• 22 ನವೆಂಬರ್ 2024

ಆಫ್ರಿಕನ್ ಯೂನಿಯನ್‌ಗೆ ಜಿ20 ಕಾಯಂ ಸದಸ್ಯತ್ವ: ಮೋದಿ ಘೋಷಣೆ

Digiqole Ad

ಆಫ್ರಿಕನ್ ಯೂನಿಯನ್‌ಗೆ ಜಿ20 ಕಾಯಂ ಸದಸ್ಯತ್ವ: ಮೋದಿ ಘೋಷಣೆ

55 ರಾಷ್ಟ್ರಗಳನ್ನು ಒಳಗೊಂಡಿರುವ ಆಫ್ರಿಕನ್ ಒಕ್ಕೂಟವನ್ನು ಜಿ20 ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಆಫ್ರಿಕನ್ ಯೂನಿಯನ್‍ಗೆ ಸದಸ್ಯತ್ವ ನೀಡಲು ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಆದರೆ ಮುಂದಿನ ವರ್ಷ ಬ್ರೆಝಿಲ್ ಜಿ20 ಅಧ್ಯಕ್ಷತೆ ವಹಿಸಿದ ಬಳಿಕವಷ್ಟೇ ಸದಸ್ಯತ್ವ ಅಧಿಕೃತಗೊಳ್ಳಲಿದೆ ಎಂದು ಭಾರತದ ಮೂಲಗಳನ್ನು ಉಲ್ಲೇಖಿಸಿ `ರಾಯ್ಟರ್ಸ್’ ವರದಿ ಮಾಡಿದೆ.
ಆಫ್ರಿಕನ್ ಯೂನಿಯನ್‍ಗೆ ಪೂರ್ಣ ಪ್ರಮಾಣದ ಮತ್ತು ಕಾಯಂ ಸದಸ್ಯತ್ವ ನೀಡುವ ಪ್ರಸ್ತಾವನೆಯನ್ನು ಜೂನ್‍ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜಿ20 ಸಭೆಯಲ್ಲಿ ಮಂಡಿಸಿದ್ದರು. ಜಿ20 ಒಕ್ಕೂಟದಲ್ಲಿ ಈಗ 19 ದೇಶಗಳು ಹಾಗೂ ಯುರೋಪಿಯನ್ ಯೂನಿಯನ್ ಸದಸ್ಯರಾಗಿವೆ. ಆಫ್ರಿಕನ್ ಯೂನಿಯನ್‍ನ ಸದಸ್ಯತ್ವದ ಬಗ್ಗೆ ಹೊಸದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.


ಜಿ 20 ಶೃಂಗಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಪ್ರಧಾನಿ ಮೋದಿ, 1999 ರಲ್ಲಿ ರಚಿಸಿದ 55 ಸದಸ್ಯ ರಾಷ್ಟ್ರಗಳ ಆಫ್ರಿಕನ್ ಒಕ್ಕೂಟಕ್ಕೆ ಜಿ20 ಖಾಯಂ ಸದಸ್ಯತ್ವ ಘೋಷಿಸಿದ್ದಾರೆ. ಸಬ್ಕಾ ಸಾಥ್ (ಎಲ್ಲರೊಂದಿಗೆ) ಭಾವನೆಗೆ ಅನುಗುಣವಾಗಿ, ಆಫ್ರಿಕನ್ ಒಕ್ಕೂಟಕ್ಕೆ ಜಿ20ಯ ಶಾಶ್ವತ ಸದಸ್ಯತ್ವವನ್ನು ನೀಡಬೇಕು ಎಂದು ಭಾರತ ಪ್ರಸ್ತಾಪಿಸಿತ್ತು,ನಾವೆಲ್ಲರೂ ಈ ಪ್ರಸ್ತಾಪವನ್ನು ಒಪ್ಪಿದ್ದೇವೆ ಎಂದು ಹೇಳಿದರು.
ಜಿ20ಯ ಖಾಯಂ ಸದಸ್ಯತ್ವ ಪಡೆದು ತಮ್ಮ ಆಸನವನ್ನು ಅಲಂಕರಿಸಲು ಆಫ್ರಿಕನ್ ಒಕ್ಕೂಟದ ಮುಖ್ಯಸ್ಥರನ್ನು ಮೋದಿ ಆಹ್ವಾನಿಸಿದರು.

 


ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ, ಸಬ್ಕಾ ಪ್ರಯಾಸ್’ ಎಂಬ ಮಂತ್ರವು ನಮಗೆಲ್ಲರಿಗೂ ಮಾರ್ಗದರ್ಶನ ನೀಡುವಇದುವರೆಗೆ ಜಿ20 ಒಕ್ಕೂಟದ ಆಹ್ವಾನಿತ ಅಂತರಾಷ್ಟ್ರೀಯ ಸಂಘಟನೆ ಎಂಬ ಸ್ಥಾನಮಾನ ಹೊಂದಿದ್ದ ಆಫ್ರಿಕನ್ ಯೂನಿಯನ್(ಆಫ್ರಿಕಾ ಖಂಡದ 55 ದೇಶಗಳ ಸಂಘಟನೆ) ಇನ್ನು ಮುಂದೆ ಯುರೋಪಿಯನ್ ಯೂನಿಯನ್‍ನಂತೆಯೇ ಕಾಯಂ ಸದಸ್ಯತ್ವ ಹೊಂದಲಿದೆ ಎಂದು ವರದಿ ಹೇಳಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ