ನಿಫಾ ಭೀತಿ ಕರ್ನಾಟಕ ಸರಕಾರ ಹೊಸ ಗೈಡ್‌ಲೈನ್ಸ್ ಜಾರಿ!
ಕೊರೊನಾ ರೀತಿಯಲ್ಲೇ ಕರ್ನಾಟಕ ಸರಕಾರ ಹೊಸ ಗೈಡ್‌ಲೈನ್ಸ್ ಜಾರಿ
• ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ, ತಪಾಸಣೆಗಾಗಿ ಚೆಕ್ ಪೋಸ್ಟ್ ಸ್ಥಾಪನೆ.
• ನಿಫಾ ವೈರಸ್ ಶಂಕಿತ ರೋಗಿಗಳನ್ನು ಕ್ವಾರಂಟೈನ್ ಮಾಡಲು ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 2 ಬೆಡ್ ಕಾಯ್ದಿರಿಸುವುದು. ಸಾರ್ವಜನಿಕರು ಹಾಗೂ ಆರೋಗ್ಯ ಸಿಬ್ಬಂದಿ ಕೇರಳಕ್ಕೆ ಅನಗತ್ಯ ಪ್ರಯಾಣ ಮಾಡದಿರುವುದು
- ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಜನರಲ್ಲಿ ಅನಗತ್ಯ ಭಯ ತಪ್ಪಿಸುವುದು
• ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಆರೋಗ್ಯ ಸಿಬ್ಬಂದಿಗೆ ತಪಾಸಣೆ ಕುರಿತು ತರಬೇತಿ ನೀಡುವುದು
ಕಟ್ಟೆಚ್ಚರ!
ಈಗಾಗಲೇ ಕೇರಳ ರಾಜ್ಯದಲ್ಲಿ 6 ಮಂದಿ ನಿಫಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ಇಬ್ಬರು ಸೋಂಕಿತರು ಈಗಾಗಲೇ ಸಾವನ್ನಪ್ಪಿದ್ದಾರೆ. ಕೇರಳದ ಹಲವು ಗ್ರಾಮಗಳನ್ನು ಕಂಟೈನ್‌ಮೆಂಟ್ ವಲಯ ಅಂತಾ ಘೋಷಣೆ ಮಾಡಲಾಗಿದೆ. ಕೋವಿಡ್ ಕಾಲದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡ ರೀತಿಯಲ್ಲೇ ಕೇರಳದಲ್ಲಿ ಹಲವು ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಕೂಡಾ ಕಟ್ಟೆಚ್ಚರ ವಹಿಸಿದೆ. ಕರ್ನಾಟಕ ರಾಜ್ಯದ 4 ಜಿಲ್ಲೆಗಳು ಕೇರಳ ರಾಜ್ಯದ ಗಡಿಯಲ್ಲಿವೆ. ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳು ಕೇರಳ ರಾಜ್ಯದ ಗಡಿ ಹಂಚಿಕೊಂಡಿದ್ದು, ಜನರ ಓಡಾಟ ಹೆಚ್ಚಾಗಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಜನ ಸಾಮಾನ್ಯರು ಅನಗತ್ಯವಾಗಿ ಕೇರಳಕ್ಕೆ ಹೋಗಬೇಡಿ ಅಂತಾ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಕೇರಳದಿಂದ ಬರುವ ಜನರ ತಪಾಸಣೆ ಕೂಡಾ ನಡೀತಿದೆ. ಸೋಂಕು ತಗುಲಿರುವ ಶಂಕೆ ಕಂಡು ಬಂದ ಕೂಡಲೇ, ಅಂಥವರನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆ ಯಾವುದೇ ಕಾರಣಕ್ಕೂ ನಿಫಾ ಸೋಂಕು ನಮ್ಮ ರಾಜ್ಯಕ್ಕೆ ಹರಡದಂತೆ ನೋಡಿಕೊಳ್ಳಲು ಭಾರೀ ಕಟ್ಟೆಚ್ಚರ ವಹಿಸಿದೆ. ಈ ವಿಚಾರದಲ್ಲಿ ನಾವೆಲ್ಲರೂ ಮುನ್ನೆಚ್ಚರಿಕೆ ವಹಿಸಲೇಬೇಕಿದೆ.