• 8 ಸೆಪ್ಟೆಂಬರ್ 2024

ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

Digiqole Ad

ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

ಚಂದ್ರಯಾನ-3 ರ ಯಶಸ್ಸಿನ ಬೆನ್ನಲ್ಲೇ ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವದ ಸಾಧನೆ ಮಾಡಿದೆ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಇವತ್ತು ಉಡಾವಣೆ ಮಾಡಲಾಗಿದೆ.ಬೆಳಿಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡ್ಡಯನಗೊಳ್ಳಲಿರುವ ಪಿಎಸ್ಎಲ್‌ವಿ-ಸಿ57 ರಾಕೇಟ್ ಆದಿತ್ಯ-ಎಲ್1 ಅನ್ನು ಲಗ್ರಾಂಜಿಯನ್ ಬಿಂದುವಿಗೆ ಸೇರಿಸಲಿದೆ.

ಸುಮಾರು 1400 ಕೋಟಿ ವೆಚ್ಚದ ಈ ಯೋಜನೆ ಚಂದ್ರಯಾನ-3ರ ನಂತರದ ಅತಿ ದೊಡ್ಡ ಯೋಜನೆಯಾಗಿದೆ.ಆದಿತ್ಯ- ಎಲ್‌1 ನೌಕೆಯನ್ನು ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಮೂಲಕ ಭೂಮಿಯಿಂದ ಹಾರಿಸಲಾಗುತ್ತದೆ. ಸೂರ್ಯ ಹಾಗೂ ಭೂಮಿಯ ನಡುವೆ 15 ಕೋಟಿ ಕಿ.ಮೀ. ಅಂತರವಿದೆ. ಆದರೆ 15 ಲಕ್ಷ ಕಿ.ಮೀ ದೂರವಿರುವ ‘ಎಲ್‌1’ ಪಾಯಿಂಟ್‌ನಲ್ಲಿ ನೌಕೆಯನ್ನು ಇರಿಸಲಾಗುತ್ತದೆ. ಅಲ್ಲಿಗೆ ತಲುಪಲು ಸುಮಾರು 4 ತಿಂಗಳು (125 ದಿನ) ಬೇಕಾಗುತ್ತದೆ. ಕಕ್ಷೆ ಸೇರಿದ ನಂತರ ದಿನಕ್ಕೆ 1440 ಚಿತ್ರಗಳನ್ನು ಅದು ಕಳಿಸಲಿದೆ.

ಇನ್ನು 125 ದಿನಗಳ ಪ್ರಯಾಣದ ಬಳಿಕ ಆದಿತ್ಯ ಎಲ್1 ನೌಕೆ ತನ್ನ ನಿಗದಿತ ಗಮ್ಯಸ್ಥಾನವಾದ ಭೂಮಿ ಹಾಗೂ ಸೂರ್ಯನ ನಡುವಿನ ಎಲ್ 1ಅನ್ನು ತಲುಪಲಿದೆ. ಅದಕ್ಕೂ ಮುನ್ನ ಆದಿತ್ಯ ಎಲ್1 ಭೂಮಿಯ ಸುತ್ತ 16 ದಿನಗಳ ಕಾಲ ಸಂಚರಿಸಲಿದ್ದು, 5 ಕಕ್ಷೆ ಏರಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ.ಆದಿತ್ಯ ಎಲ್1 ನೌಕೆ, ಒಟ್ಟು 7 ವೈಜ್ಞಾನಿಕ ಉಪಕರಣಗಳನ್ನ ಹೊತ್ತು ಸೂರ್ಯಶೋಧಕ್ಕೆ ಹೊರಡುತ್ತಿದೆ. ಇದರಲ್ಲಿ ಮೂರು ಉಪಕರಣಗಳು ಸೂರ್ಯನನ್ನು ನೋಡುತ್ತಾ ವಿವಿಧ ಭಾಗಗಳ ಅಧ್ಯಯನ ಮಾಡುತ್ತೆ.

ಉಳಿದ ಮೂರು ಉಪಕರಣಗಳು, ಸೂರ್ಯನಿಂದ ಬರುವ ವಿಕಿರಣ ಮತ್ತು ವಸ್ತುಗಳನ್ನು ಅಳತೆ ಮಾಡುವ ಕೆಲಸ ಮಾಡುತ್ತೆ. ವಿಶೇಷ ಅಂದ್ರೆ ಆದಿತ್ಯ ಎಲ್‌1ನಲ್ಲಿರುವ ಉಪಕರಣಗಳು ಎಲ್‌1 ಪಾಯಿಂಟ್‌ನಲ್ಲೇ ಸುತ್ತುತ್ತಾ ಕೃತಕ ಗ್ರಹಣ ಕೂಡ ಸೃಷ್ಟಿಸಬಲ್ಲವು. ಭಾರತದ ಮೊಟ್ಟಮೊದಲ ಸೂರ್ಯಯಾನದ ಪಿಎಸ್ಎಲ್‌ವಿ-57 ರಾಕೆಟ್ ಉಡಾವಣೆ ಯಶಸ್ವಿಯಾಗಿದೆ.ಸುಮಾರು 125 ದಿನಗಳ ಕಾಲ 15 ಲಕ್ಷ ಕಿ.ಮೀ ಪ್ರಯಾಣಿಸಲಿರುವ ನೌಕ ಲ್ಯಾಂಗ್ರೇಜ್ ಪಾಯಿಂಟ್ 1ರಲ್ಲಿ ಲ್ಯಾಂಡ್ ಆಗಲಿದೆ. ಆ ಬಳಿಕ 5 ವರ್ಷಗಳ ಕಾಲ ಸೂರ್ಯನ ಬಗ್ಗೆ ಮಾಹಿತಿ ಕಲೆ ಹಾಕಿ ಇಸ್ರೋಗೆ ರವಾನಿಸಲಿದೆ

 

 

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ