ಕೇರಳದಲ್ಲಿ ನಿಫಾ ಸೋಂಕು ಭೀತಿ: ಆರೋಗ್ಯ ಇಲಾಖೆ ಎಚ್ಚರಿಕೆ
ಕೇರಳದಲ್ಲಿ ನಿಫಾ ಸೋಂಕು ಭೀತಿ: ಆರೋಗ್ಯ ಇಲಾಖೆ ಎಚ್ಚರಿಕೆ
ಸೆಪ್ಟೆಂಬರ್ 12: ನಿಪಾ ವೈರಸ್ (Nipah virus) ಸೋಂಕಿನಿಂದ ಶಂಕಿತ ಎರಡು ಅಸ್ವಾಭಾವಿಕ ಸಾವುಗಳ ನಂತರ ಕೇರಳದ ಆರೋಗ್ಯ ಇಲಾಖೆ ಸೋಮವಾರ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆ ನೀಡಿದೆ.ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಎರಡು ಅಸಹಜ ಸಾವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸಚಿವಾಲಯ ನಿಫಾ ಸೋಂಕು ಭೀತಿಯ ಬಗ್ಗೆ ಎಚ್ಚರಿಕೆ ನೀಡಿದೆ. ಈ ಎರಡುಸಾವುಗಳು ನಿಫಾ ವೈರಸ್ ನಿಂದ ಸಂಭವಿಸಿವೆ ಎಂದು ಶಂಕಿಸಲಾಗಿದ್ದು, ಮೃತರ ಪೈಕಿ ಒಬ್ಬರ ಸಂಬಂಧಿಕರು ಕೂಡಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ನಿಪಾ ವೈರಸ್ ಸೋಂಕು ಪ್ರಾಣಿಗಳಿಂದ ಜನರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ ಮತ್ತು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ಜನರಲ್ಲಿ ಇದು ಲಕ್ಷಣರಹಿತ (ಸಬ್‌ಕ್ಲಿನಿಕಲ್) ಸೋಂಕಿನಿಂದ ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್ವರೆಗೆ ಹಲವಾರು ಕಾಯಿಲೆಗಳನ್ನು ಉಂಟುಮಾಡುತ್ತದೆ.