ಉಜ್ವಲಾ ಯೋಜನೆಯಡಿ ದೇಶಾದ್ಯಂತ 75 ಲಕ್ಷ ಉಚಿತ ಎಲ್ಪಿಜಿ ಸಂಪರ್ಕ: ಕೇಂದ್ರ ಸಚಿವ ಸಂಪುಟ ಅನುಮೋದನೆ
ಉಜ್ವಲಾ ಯೋಜನೆಯಡಿ ದೇಶಾದ್ಯಂತ 75 ಲಕ್ಷ ಉಚಿತ ಎಲ್ಪಿಜಿ ಸಂಪರ್ಕ: ಕೇಂದ್ರ ಸಚಿವ ಸಂಪುಟ ಅನುಮೋದನೆ
ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 75 ಲಕ್ಷ ಹೊಸ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವ ಯೋಜನೆಗೆ ತೈಲ ಮಾರುಕಟ್ಟೆ ಕಂಪನಿಗಳಿಗೆ 1,650 ಕೋಟಿ ರೂಪಾಯಿ ಅನುದಾನ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಇಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಯೋಜನೆಯಡಿ ಇಂದಿನವರೆಗೆ 9.60 ಕೋಟಿ ಎಲ್ಪಿಜಿ ಸಿಲಿಂಡರ್ಗಳನ್ನು ವಿತರಿಸಲಾಗಿದೆ. ಇನ್ನೂ 75 ಲಕ್ಷ ಉಚಿತ ಎಲ್ಪಿಜಿ ಸಂಪರ್ಕಗಳನ್ನು ನೀಡಲಾಗುವುದು ಎಂದು ಸಂಪುಟ ಸಭೆಯ ಬಳಿಕ ಸಚಿವ ಅನುರಾಗ್ ಠಾಕೂರ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
75 ಲಕ್ಷ ಹೊಸ ಉಚಿತ ಎಲ್ಪಿಜಿ ಸಂರ್ಪಕಕ್ಕೆ 1650 ಕೋಟಿ ನಿಗದಿ
ಉಜ್ವಲಾ ಯೋಜನೆಯಡಿ ಬಿಪಿಎಲ್ ವರ್ಗದ ಜನರಿಗೆ ಮುಂದಿನ 3 ವರ್ಷದಲ್ಲಿ ಹೊಸದಾಗಿ 75 ಲಕ್ಷ ಉಚಿತ ಎಲ್ಪಿಜಿ ಸಂಪರ್ಕ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಇದಕ್ಕಾಗಿ 1650 ಕೋಟಿ ರು. ನಿಗದಿ ಪಡಿಸಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಸಿಲಿಂಡರ್, ಉಚಿತ ಸ್ಟೌವ್ ಮತ್ತು ಮೊದಲ ಬಾರಿಗೆ ಗ್ಯಾಸ್ ಅನ್ನು ಉಚಿತವಾಗಿ ತುಂಬಿಸಿ ಕೊಡಲಾಗುವುದು ಎಂದು ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.