• 8 ಸೆಪ್ಟೆಂಬರ್ 2024

ಮೀಮ್ಸ್ ಮೂಲಕ ಜನರನ್ನು ಸೆಳೆದ ನಾಯಿ ಇನ್ನಿಲ್ಲ!

Digiqole Ad

ಮೀಮ್ಸ್ ಮೂಲಕ ಜನರನ್ನು ಸೆಳೆದ ನಾಯಿ ಇನ್ನಿಲ್ಲ!

ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಮೂಲಕ ನೆಟ್ಟಿಗರನ್ನು ಸೆಳೆದಿದ್ದ ಚೀಮ್ಸ್ ಹೆಸರಿನ ನಾಯಿ ಸಾವನಪ್ಪಿದೆ.ಚೀಮ್ಸ್ ಎನ್ನುವ ದುಂಡು ಮುಖದ ನಾಯಿ ಸಾವಿರಾರು ಮೀಮ್ಸ್ ಗಳಲ್ಲಿ ಮಿಂಚಿತ್ತು.2017 ರಲ್ಲಿ ಮೀಮ್ಸ್ ವೊಂದರ ಮೂಲಕ ಖ್ಯಾತಿ ಆಗಿ ‘ಚೀಮ್ಸ್’ ಎಂದೇ ಪರಿಚಿತವಾಗಿತ್ತು‌.

ಚೀಮ್ಸ್ ಇಂಟರ್ ನೆಟ್ ನಲ್ಲಿ ಬಹುಬೇಗನೆ ಜನಪ್ರಿಯವಾಗಿತ್ತು. ಕೋವಿಡ್ ಸಮಯದಲ್ಲಿ ಈ ನಾಯಿಯ ಮೀಮ್ಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ‌ಶುಕ್ರವಾರ ನಾಯಿಯನ್ನು ಕಿಮೋಥೆರಪಿಗೆ ಒಳಪಡಿಸಲು ನಾವು ನಿರ್ಧರಿಸಿದ್ದೆವು. ಆದರೆ ಆಗಾಗಲೇ ತುಂಬಾ ತಡವಾಗಿತ್ತು ಎಂದು ತಿಳಿಸಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚೀಮ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭ ಮಲಗಿದ್ದು, ಬಳಿಕ ಅದು ಎದ್ದೇಳಲೇ ಇಲ್ಲ ಎಂದು ಮಾಲೀಕರು ತಿಳಿಸಿದ್ದಾರೆ.ಚೀಮ್ಸ್ ಅನಾರೋಗ್ಯಕ್ಕೊಳಗಾದಾಗ ಅದಕ್ಕೆ ಚಿಕಿತ್ಸೆ ನೀಡಿದ ವೆಟ್ಸ್ ಮಾಲೀಕರಿಗೆ ಧನ್ಯವಾದ ಹೇಳಿದ್ದಾರೆ. ಚೀಮ್ಸ್ ಚಿಕಿತ್ಸೆಗಾಗಿ ಸಂಗ್ರಹಿಸಲಾಗಿದ್ದ ಹಣವನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.ಎಲ್ಲಿಯವರೆಗೆ ಅಂದರೆ ದೇಶ – ವಿದೇಶಗಳಲ್ಲಿ ಚೀಮ್ಸ್ ಮೀಮ್ಸ್ ಗಳು ಇಂದಿಗೂ ಬಳಕೆಯಾಗುತ್ತದೆ.

ಕಳೆದ ಕೆಲ ಸಮಯದಿಂದ ಚೀಮ್ಸ್ ಗೆ ಕ್ಯಾನ್ಸರ್ ಕಾಡಿತ್ತು. ಇದನ್ನು ಅದರ ಮಾಲೀಕ ಕ್ಯಾಥಿ ಅವರು ಹೇಳಿದ್ದರು.ಚೀಮ್ಸ್ ನಾಯಿಯ ಮಾಲೀಕರು ತಮ್ಮ Instagram ಪುಟದಲ್ಲಿ ಅದರ ಸಾವಿನ ದುಃಖದ ಸುದ್ದಿಯನ್ನು ತಿಳಿಸಿದ್ದಾರೆ. ಕೊನೆಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿತು ಎಂದರು.

 

 

 

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ