ಇಂಡಿಯಾವನ್ನು ಭಾರತ ಎಂದು ಬದಲಾಯಿಸಲು ಮನವಿ ಬಂದರೆ ಪರಿಗಣಿಸುತ್ತೇವೆ: ವಿಶ್ವಸಂಸ್ಥೆ
ಇಂಡಿಯಾವನ್ನು ಭಾರತ ಎಂದು ಬದಲಾಯಿಸಲು ಮನವಿ ಬಂದರೆ ಪರಿಗಣಿಸುತ್ತೇವೆ: ವಿಶ್ವಸಂಸ್ಥೆ
ಇಂಡಿಯಾವನ್ನು ಭಾರತ ಬದಲಾವಣೆಗೆ ಮನವಿ ಬಂದರೆ ಅದನ್ನು ಪರಿಗಣಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.ಇಂಡಿಯಾ’ ಹೆಸರನ್ನು ಬದಲಿಸಿ ‘ಭಾರತ’ ಎಂದು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಚರ್ಚೆಯ ಮಧ್ಯೆ, ತಮಗೆ ಅಂತಹ ಯಾವುದೇ ಪ್ರಸ್ತಾಪಗಳು ಬಂದಾಗ ಅದನ್ನು ಹಾಗೆಯೇ ಪರಿಗಣಿಸುತ್ತೇವೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಹೆಸರು ಬದಲಾವಣೆ ಮಾಡುವುದು ಕೇವಲ ವದಂತಿ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಕುರಿತು ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್, ಕಳೆದ ವರ್ಷ ಟರ್ಕಿ ತನ್ನ ಹೆಸರನ್ನು ಟರ್ಕಿಯೆ ಎಂದು ಬದಲಾಯಿಸಿತು. ಅಂತಹ ಮನವಿಗಳನ್ನು ಖಂಡಿತವಾಗಿಯೂ ಪರಿಗಣಿಸುತ್ತೇವೆ ಎಂದಿದ್ದಾರೆ.
ಭಾರತ- ಇಂಡಿಯಾ ವಿವಾದವನ್ನು ತಪ್ಪಿಸುವಂತೆ ಪ್ರಧಾನಿ ಮೋದಿ ಬುಧವಾರ ತಮ್ಮ ಸಚಿವ ಸಹೋದ್ಯೋಗಿಗಳಿಗೆ ತಿಳಿಸಿದ್ದು, ಅಧಿಕೃತ ವಕ್ತಾರರು ಮಾತ್ರ ಈ ಬಗ್ಗೆ ಮಾತನಾಡಬೇಕು ಎಂದು ಸೂಚಿಸಿದ್ದಾರೆ. ಅಲ್ಲದೇ, ಜಿ 20 ಶೃಂಗಸಭೆ ವೇಳೆಯಲ್ಲಿ ಯಾವ ವಿಷಯ ಪ್ರಸ್ತಾಪಿಸಬೇಕು, ಯಾವುದನ್ನು ಪ್ರಸ್ತಾಪಿಸಬಾರದು ಎಂಬ ಸಲಹೆಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿದೆ .
ಇಂಡಿಯಾ ಹೆಸರನ್ನು ಭಾರತ ಎಂದು ಅಧಿಕೃತವಾಗಿ ಬದಲಾಯಿಸುವ ಸಲುವಾಗಿ ಕೇಂದ್ರ ವಿಶೇಷ ಅಧಿವೇಶನ ಕರೆದಿದೆ ಎಂಬ ಚರ್ಚೆ ದೇಶವ್ಯಾಪಿಯಾಗಿ ನಡೆಯುತ್ತಿದೆ. ಇದಕ್ಕೆ ಪರ ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಜಿ 20 ಔತಣಕೂಟದ ಆಮಂತ್ರಣ ಪತ್ರಿಕೆಯಲ್ಲೂ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಬರೆದಿರುವುದು ಚರ್ಚೆಯನ್ನು ಉಂಟುಮಾಡಿದೆ.