• 8 ಸೆಪ್ಟೆಂಬರ್ 2024

ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಸಂಚಾರಕ್ಕೆ ಚಾಲನೆ

 ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಸಂಚಾರಕ್ಕೆ ಚಾಲನೆ
Digiqole Ad

ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಸಂಚಾರಕ್ಕೆ ಚಾಲನೆ

ಹೊಗೆಯ ಬದಲು ಕೇವಲ ನೀರನ್ನು ಹೊರಸೂಸುವ ಭಾರತದ ಮೊದಲ ಹಸಿರು ಜಲಜನಕ ಚಾಲಿತ ಬಸ್‌ಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ..

ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಆಯ್ದ ಮಾರ್ಗಗಳಲ್ಲಿ ಒಟ್ಟು 15 ಹಸಿರು ಹೈಡ್ರೋಜನ್‌ನಿಂದ ಚಾಲಿತವಾಗುವ ಬಸ್‌ಗಳನ್ನು ಪ್ರಾಯೋಗಿಕವಾಗಿ ಸಂಚರಿಸಲಿದ್ದು, ಇಂಡಿಯನ್ ಆಯಿಲ್‌ ಕಂಪನಿಯ ಪ್ರಯತ್ನಗಳ ಭಾಗವಾಗಿ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ. ಫರಿದಾಬಾದ್‌ನಲ್ಲಿರುವ ಇಂಡಿಯನ್ ಆಯಿಲ್‌ ಆರ್ ಅಂಡ್ ಡಿ ಕ್ಯಾಂಪಸ್‌ನಲ್ಲಿ ಹೈಡ್ರೋಜನ್‌ ಬಸ್ ಗಳಿಗೆ ಇಂಧನ ತುಂಬುವ ಸೌಲಭ್ಯವನ್ನು ಸ್ಥಾಪಿಸಲಾಗಿದ್ದು, ಇದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗಿದೆ.

ಯೋಜನೆಯ ವಿವರಗಳನ್ನು ಪ್ರಸ್ತಾಪಿಸಿದ ಇಂಡಿಯನ್ ಆಯಿಲ್ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವರ್ಷಾಂತ್ಯದೊಳಗೆ ಇನ್ನೂ 13 ಬಸ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ದೆಹಲಿ, ಹರಿಯಾಣ ಮತ್ತು ಯುಪಿಯಲ್ಲಿ ಗುರುತಿಸಲಾದ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್‌ನಿಂದ ಚಾಲಿತವಾಗಿರುವ 15 ಇಂಧನ ಸೆಲ್ ಬಸ್‌ಗಳ ಕಾರ್ಯಾಚರಣೆಯ ಪ್ರಯೋಗಗಳನ್ನು IOC ಕೈಗೊಳ್ಳಲಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, 2 ಇಂಧನ ಸೆಲ್ ಬಸ್‌ಗಳ ಮೊದಲ ಸೆಟ್ ಅನ್ನು ಸೋಮವಾರ ಪ್ರಾರಂಭಿಸಲಾಯಿತು.

ದೇಶೀಯ ಬೇಡಿಕೆಯು ಪ್ರಸ್ತುತ 6 ಮಿಲಿಯನ್ ಟನ್‌ಗಳಿಂದ 2050 ರ ವೇಳೆಗೆ 25 ರಿಂದ 28 MT ಗೆ ನಾಲ್ಕು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಸಚಿವಾಲಯದ ಅಡಿಯಲ್ಲಿ PSU ಗಳು 2030 ರ ವೇಳೆಗೆ ಸುಮಾರು 1 MMTPA ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸಲು ಸಾಧ್ಯವಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ