• 8 ಸೆಪ್ಟೆಂಬರ್ 2024

ಚಂದ್ರನ 5ನೇ ಮತ್ತು ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಚಂದ್ರಯಾನ-3

Digiqole Ad

 

ಚಂದ್ರನ 5ನೇ  ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಚಂದ್ರಯಾನ-3

ಬುಧವಾರ ಚಂದ್ರನ ಐದನೇ ಅಂತಿಮ ಕಕ್ಷೆಗೆ ಪರಿಚಲನೆ ಪೂರ್ಣಗೊಳಿಸಿದೆ. ಈ ಮೂಲಕ ಚಂದ್ರನ ಇನ್ನಷ್ಟು ಸನಿಹಕ್ಕೆ ನೌಕೆ ತಲುಪಿದೆ.ಇಂದು ಯಶಸ್ವಿ ಫೈರಿಂಗ್‌ ಮೂಲಕ ಚಂದ್ರಯಾನ-3ನ್ನು 153 km x 163 km ಕಕ್ಷೆಗೆ ತಲುಪಿಸಲಾಗಿದೆ. ಈ ಮೂಲಕ ಚಂದ್ರಯಾನವನ್ನು ಚಂದ್ರನ ಕಕ್ಷೆಗೆ ಪರಿಚಲನೆಗೊಳಿಸುವಂತಹ ಪ್ರಕ್ರಿಯೆ ಪೂರ್ಣಗೊಂಡಿದೆ.ಈ ಮೂಲಕ ಬಾಹ್ಯಾಕಾಶ ನೌಕೆಯು ಚಂದ್ರನ ಸುತ್ತ ಸುತ್ತುತ್ತ ಹತ್ತಿರ ತಲುಪುವ ಕಕ್ಷೆಯ ಪರಿಚಲನೆ ಕಾರ್ಯ ಪೂರ್ಣಗೊಳಿಸಿದೆ.ಇನ್ನು ಮುಂದೆ ಅದು ಪ್ರಪಲ್ಷನ್ ಮಾಡ್ಯೂಲ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳಿಸುವ ಹಂತಕ್ಕೆ ಸಿದ್ಧವಾಗಲಿದ ಎಂದು ಇಸ್ರೋ ತಿಳಿಸಿದೆ.

ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲ್ಮೈ ಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜಿಸಲಾಗಿದೆ.ಇದು ಅತ್ಯಂತ ಪ್ರಮುಖವಾದ ಹಂತವಾಗಿರಲಿದೆ ಎಂದರು.

 

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ