ಶ್ರೀಕೃಷ್ಣ ಚರಿತೆ |ಕಥಾ ಧಾರಾವಾಹಿ.
ಶ್ರೀಕೃಷ್ಣ ಚರಿತೆ ಕಥಾಧಾರಾವಾಹಿ
ಬರೆದವರು ಕೆ.ವೆಂಕಟರಾಮಪ್ಪ
ಭಾಗ ೨
ಕೃಷ್ಣ ನನ್ನು ಕೊಲ್ಲಿಸಬೇಕೆಂದು ಕಂಸನು ಹಲವಾರು ರಾಕ್ಷಸರನ್ನು ಕಳುಹಿಸಿದನು . ಅಂಥವರಲ್ಲಿ ಪೂತನಿ ಮೊದಲನೆಯವಳು ಶಿಶುಗಳಿಗೆ ಮೃತ್ಯುಸ್ವರೂಪಷಳಾದ ಪೂತನಿಯು ಕಂಸನ ಆಜ್ಞೆಯಂತೆ ಸುಂದರರೂಪವನ್ನು ಧರಿಸಿ ಗೋಕುಲಕ್ಕೆ ಹೋಗಿ ಕೃಷ್ಣನನ್ನು ಕೊಲ್ಲುವಸಲುವಾಗಿ ಅವನಿಗೆ ಸ್ತನ್ಯವನಾನಮಾಡಿಸಿದಳು. ಇವಳ ದುರುದ್ದೇಶ ತಿಳಿದ ಕೃಷ್ಣನು ಸ್ತನ್ಯದೊಡನೆ ಅವಳ ಜೀವವನ್ನೂ ಹೀರಿಬಿಟ್ಟನು | ಅವಳು ಆಗ ತನ್ನ ಮಾಯಾರೂಸನನ್ನು ಕಳೆದು ಕೊಂಡು ತನ್ನ ಎಂದಿನ ಭಯಂಕರ ಬೃಹದಾಕಾರವನ್ನು ತಾಳಿ ಬಿದ್ದು ಬಿಟ್ಟಳು, ಇದು ಪೂತನಿಯ ಪುರಾಣ ಕಥೆ.
ಪೂತನಾ ಎಂಬುದು ಎಳೆಯ ಮಕ್ಕಳಿಗೆ ಬರಬಹುದಾದ ಒಂದು ರೋಗಕ್ಕೆ ಹೆಸರು. ಆ ರೋಗದ ಸ್ವರೂಸನನ್ನೂ ಅದಕ್ಕೆ ಮಾಡಬೇಕಾದ ಚಿಕಿತ್ಸೆಯನ್ನೂ ಶುಶ್ರುತದಲ್ಲಿ ವಿಸ್ತಾರವಾಗಿ ಹೇಳಿದೆ. ಬಹುಶಃ ಕೃಷ್ಣನು ಎಳೆಯ ಮಗುವಾಗಿದ್ದಾಗ ಈ ರೋಗವು ಬಂದು ವಾಸಿಯಾಗಿದ್ದಿರ ಬಹುದು. ಅದನ್ನೇ ಕವಿಗಳು ತಮ್ಮ ಪ್ರತಿಭೆಗೆ ತಕ್ಕಂತೆ ಬೆಳೆಸಿ ಹೇಳಿರ ಬಹುದು. ಮಹಾ ಭಾರತದಲ್ಲಿ ಪೂತನಿಯ ಕೊಲೆಯ ಪ್ರಸಂಗದ ಸೂಚನೆಯಿದೆ. ಶಿಶುಪಾಲನು ಕೃಷ್ಣನನ್ನು ಹೀಯಾಳಿಸುವಾಗ ಪೂತ ನಿಯ ಕೊಲೆಯ ಕಥೆಯನ್ನೇ ಉದ್ದೇಶಿಸಿ ” ಶಕುನಿ? ಯ ಕೊಲೆಮಾಡಿದವ ನೆಂದು ನುಡಿದಿದ್ದಾನೆ. ಶಕುನಿಯೆಂದರೆ ಹಕ್ಕಿ, ಬಲಶಾಲಿಯಾದ ಮಗುವು ಹಕ್ಕಿಯೊಂದನ್ನು ಕೊಲ್ಲುವುದರಲ್ಲಿ ಅಗಾಧನೇನೂ ಇಲ್ಲ.
ಮಹಾ ಭಾರತದಲ್ಲಿ ” ಹಕ್ಕಿ? ಮಾತ್ರವಾಗಿರುವ ಪೂತನಿಯುವಿಷ್ಣುಪುರಾಣದಲ್ಲಿ ಬಾಲಘಾತಿನಿಯಾದ ಹೆಂಗಸು,ಹೆರಿವಂಶದಲ್ಲಿ, ಮಹಾಭಾರತ ಮತ್ತು ವಿಷ್ಣು ಪುರಾಣಗಳ ಕಥೆಗಳೆರಡೂ ಸೇರಿದ ಹಾಗೆ ತೋರುತ್ತದೆ. ಅದರಲ್ಲಿ ಪೂತನಿಯು “ಕಂಸಧಾತ್ರಿ.’ ಕಾಮರೂಪೀಣಿ ಯಾದ ಆ ಹೆಂಗಸು ಗೋಕುಲಕ್ಕೆ ಹಕ್ಕಿಯ ರೂಪದಲ್ಲಿ ಹೋಗುತ್ತಾಳೆ! ಬ್ರಹ್ಮವೈವರ್ತ ಪುರಾಣವು ಪೂತನಿಯು “ಕಂಸನ ಭಗಿನಿ? ಯೆಂದೂ ಅವಳು ಮಧುರೆಯಿಂದ ಬ್ರಾಹ್ಮಣ ಸ್ತ್ರೀಯ ವೇಷ ಧರಿಸಿ ಗೋಕುಲಕ್ಕೆ ಹೋದಳೆಂದೂ ಹೇಳುತ್ತದೆ. ಭಾಗವತದಲ್ಲಿ ಪೂತನಿಯು ಧಥಾತ್ರಿಯೂ ಅಲ್ಲ, ಕಂಸಭಗಿನಿಯೂಅಲ್ಲ… ಅವಳು ಶಿಶುಗಳಿಗೆ ಮೃತ್ಯು ಸ್ವರೂಪಳಾದ ಕರಾಳರಕ್ಕಸಿ. ಅವಳು ಕೃಷ್ಣನಿಗೆ ಸ್ತನ್ಯಪಾನ ಮಾಡಿಸಿ ಸತ್ತು ಬಿದ್ದಾಗ ಆದ ಅನರ್ಥ ವನ್ನು ಗಮನಿಸಿ
ದುಷ್ಟರಕ್ಕಸಿ ಯೊಡಲು ಬೀಳುತ
ನೆಟ್ಟಿ ನೊಂದರೆಗಾವುದಂತರ
ನಿಟ್ಟಿಡೆಯ ಗಿಡಬಳ್ಳಿ ಮರಗಳನೊರಸಿ ನನದೊಳಗೆ
ಹುಚ್ಚಿ ದನಿತುವನೆಲ್ಲವನು ಹುಡಿ
ಗುಟ್ಟೆ ಬಿದ್ದುದು ಭೂಪ ವಜ್ರದ
ಲಿಟ್ಟು ಕೆಡಹಿದ ವೃತ್ರನೊಡಲೀಧರೆಗೆ ಬೀಳ್ವಂತೆ ಕೊನೆಗೆ ಅವಳ ಶವವನ್ನು ಅಖಂಡವಾಗಿ ಸಾಗಿಸಲು ಸಾಧ್ಯವಾಗದೆ ಅದನ್ನು ಕಡಿಕಡಿದು ಬಂಡಿಗಳಲ್ಲಿ ತುಂಬಿ ಸಾಗಿಸಬೇಕಾಯಿತು! ಆ ಶವ ದಹನಕ್ಕೋಸ್ಯರ ಸುತ್ತಮುತ್ತಲಿನ ಕಾಡನ್ನೆಲ್ಲ ಕತ್ತರಿಸಿ ಒಟ್ಟಿ ಬೇಕಾಯಿತು. ದಟ್ಟವಾದ ಕಾಡೆಲ್ಲ ಬಯಲಾಗಲು ದನಗಳಿಗೆ ಮೇವು ಸಿಕ್ಕದೆ ಗೋಪರು ತನ್ಮು ವಾಸಕ್ಕೆ ಬೇರೊಂದು ಪ್ರದೇಶವನ್ನು ಹುಡುಕಿಕೊಳ್ಳ ಬೇಕಾಯಿತು | ಅಂತು, ಎಳೆಯ ಮಕ್ಕಳಿಗೆ ಸಾಮಾನ್ಯವಾಗಿ ಬರಬಹುದಾದ ಒಂದು ರೋಗವು ಕ್ರಮಕ್ರಮವಾಗಿ ಬೆಳೆದು ನಮ್ಮ ಭಾಗವತಕಾರನ ಕೈಯಲ್ಲಿ ದೊಡ್ಡ ರಕ್ಕಸಿಯಾಗಿಬಿಟ್ಟಿ ದೆ,
ಮಹಾವಿಷ್ಣುವಿನ ” ದಾಮೋದರ? ಎಂಬ ಹೆಸರನ್ನು ಮನಸ್ಸಿನಲ್ಲಿಟ್ಟುಕೊಂಡು ಭಾಗವತದಲ್ಲಿ ಒಂದು ಕಥೆ ಸೃಷ್ಟಿಯಾಗಿದೆ. (ಮುಂದುವರಿಯುವುದು…)