• 21 ನವೆಂಬರ್ 2024

ಅಪಘಾತ ತಡೆಯಲು ರೈಲುಗಳಲ್ಲಿ AI ಚಾಲಿತ ಸುರಕ್ಷತಾ ಸಾಧನ ‘ಬ್ಲಿಂಕ್ ಡಿಟೆಕ್ಟಿಂಗ್’ ಅಳವಡಿಕೆ

Digiqole Ad

ಅಪಘಾತ ತಡೆಯಲು ರೈಲುಗಳಲ್ಲಿ AI ಚಾಲಿತ ಸುರಕ್ಷತಾ ಸಾಧನ ‘ಬ್ಲಿಂಕ್ ಡಿಟೆಕ್ಟಿಂಗ್’ ಅಳವಡಿಕೆ

ರೈಲುಗಳ ಅಪಘಾತ ಹೆಚ್ಚುತ್ತಿದ್ದು, ಭಾರತೀಯ ರೈಲ್ವೆ ತನ್ನ ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಭಾಗವಾಗಿ, ಕೃತಕ ಬುದ್ಧಿಮತ್ತೆ (AI) ಆಧಾರಿತ “ರೈಲ್ವೆ ಚಾಲಕ ಸಹಾಯ ವ್ಯವಸ್ಥೆ” (RDAS) ಅಥವಾ ಬ್ಲಿಂಕ್ ಡಿಟೆಕ್ಟಿಂಗ್ ಎಂಬ ವಿಶಿಷ್ಟ ಸಾಧನ ಅಳವಡಿಸಲು ಮುಂದಾಗಿದೆ.

ಈಶಾನ್ಯ ಫ್ರಾಂಟಿಯರ್ ರೈಲ್ವೆ(NFR) ತಜ್ಞರ ತಂಡದೊಂದಿಗೆ ಈ ಸಾಧನ ಅಭಿವೃದ್ಧಿಪಡಿಸುತ್ತಿದೆ. ಇದು ಮೇಲ್, ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಲೋಕೋ ಪೈಲಟ್‌ಗಳ ಕಣ್ಣಿನ ಚಲನೆಯ ಮೇಲೆ ಗಮನ ಹರಿಸುತ್ತದೆ. ಬ್ಲಿಂಕ್ ಡಿಟೆಕ್ಷನ್ ಕಣ್ಣು ಮಿಟಿಕಿಸುವ ಆಧಾರದ ಮೇಲೆ ನಿದ್ರೆ ಮಂಪರನ್ನು ಪತ್ತೆ ಹಚ್ಚುತ್ತದೆ. ಒಂದು ವೇಳೆ ರೈಲು ಚಾಲಕ ನಿದ್ರೆ ಮಂಪರಿನಲ್ಲಿ ಇದ್ದರೆ, ಈ ಸಾಧನವು ಶಬ್ದ ಮಾಡುವ ಮೂಲಕ ಆತನನ್ನು ಎಚ್ಚರಿಸುತ್ತದೆ. ಒಂದು ವೇಳೆ ಈ ಸಾಧನ ಮಾಡುವ ಯಾವುದೇ ಶಬ್ದಕ್ಕೆ ಆತ ಪ್ರತಿಕ್ರಿಯೆ ನೀಡದಿದ್ದಾಗ, ಅದು ತನಗೆ ತಾನೇ ಅಲರ್ಟ್ ಆಗಿ ಎಮರ್ಜೆನ್ಸಿ ಬ್ರೇಕ್ ಹಾಕಿ, ಮುಂದಾಗಬಹುದಾದ ಅಪಘಾತವನ್ನು ತಪ್ಪಿಸುತ್ತದೆ.

ರೈಲ್ವೆಯ ಮುಖ್ಯ ವಕ್ತಾರ ಸಬ್ಯಸಾಚಿ ಅವರು, ರೈಲ್ವೆ ಮಂಡಳಿಯಿಂದ ಅದನ್ನು ಅಭಿವೃದ್ಧಿಪಡಿಸಲು ಎನ್‌ಎಫ್‌ಆರ್‌ಗೆ ಕಾರ್ಯಸೂಚಿಯನ್ನು ನೀಡಲಾಗಿದೆ ಮತ್ತು ಅದರ ಕೆಲಸಗಳು ಪ್ರಗತಿಯಲ್ಲಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ತಿಳಿಸಿದೆ.

 

 

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ