• 8 ಸೆಪ್ಟೆಂಬರ್ 2024

ರಾಜ್ಯ ಸಾರಿಗೆ ನೌಕರಿಗೆ ಸಿಹಿಸುದ್ದಿ : ಅಪಘಾತ ರಹಿತ ಚಾಲನೆಗ ‘ಮಾಸಿಕ ಭತ್ಯೆ’ 10 ಪಟ್ಟು ಹೆಚ್ಚಳ

 ರಾಜ್ಯ ಸಾರಿಗೆ ನೌಕರಿಗೆ ಸಿಹಿಸುದ್ದಿ : ಅಪಘಾತ ರಹಿತ ಚಾಲನೆಗ ‘ಮಾಸಿಕ ಭತ್ಯೆ’ 10 ಪಟ್ಟು ಹೆಚ್ಚಳ
Digiqole Ad

ರಾಜ್ಯ ಸಾರಿಗೆ ನೌಕರಿಗೆ ಸಿಹಿಸುದ್ದಿ : ಅಪಘಾತ ರಹಿತ ಚಾಲನೆಗ ‘ಮಾಸಿಕ ಭತ್ಯೆ’ 10 ಪಟ್ಟು ಹೆಚ್ಚಳ!

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಸಿಬ್ಬಂದಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಹಿಸುದ್ದಿ ನೀಡಿದ್ದಾರೆ. ಅಪಘಾತ ರಹಿತ ಚಾಲನೆಗಾಗಿ ನೀಡುವಂತ ಭತ್ಯೆಯನ್ನು 10 ಪಟ್ಟು ಹೆಚ್ಚಳ ಮಾಡೋದಾಗಿ ತಿಳಿಸಿದ್ದಾರೆ.

ಐದು ವರ್ಷಗಳಿಂದ ಅಪಘಾತರಹಿತವಾಗಿ ವಾಹನ ಚಾಲನೆ ಮಾಡಿ ಬೆಳ್ಳಿ ಪದಕ ವಿಚೇತ ಚಾಲಕರ ಮಾಸಿಕ ಭತ್ಯೆಯನ್ನು ಮಾಸಿಕ ರೂ.50ರಿಂದ ರೂ.500ಕ್ಕೆ ಹೆಚ್ಚಿಸಲಾಗುತ್ತದೆ. 15 ವರ್ಷಗಳ ಅಪಘಾತ ರಹಿತ ಚಾಲನೆಗಾಗಿ ಮುಖ್ಯಮಂತ್ರಿ ಬಂಗಾರ ಪದಕ ವಿಚೇತ ಚಾಲಕರಿಗೆ ನೀಡಲಾಗುತ್ತಿರುವಂತ ಮಾಸಿಕ ಭತ್ಯೆಯನ್ನು ರೂ.100ರಿಂದ ರೂ.1000ಕ್ಕೆ ಹೆಚ್ಚಿಸಲಾಗುವುದು ಅಂತ ತಿಳಿಸಿದ್ದಾರೆ.

ನೌಕರರು ಸಂಸ್ಥೆಯ ಸೇವೆಯಲ್ಲಿದ್ದಾಗ ಕರ್ತವ್ಯ ನಿರತ, ಖಾಸಗಿ ಅಪಘಾತದಿಂದ ಮೃತಪಟ್ಟಲ್ಲಿ ಮತ್ತು ಅಂಗನ್ಯೂನತೆಗಳಿಗೆ ಒಳಗಾದಲ್ಲಿ ಅವರ ಅವಲಂಬಿತರಿಗೆ, ನೌಕರರಿಗೆ ಗರಿಷ್ಠ ಮೊತ್ತದ ಆರ್ಥಿಕ ಸೌಲಭ್ಯ ಸಿಗುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರೊಂದಿಗೆ ನೌಕರರಿಗೆ ಸಿ.ಎಸ್.ಪಿ ಯೋಜನೆಯಡಿ ಅಪಘಾತ ವಿಮಾ ಸೌಲಭ್ಯವನ್ನು ಎಸ್.ಬಿ.ಐ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡು, ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ,ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಅಪಘಾತ ರಹಿತ ಚಾಲನೆಗಾಗಿ ನೀಡುವ ಚಿನ್ನದ ಪದಕ ವಿಚೇತ ಚಾಲಕರ ಮಾಸಿಕ ಭತ್ಯೆಯನ್ನು ಶೀಘ್ರವೇ ಪರಿಷ್ಕರಣೆ ಮಾಡಲಾಗುತ್ತದೆ. 10 ಪಟ್ಟು ಹೆಚ್ಚಳ ಮಾಡಲಾಗುತ್ತದೆ ಎಂದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ