• 8 ಸೆಪ್ಟೆಂಬರ್ 2024

ಯೋಧರ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಸೇನಾ ಶ್ವಾನ ಕೆಂಟ್

 ಯೋಧರ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಸೇನಾ ಶ್ವಾನ ಕೆಂಟ್
Digiqole Ad

ಯೋಧರ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಸೇನಾ ಶ್ವಾನ ಕೆಂಟ್

ಜಮ್ಮು-ಕಾಶ್ಮೀರದ ರಜೌರಿಯಲ್ಲಿ ನಿನ್ನೆ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಯೋಧನನ್ನು ಕಾಪಾಡುವ ಸಲುವಾಗಿ ಸೇನೆಯ ಸಾಹಸಿ ಶ್ವಾನ ಕೆಂಟ್‌ ತನ್ನ ಪ್ರಾಣಾರ್ಪಣೆ ಮಾಡಿದೆ. ಸೈನಿಕರೊಂದಿಗೆ ತೆರಳುತ್ತಿದ್ದ ಶ್ವಾನ ಭಾರಿ ಗುಂಡಿನ ದಾಳಿಯ ನಡುವೆ ಸಿಕ್ಕಿಬಿದ್ದಿತ್ತು. ನಾರ್ಲಾ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದೆ.ಮಂಗಳವಾರ, ಆರು ವರ್ಷದ ಲ್ಯಾಬ್ರಡಾರ್ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಸೈನಿಕರ ಗುಂಪನ್ನು ಮುನ್ನಡೆಸುತ್ತಿತ್ತು, ಈ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಕೆಂಟ್ 21 ನೇ ಆರ್ಮಿ ಡಾಗ್ ಯುನಿಟ್‌ನ ಹೆಣ್ಣು ಲ್ಯಾಬ್ರಡಾರ್ ತಳಿಯ ನಾಯಿಯಾಗಿದ್ದು, ತನ್ನ ಹ್ಯಾಂಡ್ಲರ್ ಅನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದೆ.


ಗುಂಡಿನ ಕಾಳಗದಲ್ಲಿ ಮೃತಪಟ್ಟ ಶ್ವಾನ ಕೆಂಟ್‌ಗೆ ಕೇವಲ ಆರು ವರ್ಷ. ಈ ಶ್ವಾನ ಈ ಕಾರ್ಯಾಚರಣೆಯ ಮುಂಚೂಣಿಯಲ್ಲಿತ್ತು. ಪಲಾಯನಗೈಯುತ್ತಿದ್ದ ಉಗ್ರರ ಜಾಡು ಹಿಡಿದು ಬೆನ್ನಟ್ಟಿದ ಈ ಶ್ವಾನ ತನ್ನ ಪಡೆಯನ್ನು ಮುನ್ನಡೆಸುತ್ತಿತ್ತು. ಈ ವೇಳೆ ಭಾರಿ ಗುಂಡಿನ ಕಾಳಗ ನಡೆದಿದ್ದು, ತನ್ನ ನಿರ್ವಾಹಕನನ್ನು ರಕ್ಷಿಸುತ್ತಾ ಕೆಂಟ್ ಪ್ರಾಣ ಬಿಟ್ಟಿದೆ.
ಲ್ಯಾಬ್ರಡಾರ್‌ ತಳಿಯ ಆರು ವರ್ಷದ ಈ ಹೆಣ್ಣು ಶ್ವಾನ ಕೆಂಟ್ 21 ಆರ್ಮಿ ಡಾಗ್ ಯುನಿಟ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ