• 22 ನವೆಂಬರ್ 2024

11 ರಾಜ್ಯಗಳನ್ನು ಸಂಪರ್ಕಿಸುವ 9 ವಂದೇ ಭಾರತ್ ರೈಲುಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

 11 ರಾಜ್ಯಗಳನ್ನು ಸಂಪರ್ಕಿಸುವ 9 ವಂದೇ ಭಾರತ್ ರೈಲುಳಿಗೆ ಪ್ರಧಾನಿ ಮೋದಿಯಿಂದ ಚಾಲನೆ
Digiqole Ad

11 ರಾಜ್ಯಗಳನ್ನು ಸಂಪರ್ಕಿಸುವ 9 ವಂದೇ ಭಾರತ್ ರೈಲುಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಸಂಚರಿಸಲಿರುವ 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಇಂದು ಮಧ್ಯಾಹ್ನ 12:30ಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ 11 ರಾಜ್ಯಗಳಲ್ಲಿ ಸಂಚರಿಸುವ 9 ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಿದ್ದಾರೆ.

ಭಾರತೀಯ ರೈಲ್ವೆ ಒಂದೇ ಬಾರಿಗೆ ಒಂಬತ್ತು ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿದ್ದು ಇದೇ ಮೊದಲು. “ರೈಲಿನ ವೇಗ, ಮೂಲಸೌಕರ್ಯ ಅಭಿವೃದ್ಧಿಯ ಪ್ರಮಾಣವು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ತಕ್ಕಂತಿದೆ. ಇಂದು ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಕೇರಳ, ಒಡಿಶಾ, ಜಾರ್ಖಂಡ್ ಮತ್ತು ಗುಜರಾತ್‌ನ ಜನರು ಈ ಸೌಲಭ್ಯವನ್ನು ಪಡೆಯುತ್ತಾರೆ. ಈ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶದ ಹೊಸ ಶಕ್ತಿಯನ್ನು ಬಿಂಬಿಸುತ್ತವೆ” ಎಂದು ಪ್ರಧಾನಿ ಹೇಳಿದರು.ಭಾರತೀಯ ರೈಲ್ವೆ ಇಲಾಖೆಯ 25 ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಇಂದು ಇನ್ನೂ ಒಂಬತ್ತು ರೈಲುಗಳನ್ನು ಪ್ರಾರಂಭಿಸುವುದರೊಂದಿಗೆ, ದೇಶಾದ್ಯಂತ ವಂದೇ ಭಾರತ್ ರೈಲುಗಳ ಸಂಖ್ಯೆ 34ಕ್ಕೆ  ಏರಿದೆ.

ಕೇರಳಕ್ಕೆ ಮೊದಲ ಕೇಸರಿ ವಂದೇ ಭಾರತ್ ರೈಲು

ಕೇರಳದ ಕಾಸರಗೋಡು – ತಿರುವನಂತಪುರಂ ಮಾರ್ಗದಲ್ಲಿ ಹೊಸ ಕೇಸರಿ ವಂದೇ ಭಾರತ್ ರೈಲು ಚಲಿಸಲಿದ್ದು, ವಂದೇ ಭಾರತ್ ದಕ್ಷಿಣ ರೈಲ್ವೆ ವಲಯದ ಅಡಿಯಲ್ಲಿ ಈ ಮಾರ್ಗದಲ್ಲಿ ಎರಡನೇ ರೈಲು ಆಗಿರುತ್ತದೆ. ಆದರೆ, ಕೊಟ್ಟಾಯಂ ಬದಲಿಗೆ ಅದು ಆಲಪ್ಪುಝ ಮೂಲಕ ಹೋಗುತ್ತದೆ. ಇನ್ನು, ಕಾಸರಗೋಡು-ತಿರುವನಂತಪುರಂ ಮಾರ್ಗದಲ್ಲಿ ಎರಡನೇ ವಂದೇ ಭಾರತ್ ಅನ್ನು ಪರಿಚಯಿಸಲಾಗಿದೆ . ಏಕೆಂದರೆ ಇದು ಪ್ರಾರಂಭವಾದಾಗಿನಿಂದ 170% ಕ್ಕಿಂತ ಹೆಚ್ಚಿನ ಮೊದಲ ರೈಲಿನಲ್ಲಿ ಹೆಚ್ಚಿನ ಆಕ್ಯುಪೆನ್ಸಿಯನ್ನು ಹೊಂದಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್, 160 kmph ಸಾಮರ್ಥ್ಯವಿರುವ ಸೆಮಿ ಹೈ – ಸ್ಪೀಡ್‌ ರೈಲಾಗಿದ್ದು, ಹವಾನಿಯಂತ್ರಿತ ಚೇರ್ ಕಾರ್ ರೈಲು ಸೇವೆಯಾಗಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ