆಸಿ ಬೇಡಿಕೆ ಈಡೇರಿಕೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಇಂದು ಬೆಳಗ್ಗೆ ಶಾಂತಿನಗರದಲ್ಲಿನ ಸಾರಿಗೆ ಆಯುಕ್ತರ ಕಚೇರಿಯಲ್ಲಿ 11 ರಿಂದ 12 ಗಂಟೆವರೆಗೆ ಆಟೋರಿಕ್ಷಾ ವಾಹನಗಳ ಸಂಘದ ಜೊತೆ 12 ರಿಂದ 1 ಗಂಟೆಯವರೆಗೆ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಹಾಗೂ 1ರಿಂದ 2 ಗಂಟೆಯವರೆಗೆ ಖಾಸಗಿ ಬಸ್ ಸಂಸ್ಥೆಗಳ ಜೊತೆ ಸಭೆ ನಿಗದಿಯಾಗಿದ್ದು ಒಟ್ಟು 43 ಸಂಘಟನೆಗಳ ಮುಖಂಡರಿಗೆ ಆಹ್ವಾನಿಸಲಾಗಿದೆ.

ಸಾರಿಗೆ ಸಂಘಟನೆಗಳ ಮುಖಂಡ ನಟರಾಜ ಶರ್ಮ ಮಾತನಾಡಿದ್ದು ಹಿಂದಿನ ಸಭೆಯಲ್ಲಿ ಸಚಿವರು ಸಂಕಷ್ಟಕ್ಕೆ ಒಳಗಾದ ಚಾಲಕರಿಗೆ ಮಾಸಿಕ 10,000 ಪರಿಹಾರ ಧನ ಹಾಗೂ ಸರ್ಕಾರಿ ಸ್ವಾಮ್ಯದ ಬಸ್ ಸಾರಿಗೆ ಸಂಸ್ಥೆಗಳಂತೆ ಶಕ್ತಿ ಯೋಜನೆಯನ್ನು ಖಾಸಗಿ ಬಸ್ಸು ಸಾರಿಗೆ ಸಂಸ್ಥೆಗಳಿಗೂ ವಿಸ್ತರಿಸುವ ವಿಚಾರ ಮತ್ತು ಟ್ಯಾಕ್ಸಿಗಳ ನೋಂದಣಿ ಶುಲ್ಕವನ್ನು ಕಡಿತಗೊಳಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ತೀರ್ಮಾನಿಸುವುದಾಗಿ ತಿಳಿಸಿದ್ದು ಇಂದು ಅದರ ಕುರಿತು ಚರ್ಚೆ ನಡೆಯಲಿದೆ. ಮುಖ್ಯಮಂತ್ರಿಗಳ ಜೊತೆಗೆ ಶೀಘ್ರ ಸಭೆ ನಡೆಸುವಂತೆ ಆಗ್ರಹಿಸಿ ಉಳಿದ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವಂತೆ ಕೋರಲಾಗುವುದು ಎಂದು ಹೇಳಿದರು.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ