ಶ್ರೀಕೃಷ್ಣ ಚರಿತೆ | ಕಥಾ ಧಾರಾವಾಹಿ| ಭಾಗ ೪
ಶ್ರೀಕೃಷ್ಣ ಚರಿತೆ | ಕಥಾ ಧಾರಾವಾಹಿ
ಬರೆದವರು: ಕೆ.ವೆಂಕಟರಾಮಪ್ಪ
ಭಾಗ ೪
ಅದೇ ಯಾದವರ ಹೊಸ ರಾಜಧಾನಿ ಯಾಯಿತು.
ಅನಂತರ ಕೃಷ್ಣನು ಪಾಂಡವರ ಸ್ನೇಹಿತನಾಗಿ ಅವರಿಗೆ ಹಲವು ವಿಧಗಳಲ್ಲಿ ಸಹಾಯಮಾಡುತ್ತಾನೆ; ಅವರ ಸಹಾಯದಿಂದ ತನ್ನ ಪರಮ ಶತ್ರುವಾದ ಜರಾಸಂಧನನ್ನು ನಿಗ್ರಹಿಸುತ್ತಾನೆ. ಧರ್ಮರಾಯನ ರಾಜ ಸೂಯಯಾಗದ ಸಂದರ್ಭದಲ್ಲಿ ಶಿಶುವಾಲನನ್ನು ತಾನೇ ಕೊಲ್ಲತ್ತಾನೆ. ಹೀಗೆ ಹಲನರು ರಾಕ್ಷಸರನ್ನು ಕೊಂದು ದಾನನಾಂತಕನೆಂಬ ಕೀರ್ತಿಯನ್ನು ಪಡೆದು ಧರ್ಮ ಸಂರಕ್ಷಣೆ ಮಾಡುತ್ತ ದ್ವಾರಕಿಯಲ್ಲಿ ನೂರಿಪ್ಪತ್ತೈದು ವರ್ಷ ಬಾಳುತ್ತಾನೆ… ಅನಂತರ ಯಾದವರ ಅಂತಃಕಲಹವನ್ನೂ ಕಡೆಗೆ ದ್ವಾರಕೆಯ ನಿನಾಶನನ್ನೂ ನೋಡುತ್ತಾನೆ. ಕಡೆಯಲ್ಲಿ ಜರಸ್ ಎಂಬ ಬೇಟಿಗಾರನು ಕೃಷ್ಣನು ವನದಲ್ಲಿ ಮಲಗಿದ್ದಾಗ ಬಣ್ಣದ ಜಿಂಕೆಯೆಂದು ಭ್ರಾಂತಿಪಟ್ಟು ಅವನ ಕಾಲಿಗೆ ಗುರಿಯಿಟ್ಟು ಬಾಣ ಹೊಡೆದುಕೊಲ್ಲುತ್ತಾನೆ. “ಜರೆ? (ಮುದಿತನ) ಯಿಂದ ಸತ್ತನೆಂದು ಹೇಳುವ ಬದಲು ಇಲ್ಲಿ ಆ ಹೆಸರಿನ ಬೇಟಿಗಾರನೊಬ್ಬನನ್ನು ಕಲ್ಪಿಸಿದಂತೆ ತೋರುತ್ತದೆ.
ಇದು ಪುರಾಣ ಮತ್ತು ಮಹಾಭಾರತಗಳಲ್ಲಿರುವ ಶ್ರೀಕೃಷ್ಣ ಕಥೆಯ ಸಾರಾಂಶ. ಮಹಾಭಾರತದಲ್ಲಿ ಶ್ರೀಕೃಷ್ಣನ ಶೈಶವ ಬಾಲ್ಯಗಳ ವೃತ್ತಾಂತ ವಿಲ್ಲ. ಪುರಾಣಗಳಲ್ಲಿ ಭಾರತ ಯುದ್ಧ, ಗೀತೋಸದೇಶ ಮುಂತಾದ ಕಥಾ ಭಾಗಗಳಿಲ್ಲ. ಭಾಗವತದಲ್ಲಿ ಕೃಷ್ಣನ ಸಮಗ್ರಕಥೆ ದೊರೆಯುವುದಾದರೂ ಬಾಲ್ಯದ ಕಥೆಗೇ ಹೆಚ್ಚಿನ ಪ್ರಾಶಸ್ತ್ಯ.ಭಾಗವತ ಹರಿವಂಶಗಳು ರಚಿತ ವಾಗುವ ವೇಳೆಗೆ ವಿಷ್ಣುವೇ ಸರದೈವವೆಂದು ನಂಬುವ ಧರ್ಮವೊಂದು ದೇಶ ದಲ್ಲಿ ವ್ಯಾಪಿಸಿದ್ದುದರಿಂದ ಇವುಗಳಲ್ಲಿ ವಿಷ್ಣು, ಮತ್ತು ಕೃಷ್ಣ ಮಹಿಮಾ ಪ್ರದರ್ಶಕವಾದ ಅನೇಕ ಕಥೆಗಳು ಸೇರಿಕೊಂಡಿವೆ.
ರಾಧೆ ಶ್ರೀಕೃಷ್ಣನಿಗೆ ಸಮಪ್ರಿಯಳೆನಿಸಿದ ರಾಧಿ ಹೆಸರಿನ ಗೋಪಿಕಾ ಸ್ತ್ರೀಯ ವೃತ್ತಾಂತವು ವಿಷ್ಣು ಪುರಾಣದಲ್ಲಿಯಾಗಲಿ ಭಾಗವತದಲ್ಲಿಯಾಗಲಿ ಇಲ್ಲ; ಮಹಾಭಾರತ, ಹರಿವಂಶಗಳಲ್ಲಿಯೂ ಇಲ್ಲ. ಆದರೆ ಇಂದು ಜನಮಾನ್ಯವಾದ ಕೃಷ್ಣ ಕಥೆಯಲ್ಲಿ ರಾಧೆ ಸುಪ್ರತಿಸ್ಠಿತಳಾಗಿ “ರಾಧಾ ಮಾಧವ‘ ರೆಂದು ಆಕೆಯ ಹೆಸರನ್ನು ದೇವರ ಹೆಸರಿನೊಂದಿಗೇ ನೇರಿಸಿಹೇಳುವುದಲ್ಲದೆ ಕೃಷ್ಣಭಕ್ತರು ರಾಧೆಯ ಪೂಜೆಯನ್ನೂ ಬಹಳ ಭಕ್ತಿಯಿಂದ ಮಾಡುತ್ತಾರೆ. ಜಯದೇವ ಕನಿಯು ತನ್ನ “ಗೀತ ಗೋವಿಂದ? ದಲ್ಲಿ ರಾಧಾಕೃಷ್ಣರ ಪ್ರೇಮವನ್ನು ವರ್ಣಿಸಿದ್ದಾನೆ. ಬಹುಶಃ ಆತನಿಗಿಂತ ಮುಂಚೆ, ಬ್ರಹ್ಮ ವೈವರ್ತ ಪುರಾಣದಲ್ಲಿ ಈ ಕಥೆ ಬಂದಿದೆ. ಮೂಲ ಬ್ರಹ್ಮ ವೈವರ್ತ ಪುರಾಣವು ನಷ್ಟನಾಗಿ ಹೋಗಿದೆಯೆಂದೂ ಈಗ ಆ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಗ್ರಂಥವು ಆಧುನಿಕನಾದುದೆಂದೂ ಒಂದು ಮತ ವಿದೆ. ಈ ಪುರಾಣದಲ್ಲಿ ಬ್ರಹ್ಮಕಾಂಡ, ವ್ರಕೃತಿಕಾಂಡ, ಗಣೇಶಕಾಂಡ ಮತ್ತು ಕೃಷ್ಣ ಜನ್ಮಕಾಂಡ ಎಂಬ ನಾಲ್ಕು ಕಾಂಡಗಳಿವೆ. ಮೊದಲನೆ ಯದರಲ್ಲಿ ಬ್ರಹ್ಮ ಸೃಷ್ಟಿ ವ್ಯ ತ್ತಾಂತವಿದೆ. ಇಲ್ಲಿ ಕೃಷ್ಣನೇ ನರಬ್ರಹ್ಮನೆಂಬ ಸೂಚನೆಯಿದೆ.
ಮುಂದುವರೆಯುವುದು…